ಉಡುಪಿ: ಕೋರ್ಟ್ ನಲ್ಲಿ ಸಾಕ್ಷಿ ಹೇಳಿದ್ದಕ್ಕೆ ತಲ್ವಾರ್ ಬೀಸಿ ಕೊಲೆಗೆ ಯತ್ನಿಸಿ ಜೀವ ಬೆದರಿಕೆ ಹಾಕಲಾಗಿದೆ. ಕಾರ್ಕಳ ನೀರೆ ಗ್ರಾಮದ ಬೈಲೂರು ಪಂಚಾಯಿತಿ ಕಟ್ಟಡದ ಎದುರು ಮಾರ್ಚ್ 6ರಂದು ರಾತ್ರಿ ಘಟನೆ ನಡೆದಿದೆ.
ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೇಂದ್ರ ಎಂಬುವರು ಸಾಕ್ಷ್ಯ ಹೇಳಿದ್ದರು. ಈ ಕಾರಣಕ್ಕೆ ಪ್ರಕರಣದ ಆರೋಪಿ ಗಣೇಶ ಪೂಜಾರಿ ತಲ್ವಾರ್ ಬೀಸಿ ಕೊಲೆಗೆ ಯತ್ನಿಸಿ ಜೀವ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ.
ಕಾರ್ ನಲ್ಲಿ ಬಂದಿದ್ದ ಗಣೇಶ ಪೂಜಾರಿ ರಾಜೇಂದ್ರ, ಪತ್ನಿ ಪುಷ್ಪಲತಾ ಅವರನ್ನು ಅಡ್ಡಗಟ್ಟಿ ನಿಲ್ಲಿಸಿದ್ದು, ನಂತರ ತಲ್ವಾರ್ ಬೀಸಿ ಕೊಲೆಗೆ ಯತ್ನಿಸಿದ್ದಾರೆ. ನ್ಯಾಯಾಲಯದಲ್ಲಿ ಸಾಕ್ಷ್ಯ ಹೇಳಿದರೆ ಕೊಚ್ಚಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಕಾರ್ಕಳ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

