ವಿಶ್ವದ ಪ್ರಖ್ಯಾತ ಅತೀಂದ್ರಿಯ ಶಕ್ತಿ ಎನಿಸಿಕೊಂಡಿರುವ ಬಲ್ಗೇರಿಯಾದ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಈಗ ಮತ್ತೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿವೆ. 2026ರಲ್ಲಿ ಜಗತ್ತು ತೀವ್ರ ಹಣದ ಬಿಕ್ಕಟ್ಟನ್ನು ಎದುರಿಸಲಿದೆ ಮತ್ತು ಕಾಗದದ ನೋಟುಗಳ ಮೌಲ್ಯ ಕುಸಿಯಲಿದೆ ಎಂದು ಅವರು ದಶಕಗಳ ಹಿಂದೆಯೇ ನುಡಿದಿದ್ದ ಮಾತುಗಳು ಈಗಿನ ಆರ್ಥಿಕ ಪರಿಸ್ಥಿತಿಗೆ ತಾಳೆಯಾಗುತ್ತಿರುವುದು ಹೂಡಿಕೆದಾರರಲ್ಲಿ ಆತಂಕ ಮತ್ತು ಆಶ್ಚರ್ಯ ಮೂಡಿಸಿದೆ.
ನೋಟುಗಳ ಮೌಲ್ಯ ಕುಸಿತ ಮತ್ತು ಲೋಹಗಳ ಯುಗ ಬಾಬಾ ವಂಗಾ ಅವರ ಭವಿಷ್ಯವಾಣಿಯ ಪ್ರಕಾರ, ಬ್ಯಾಂಕುಗಳು ನೀಡುವ ಕಾಗದದ ಕರೆನ್ಸಿ ತನ್ನ ಮೌಲ್ಯವನ್ನು ಕಳೆದುಕೊಳ್ಳಲಿದೆ. ಇಂತಹ ಸಂದರ್ಭದಲ್ಲಿ ಚಿನ್ನ, ಬೆಳ್ಳಿ ಮತ್ತು ತಾಮ್ರ ಮಾತ್ರ ಜನರ ಪಾಲಿಗೆ ಸುರಕ್ಷಿತ ಹೂಡಿಕೆಯ ಮಾರ್ಗಗಳಾಗಲಿವೆ ಎಂದು ಅವರು ಹೇಳಿದ್ದರು. ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ, ಕಳೆದ ಒಂದು ವರ್ಷದಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಊಹೆಗೂ ನಿಲುಕದ ಮಟ್ಟಕ್ಕೆ ಏರಿಕೆಯಾಗಿರುವುದು ಈ ಭವಿಷ್ಯವಾಣಿಗೆ ಪುಷ್ಟಿ ನೀಡುವಂತಿದೆ.
ದಾಖಲೆ ಬರೆದ ಚಿನ್ನ ಮತ್ತು ಬೆಳ್ಳಿ ದರ ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆಯಲ್ಲಿ ಶೇಕಡಾ 70 ರಷ್ಟು ಏರಿಕೆಯಾಗಿದ್ದು, ಹತ್ತು ಗ್ರಾಂ ಚಿನ್ನದ ದರ ಬರೋಬ್ಬರಿ 1.80 ಲಕ್ಷ ರೂಪಾಯಿಗಳ ಗಡಿ ತಲುಪಿತ್ತು. ಇನ್ನು ಬೆಳ್ಳಿಯಂತೂ ಹೂಡಿಕೆದಾರರಿಗೆ ಬಂಪರ್ ಲಾಭ ನೀಡಿದ್ದು, ಕೆಜಿಗೆ 4 ಲಕ್ಷ ರೂಪಾಯಿ ದಾಟುವ ಮೂಲಕ ಶೇಕಡಾ 160 ರಷ್ಟು ಆದಾಯ ತಂದುಕೊಟ್ಟಿದೆ. ಈ ಹಠಾತ್ ಏರಿಕೆಯು ಬಾಬಾ ವಂಗಾ ಹೇಳಿದ ಲೋಹಗಳ ಪ್ರಾಮುಖ್ಯತೆಯನ್ನು ಸಾಬೀತುಪಡಿಸಿದಂತೆ ತೋರುತ್ತಿದೆ.
2026ರ ಆರಂಭದಲ್ಲೇ ಆರ್ಥಿಕ ಕಂಪನ ಆದರೆ ಜನವರಿ 30ರ ನಂತರ ಮಾರುಕಟ್ಟೆಯಲ್ಲಿ ದಿಢೀರ್ ಬದಲಾವಣೆ ಕಂಡುಬಂದಿದೆ. ಸತತ ಮೂರು ದಿನಗಳ ಕಾಲ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಕುಸಿತ ಉಂಟಾಗಿದ್ದು, ಹೂಡಿಕೆದಾರರನ್ನು ಚಿಂತೆಗೀಡು ಮಾಡಿದೆ. ಇದೇ ಸಮಯದಲ್ಲಿ ಅಮೆರಿಕದ ಡಾಲರ್ ಕೂಡ ದುರ್ಬಲಗೊಳ್ಳುತ್ತಿರುವುದು ಜಾಗತಿಕ ಆರ್ಥಿಕ ಒತ್ತಡದ ಸಂಕೇತವಾಗಿದೆ. ಕೆಲವು ಚಾಣಾಕ್ಷ ಹೂಡಿಕೆದಾರರು ಬೆಲೆ ಇಳಿಕೆಯ ಲಾಭ ಪಡೆಯಲು ಮತ್ತೆ ಚಿನ್ನದ ಖರೀದಿಗೆ ಮುಗಿಬಿದ್ದಿದ್ದಾರೆ.
ಬಾಬಾ ವಂಗಾ ಅವರ ಈ ಭವಿಷ್ಯವಾಣಿ ಸಂಪೂರ್ಣವಾಗಿ ನಿಜವಾಗಲಿದೆಯೇ ಅಥವಾ ಇದು ಮಾರುಕಟ್ಟೆಯ ಸಾಮಾನ್ಯ ಏರಿಳಿತವೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ. ಆದರೆ ಆರ್ಥಿಕ ತಜ್ಞರು ಮಾತ್ರ ಹೂಡಿಕೆದಾರರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಸಲಹೆ ನೀಡುತ್ತಿದ್ದಾರೆ.

