HomeIndiaWATCH VIDEO : 10 ಹುದ್ದೆಗೆ 1800 ಯುವಕರಿಂದ ಅರ್ಜಿ ಸಲ್ಲಿಕೆ, ಸಂದರ್ಶನಕ್ಕಾಗಿ ನೂಕುನುಗ್ಗಲು..!

WATCH VIDEO : 10 ಹುದ್ದೆಗೆ 1800 ಯುವಕರಿಂದ ಅರ್ಜಿ ಸಲ್ಲಿಕೆ, ಸಂದರ್ಶನಕ್ಕಾಗಿ ನೂಕುನುಗ್ಗಲು..!

ಗುಜರಾತ್ : ಅಂಕಲೇಶ್ವರದ ಲಾರ್ಡ್ಸ್ ಪ್ಲಾಜಾ ಹೋಟೆಲ್ ನಲ್ಲಿ ಎಂಜಿನಿಯರಿಂಗ್ ಕಂಪನಿ ಆಯೋಜಿಸಿದ್ದ ಸಂದರ್ಶನಕ್ಕಾಗಿ ನೂರಾರು ಉದ್ಯೋಗಾಕಾಂಕ್ಷಿಗಳು ಜಮಾಯಿಸಿದ್ದರಿಂದ ಭಾರಿ ನೂಕು ನುಗ್ಗಲಾಗಿದೆ.

ಕೇವಲ 10 ಹುದ್ದೆಗಳಿಗೆ 1800 ಯುವಕರು ಅರ್ಜಿ ಸಲ್ಲಿಕೆ ಮಾಡಿದ್ದು, ಸಂದರ್ಶನದ ವೇಳೆ ನೂಕು ನುಗ್ಗಲು-ಕಾಲ್ತುಳಿತ ಉಂಟಾಗಿದೆ. ಪರಿಣಾಮ ರೇಲಿಂಗ್ ಕೂಡ ಕುಸಿತಿದ್ದು, ಇದು ವ್ಯಾಪಕ ಕಳವಳವನ್ನು ಹುಟ್ಟುಹಾಕಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಗಂಭೀರ ಗಾಯಗಳಾಗಿಲ್ಲ. ಇದು ನಮ್ಮ ದೇಶದಲ್ಲಿರುವ ನಿರುದ್ಯೋಗದ ಸಮಸ್ಯೆಗೆ ಜ್ವಲಂತ ಸಾಕ್ಷಿ ಎಂದು ನೆಟ್ಟಿಗರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.

10 ಸ್ಥಾನಗಳಿಗೆ 1,800 ಉದ್ಯೋಗಾಕಾಂಕ್ಷಿಗಳು ಹಾಜರಾಗಿದ್ದರಿಂದ ಅಂಕಲೇಶ್ವರದಲ್ಲಿ ಈ ಘಟನೆ ನಡೆದಿದೆ. ವೈರಲ್ ವೀಡಿಯೊಗೆ ಪ್ರತಿಕ್ರಿಯಿಸಿದ ಗುಜರಾತ್ ಗೃಹ ಸಚಿವ ಹರ್ಷ್ ಸಾಂಘವಿ, ರಾಜ್ಯವನ್ನು ದೂಷಿಸಲು ಈ ವಿಡಿಯೋ ತುಣುಕನ್ನು ಬಳಸಲಾಗುತ್ತಿದೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular