ಪರಮಾತ್ಮನನ್ನು ಧ್ಯಾನಿಸಲು ಯಾವುದೇ ಸಮಯ, ಜಾಗ ಎಂಬುದಿಲ್ಲ. ಪ್ರತಿಯೊಂದು ಪ್ರದೇಶ, ವಸ್ತುವಿನಲ್ಲೂ ದೇವರಿದ್ದಾನೆ. ಹಾಗೆ ಭಕ್ತನಾದವನು ಎಲ್ಲಿ ಬೇಕಾದ್ರೂ ದೇವರ ಧ್ಯಾನ ಮಾಡಬಹುದು. ಆದ್ರೆ ಪೂಜೆ ಮಾಡುವಾಗ ಮಾತ್ರ ಕೆಲವೊಂದು ನಿಯಮಗಳನ್ನು ಅವಶ್ಯವಾಗಿ ಪಾಲಿಸಬೇಕು.
ಹನುಮಂತನ ಪೂಜೆಯನ್ನು 12 ಗಂಟೆಯಿಂದ 1 ಗಂಟೆಯ ವೇಳೆ ಮಾಡಬಾರದು. ಉಳಿದ ದೇವತೆಗಳ ಪೂಜೆಗೆ ಸಮಯದ ನಿಗದಿಯಿಲ್ಲ. ಯಾವಾಗ ಬೇಕಾದ್ರೂ ಪೂಜೆ ಮಾಡಬಹುದು. ಆದ್ರೆ ಸೂರ್ಯಾಸ್ತದ ನಂತ್ರ ಪೂಜೆ ಮಾಡಬೇಕಾದ್ರೆ ಕೆಲವೊಂದು ವಿಷಯದ ಬಗ್ಗೆ ಗಮನವಿರಲಿ.
ಸೂರ್ಯಾಸ್ತದ ನಂತ್ರ ಪೂಜೆ ಮಾಡುವವರು ಶಂಖವನ್ನು ಊದಬಾರದು. ಈ ವೇಳೆ ದೇವಾನುದೇವತೆಗಳು ಮಲಗಿರುತ್ತಾರೆ. ಅವರ ನಿದ್ರೆಗೆ ಭಂಗ ಬರುವುದರಿಂದ ಅಶುಭ ಫಲಗಳು ಸಿಗುವ ಸಾಧ್ಯತೆ ಹೆಚ್ಚಿದೆ.
ಸೂರ್ಯನ ಮೊದಲ ಕಿರಣ ಭೂಮಿಗೆ ಬಿದ್ದ ತಕ್ಷಣ ದಿನದ ಆರಂಭವಾಗುತ್ತದೆ. ದೇವಾನುದೇವತೆಗಳ ಪೂಜೆಯ ಜೊತೆಗೆ ಸೂರ್ಯ ದೇವನ ಪೂಜೆಯನ್ನು ಅವಶ್ಯವಾಗಿ ಮಾಡಬೇಕು. ಆದ್ರೆ ರಾತ್ರಿ ಸೂರ್ಯ ದೇವನಿಗೆ ಪೂಜೆ ಮಾಡಬಾರದು.
ಸೂರ್ಯಾಸ್ತದ ನಂತ್ರ ದರ್ಬೆ ಹಾಗೂ ತುಳಸಿ ಎಲೆಗಳನ್ನು ಕೀಳಬಾರದು.
ರಾತ್ರಿ ಪೂಜೆ ಮಾಡಿದ ನಂತ್ರ ಉಳಿಯುವ ಹೂ, ಅಕ್ಕಿ, ಪೂಜಾ ಸಾಮಗ್ರಿಗಳನ್ನು ರಾತ್ರಿ ಪೂರ್ತಿ ಹಾಗೆಯೇ ಬಿಡಿ. ಬೆಳಿಗ್ಗೆ ಎದ್ದ ತಕ್ಷಣ ಶುದ್ಧವಾಗಿ ನಂತ್ರ ಅವುಗಳನ್ನು ಸ್ವಚ್ಛಗೊಳಿಸಿ.