ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಜಿ ಸಲ್ಲಿಸಿ, ಇನ್ನೂ ದಾಖಲೆ ಪರಿಶೀಲನೆ ಮಾಡಿಸಿಕೊಳ್ಳದ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮತ್ತೊಂದು ಮಹತ್ವದ ಅವಕಾಶ ನೀಡಿದೆ. ಅಗತ್ಯ ಮೂಲ ದಾಖಲೆಗಳ ಸಮೇತ ಮೇ 21 ರ ಒಳಗೆ ಹತ್ತಿರದ ಸರ್ಕಾರಿ ಪಿಯು ಕಾಲೇಜುಗಳಿಗೆ ಭೇಟಿ ನೀಡಿ ದಾಖಲೆ ಪರಿಶೀಲನೆ ಮಾಡಿಸಿಕೊಳ್ಳುವಂತೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ನ್ನೂ ದಾಖಲೆಗಳನ್ನು ಪರಿಶೀಲನೆ ಮಾಡಿಕೊಳ್ಳದ ಅಭ್ಯರ್ಥಿಗಳು ಅಗತ್ಯ ಮೂಲ ದಾಖಲೆಗಳ ಸಮೇತ ಹತ್ತಿರದ ಸರ್ಕಾರಿ ಪಿಯು ಕಾಲೇಜುಗಳಿಗೆ ಮೇ 21ರೊಳಗೆ ಭೇಟಿ ನೀಡಿ ಪರಿಶೀಲನೆ ಮಾಡಿಸಿಕೊಳ್ಳಲು #KEA ಸೂಚಿಸಿದೆ. ಅಭ್ಯರ್ಥಿಗಳ Claims Certificate ನಲ್ಲಿ Claims not Verified ಎಂದು ಮುದ್ರಿತವಾಗಿರುವ ಅಭ್ಯರ್ಥಿಗಳು ಮಾತ್ರ ಪರಿಶೀಲನೆಗೆ ಹಾಜರಾಗಬೇಕು. ಈ ಹಿಂದೆ ಅವಕಾಶ ನೀಡಿದ್ದಾಗಲೂ ಕೆಲವು ಅಭ್ಯರ್ಥಿಗಳು ತಮ್ಮ ಕಾಲೇಜುಗಳಲ್ಲಿ ದಾಖಲೆ ಪರಿಶೀಲನೆ ಮಾಡಿಕೊಂಡಿರುವುದಿಲ್ಲ. ಹೀಗಾಗಿ ಮತ್ತೊಮ್ಮೆ ಅವಕಾಶ ನೀಡಲಾಗಿದೆ. Claims Certificate ನಲ್ಲಿ Claimed and Verified ಎಂದು ಮುದ್ರಿತವಾಗಿರುವವರು ದಾಖಲೆ ಪರಿಶೀಲನೆಗೆ ಹೋಗುವ ಅಗತ್ಯ ಇರುವುದಿಲ್ಲ. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ SATS ಮೂಲಕ ವ್ಯಾಸಂಗದ ವಿವರಗಳನ್ನು ಪಡೆದು Claims Certificate ನಲ್ಲಿ Successfully Verified ಎಂದು ಮುಂದ್ರಿತವಾಗಿರುವವರು ಕೂಡ ಪರಿಶೀಲನೆಗೆ ಹೋಗುವ ಅಗತ್ಯ ಇರುವುದಿಲ್ಲ. ಕನ್ನಡ ಮಾಧ್ಯಮ ವ್ಯಾಸಂಗ, ಗ್ರಾಮೀಣ ವ್ಯಾಸಂಗ, ಭಾಷಾ ಅಲ್ಪಸಂಖ್ಯಾತ, ಧಾರ್ಮಿಕ ಅಲ್ಪಸಂಖ್ಯಾತ ಮೀಸಲಾತಿ ಕ್ಲೇಮ್ ಮಾಡಿ, ಕ್ಲೇಮ್ಸ್ ಸರ್ಟಿಫಿಕೇಟ್ ನಲ್ಲಿ Not verified ಎಂದು ಮುದ್ರಿತವಾಗಿರುವವರು ಮಾತ್ರ ಕಾಲೇಜುಗಳಿಗೆ ಹೋಗಬೇಕು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.

