HomeLatest NewsBIG NEWS : 'ರಾಜ್ಯ ಸರ್ಕಾರಿ' ನೌಕರರೇ ಗಮನಿಸಿ : ‘ಕುಟುಂಬ ನಿವೃತ್ತಿ ವೇತನ’ ನಿಯಮಗಳ...

BIG NEWS : ‘ರಾಜ್ಯ ಸರ್ಕಾರಿ’ ನೌಕರರೇ ಗಮನಿಸಿ : ‘ಕುಟುಂಬ ನಿವೃತ್ತಿ ವೇತನ’ ನಿಯಮಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು : ಕುಟುಂಬ ನಿವೃತ್ತಿ ವೇತನ (Family Pension) ಎಂದರೆ, ನಿವೃತ್ತಿ ಹೊಂದಿದ ಅಥವಾ ಸೇವೆಯಲ್ಲಿರುವಾಗ ಮರಣ ಹೊಂದಿದ ಸರ್ಕಾರಿ ನೌಕರರ ಅವಲಂಬಿತ ಕುಟುಂಬ ಸದಸ್ಯರಿಗೆ (ವಿಧವೆ, ಮಕ್ಕಳು, ಪೋಷಕರು) ಸರ್ಕಾರದಿಂದ ಆರ್ಥಿಕ ಭದ್ರತೆಗಾಗಿ ನೀಡಲಾಗುವ ಮಾಸಿಕ ಆರ್ಥಿಕ ನೆರವು. ಕರ್ನಾಟಕದಲ್ಲಿ, ಈ ವೇತನವನ್ನು ನೌಕರನ ಕೊನೆಯ ಸಂಬಳದ ಶೇ. 30ರಷ್ಟು ಲೆಕ್ಕಾಚಾರ ಮಾಡಲಾಗುತ್ತದೆ. ಈ ಕುರಿತುಇಲ್ಲಿದೆ ಮಾಹಿತಿ.

ಈ ನಿಯಮಗಳು
(i) 1998ರ ಏಪ್ರಿಲ್ 1ನೇ ದಿನಾಂಕದಂದು ಅಥವಾ ಆ ತರುವಾಯ ನಿವೃತ್ತಿ ವೇತನವುಳ್ಳ ಹುದ್ದೆಗಳಿಗೆ ನಿಯತವಾಗಿ ನೇಮಕಗೊಂಡ ಎಲ್ಲ ಸರ್ಕಾರಿ ನೌಕರರಿಗೆ;
(ii) 1998 ລ້ 1 ಹುದ್ದೆಗಳಿಗೆ ನಿಯತವಾಗಿ ನೇಮಕಗೊಂಡಿದ್ದು 1998ರ ಏಪ್ರಿಲ್ 1 ನೇ ದಿನಾಂಕದಂದು ಆ ಹುದ್ದೆಯನ್ನು ಧಾರಣ ಮಾಡಿದ್ದ ಮತ್ತು ಕರ್ನಾಟಕ ಸಿವಿಲ್ ಸೇವಾ ನಿಯಮಗಳಲ್ಲಿ ನಿರೂಪಿಸಲಾದ ನಿವೃತ್ತಿ ವೇತನ ನಿಯಮಗಳ ಮೂಲಕ ನಿಯಂತ್ರಿಸಲ್ಪಡುವ ಎಲ್ಲ ಸರ್ಕಾರಿ ನೌಕರರಿಗೆ,
ಅನ್ವಯವಾಗತಕ್ಕದ್ದು.

ಈ ನಿಯಮಗಳು
ನೌಕರರಿಗೆ; (2) 1998 2 1
(ಬಿ) ಸಾದಿಲ್ವಾರು ನಿಧಿಗಳಿಂದ ಸಂದಾಯ ಪಡೆಯುವ ವ್ಯಕ್ತಿಗಳಿಗೆ;
(ಸಿ) ವರ್ಕ್ ಚಾರ್ಜ್ ಸಿಬ್ಬಂದಿಗೆ;
(ಡಿ) ಸಾಂದರ್ಭಿಕ ಕೆಲಸಗಾರರಿಗೆ;
(ಇ) (1) ನಿವೃತ್ತಿಯ ಅಥವಾ ವಯೋ ನಿವೃತ್ತಿಯ ನಿವೃತ್ತಿ ವೇತನದ ಮೇಲೆ 1998ರ ಏಪ್ರಿಲ್ 1 ನೇ ದಿನಾಂಕಕ್ಕೆ ಮುಂಚೆ ನಿವೃತ್ತರಾದ ಆದರೆ ಆ ತರುವಾಯ ಆ ದಿನಾಂಕದಂದು ಪುನರ್ ನೇಮಕಗೊಂಡಿರಬಹುದಾದ ಸರ್ಕಾರಿ ನೌಕರರಿಗೆ;
(ii) ನಿವೃತ್ತಿ / ಸೇವಾ | ಅಶಕ್ತತಾ ನಿವೃತ್ತಿ ವೇತನದೊಂದಿಗೆ ನಿವೃತ್ತರಾದ, ಆದರೆ 1998ರ ಏಪ್ರಿಲ್ 1 ನೇ ದಿನಾಂಕದಂದು ಅಥವಾ ಆ ತರುವಾಯ ಸರ್ಕಾರದ ಅಡಿಯಲ್ಲಿನ ಸಿವಿಲ್ ಹುದ್ದೆಗಳಲ್ಲಿ, ಪುನರ್ನೇಮಕಗೊಂಡಿರಬಹುದಾದ ರಕ್ಷಣಾ ಸೇವೆಗಳ ಸೇನಾ ಸಿಬ್ಬಂದಿಯು, ಪುನರ್ ನೇಮಕದ ದಿನಾಂಕದಂದು ಅವರನ್ನು ಪುನರ್ನೇಮಕ ಮಾಡಲಾದಂಥ ಸಿವಿಲ್ ಸೇವಾ ವಿಭಾಗದಲ್ಲಿನ ಹುದ್ದೆಗಳ ಪ್ರವರ್ಗಗಳಿಗೆ ಅನ್ವಯವಾಗಬಹುದಾದ ವಯೋ ನಿವೃತ್ತಿಯ ವಯಸ್ಸನ್ನು ತಲುಪಿರುವಂಥ ಸೈನಿಕ ಸಿಬ್ಬಂದಿಗೆ;
(ಎಫ್) ‘ಕರಾರಿನ ಮೇಲೆ ನೇಮಕಗೊಂಡ ಅಧಿಕಾರಿಗಳಿಗೆ;
(ಜಿ) ಸ್ಥಳೀಯ ಅಭ್ಯರ್ಥಿಗಳಿಗೆ,
ಅನ್ವಯವಾಗತಕ್ಕದ್ದಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ವೇತನ) ನಿಯಮಗಳು, 1964 ನ್ನು ರದ್ದುಪಡಿಸಿ ರಚಿಸಲು ಉದ್ದೇಶಿಸಿರುವ ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ವೇತನ) ನಿಯಮಗಳು, 2002 ರ ನಿಯಮಗಳ ಕರಡನ್ನು ಅದರಿಂದ ತೊಂದರೆಗೊಳಗಾಗಬಹುದಾದ ಸಂಭವವಿರುವ ಎಲ್ಲ ವ್ಯಕ್ತಿಗಳಿಂದ ಅಧಿಕೃತ ರಾಜ್ಯಪತ್ರದಲ್ಲಿ ಆ ಕರಡು ಪ್ರಕಟವಾದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ಆಕ್ಷೇಪಣೆಗಳು ಸಲಹೆಗಳನ್ನು ಆಹ್ವಾನಿಸಿ ದಿನಾಂಕ 15ನೇ ನವೆಂಬರ್, 2002 ರಂದು ಕರ್ನಾಟಕ ರಾಜ್ಯಪತ್ರದ ಭಾಗ-4ಎ ರಲ್ಲಿ ಅಧಿಸೂಚನೆ ಸಂಖ್ಯೆ ಅಇ 4 ಸನಿತಿ 2000, ದಿನಾಂಕ 11-11-2002 ನ್ನು ಕರ್ನಾಟಕ ನಾಗರೀಕ ಸೇವಾ ಅಧಿನಿಯಮ 1978 ರ (1990 ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ಪ್ರಕರಣ 8 ರೊಂದಿಗೆ ಓದಿಕೊಳ್ಳಲಾದ 3ನೇ ಪ್ರಕರಣದ (2) ನೇ ಉಪ ಪ್ರಕರಣದ ಖಂಡ (ಎ)ರ ಮೂಲಕ ಅಗತ್ಯಪಡಿಸಲಾದಂತೆ ಪ್ರಕಟಿಸಲಾಗಿರುವುದರಿಂದ:
ಸದರಿ ರಾಜ್ಯಪತ್ರವನ್ನು ದಿನಾಂಕ 15-11-2002 ರಂದು ಸಾರ್ವಜನಿಕರಿಗೆ ದೊರೆಯುವಂತೆ ಮಾಡಲಾಗಿದ್ದುದರಿಂದ ಮತ್ತು ಇದರ ಬಗ್ಗೆ ರಾಜ್ಯ ಸರ್ಕಾರಕ್ಕೆ ಯಾವುದೇ ರೀತಿಯ ಆಕ್ಷೇಪಣೆಗಳು / ಸಲಹೆಗಳು ಬಂದಿರುವುದಿಲ್ಲವಾದ್ದರಿಂದ:

ಈಗ 1978ರ ಕರ್ನಾಟಕ ರಾಜ್ಯ ನಾಗರೀಕ ಸೇವಾ ಅಧಿನಿಯಮದ (1990ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ಪ್ರಕರಣ 8 ರೊಂದಿಗೆ ಓದಿಕೊಳ್ಳಲಾದ 3ನೇ ಪ್ರಕರಣದ (1)ನೇ ಉಪ ಪ್ರಕರಣದಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಗಿನ ನಿಯಮಗಳನ್ನು ಈ ಮೂಲಕ ಮಾಡುತ್ತದೆ, ಎಂದರೆ:-
ನಿಯಮಗಳು

ಶೀರ್ಷಿಕೆ ಮತ್ತು ಪ್ರಾರಂಭ. – (1) ಈ ನಿಯಮಗಳನ್ನು ಕರ್ನಾಟಕ
ಸರ್ಕಾರಿ ನೌಕರರ (ಕುಟುಂಬ ನಿವೃತ್ತಿ ವೇತನ) ನಿಯಮಗಳು, 2002 ಎಂದು ಕರೆಯತಕ್ಕದ್ದು.
(2) ಇವು 1998ರ ಏಪ್ರಿಲ್ ಒಂದನೇ ದಿನಾಂಕದಿಂದ ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು.
3

ಇಲ್ಲಿ ಇನ್ನು ಮುಂದೆ ಒಳಗೊಂಡಿರುವ ಉಪಬಂಧಗಳಿಗೆ ಒಳಪಟ್ಟು, ಸರ್ಕಾರಿ ನೌಕರನು ಒಂದು ವರ್ಷಕ್ಕಿಂತ ಕಡಿಮೆ ಇಲ್ಲದ ಅವಧಿಯವರೆಗೆ ನಿರಂತರ ಸೇವೆಯನ್ನು ಸಲ್ಲಿಸಿ, 1998ರ ಏಪ್ರಿಲ್ 1 ನೇ ದಿನಾಂಕದಂದು ಅಥವಾ ಆ ತರುವಾಯ, ಸೇವೆಯಲ್ಲಿರುವಾಗ ಮರಣ ಹೊಂದಿದರೆ ಅಥವಾ ನಿವೃತ್ತಿಯಾದ ನಂತರ ಮೃತನಾದರೆ, ಈ ಕೆಳಕಂಡ ಕೋಷ್ಟಕದಲ್ಲಿ ನಿರ್ದಿಷ್ಟಪಡಿಸಲಾದ ಶ್ರೇಣಿಗೆ ಅನುಸಾರವಾಗಿ ಕುಟುಂಬ ನಿವೃತ್ತಿ ವೇತನವನ್ನು ಮಂಜೂರು ಮಾಡತಕ್ಕದ್ದು:

ಸರ್ಕಾರಿ ನೌಕರನ ವೇತನ
1
ಮಾಸಿಕ ಕುಟುಂಬ ನಿವೃತ್ತಿ ವೇತನ
8000 ಅದಕ್ಕೂ ಮೇಲ್ಪಟ್ಟು ರೂಪಾಯಿಗಳು ಮತ್ತು
ಕನಿಷ್ಠ 1600 ರೂಪಾಯಿಗಳು ಮತ್ತು ಗರಿಷ್ಠ 3381 ರೂಪಾಯಿಗಳಿಗೆ ಒಳಪಟ್ಟು ವೇತನದ ಶೇಕಡಾ 15 ರಷ್ಟು
4050 ರೂಪಾಯಿಗಳು ಮತ್ತು ಅದಕ್ಕೂ ಮೇಲ್ಪಟ್ಟು, ಆದರೆ 8000 ರೂಪಾಯಿಗಳಿಗಿಂತ ಕಡಿಮೆ ಇದ್ದಾಗ
2
ಕನಿಷ್ಠ 1215 ರೂಪಾಯಿಗಳಿಗೆ ಒಳಪಟ್ಟು ವೇತನದ ಶೇಕಡಾ 20 ರಷ್ಟು
3
4050 ರೂಪಾಯಿಗಳಿಗಿಂತ ಕಡಿಮೆ ಇದ್ದಾಗ
ಕನಿಷ್ಠ 1055 ರೂಪಾಯಿಗಳಿಗೆ ಒಳಪಟ್ಟು ವೇತನದ ಶೇಕಡಾ 30 ರಷ್ಟು
(2) ಈ ನಿಯಮದ ಉದ್ದೇಶಕ್ಕಾಗಿ ವೇತನ ಎಂದರೆ ಕರ್ನಾಟಕ ಸಿವಿಲ್ ಸೇವಾ ನಿಯಮಗಳ 8 ನೇ ನಿಯಮದ (32) ನೇ ಉಪನಿಯಮದಲ್ಲಿ ಪರಿಭಾಷಿಸಲಾದಂತೆ, ಸರ್ಕಾರಿ ನೌಕರನು ಸೇವೆಯಲ್ಲಿದ್ದಾಗ ಮರಣ ಹೊಂದಿದ್ದಲ್ಲಿ ಮರಣದ ದಿನಾಂಕದಂದು ಅಥವಾ ಅವನ ನಿವೃತ್ತಿಗೆ ನಿಕಟ ಪೂರ್ವದಲ್ಲಿ ಅವನು ಪಡೆಯುತ್ತಿದ್ದಂಥ ವೇತನ. ಒಬ್ಬ ವ್ಯಕ್ತಿಯು ಸೇವೆಯಲ್ಲಿರುವಾಗ ಮರಣ ಹೊಂದಿದ್ದಲ್ಲಿ ಅವನ ಮರಣದ ದಿನಾಂಕದಂದು ಅಥವಾ ಅವನ ನಿವೃತ್ತಿಗೆ ನಿಕಟ ಪೂರ್ವದಲ್ಲಿ ಅವನು ಭತ್ಯೆ ಸಹಿತ ರಜೆಯ ಮೇಲೆ ಕರ್ತವ್ಯಕ್ಕೆ ಗೈರುಹಾಜರಾಗಿದ್ದರೆ, ಅವನ ವೇತನವನ್ನು, ಅವನು ಕರ್ತವ್ಯಕ್ಕೆ ಗೈರುಹಾಜರಾಗಿಲ್ಲದಿದ್ದರೆ, ವೇತನವು ಎಷ್ಟಾಗಬಹುದಾಗಿತ್ತೋ ಅಷ್ಟೆಂದು ಲೆಕ್ಕಕ್ಕೆ ತೆಗೆದುಕೊಳ್ಳತಕ್ಕದ್ದು.

    For Latest News Updates, Join Our Whatsapp Community🚩
    ranjith
    ranjith
    Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
    RELATED ARTICLES

    LEAVE A REPLY

    Please enter your comment!
    Please enter your name here

    Most Popular