HomeKarnatakaಇಡಿ ಅಧಿಕಾರಿಗಳು ಸುಮ್ಮನೇ ಕರ್ಕೊಂಡು ಬಂದಿದ್ದಾರೆ: ಮಾಜಿ ಸಚಿವ ನಾಗೇಂದ್ರ ಮೊದಲ ಪ್ರತಿಕ್ರಿಯೆ

ಇಡಿ ಅಧಿಕಾರಿಗಳು ಸುಮ್ಮನೇ ಕರ್ಕೊಂಡು ಬಂದಿದ್ದಾರೆ: ಮಾಜಿ ಸಚಿವ ನಾಗೇಂದ್ರ ಮೊದಲ ಪ್ರತಿಕ್ರಿಯೆ

ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ-ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿನ ನಿವಾಸದಿಂದ ಮಾಜಿ ಸಚಿವ ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಶಾಂತಿನಗರದ ಇಡಿ ಕಚೇರಿಯಲ್ಲಿ ಅವರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ.

ಇಡಿ ವಶಕ್ಕೆ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ನಾಗೇಂದ್ರ, ನನಗೇನೂ ಗೊತ್ತಿಲ್ಲ, ಇಡಿಯವರು ಸುಮ್ಮನೇ ಕರ್ಕೊಂಡು ಬಂದಿದ್ದಾರೆ. ನಾನು ಯಾರಿಗೂ ಏನೂ ಕೊಟ್ಟಿಲ್ಲ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮನೆಯಿಂದ ಏಕಾಏಕಿ ಕರ್ಕೊಂಡು ಬಂದಿದ್ದಾರೆ. ನನಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular