ಕಾರ್ತಿಕ ಮಾಸದಲ್ಲಿ ದೀಪಾವಳಿ ನಂತ್ರ ಬರುವ ಹಬ್ಬ ತುಳಸಿ ಮದುವೆ. ಹಿಂದೂ ಧರ್ಮದಲ್ಲಿ ತುಳಸಿಗೆ ದೇವತೆ ಸ್ಥಾನ ನೀಡಲಾಗಿದೆ. ಕಾರ್ತಿಕ ಮಾಸದಲ್ಲಿ ಪ್ರತಿದಿನ ಸಂಜೆ ತುಳಸಿ ಗಿಡದ ಕೆಳಗೆ ತುಪ್ಪದ ದೀಪವನ್ನು ಹಚ್ಚಲಾಗುತ್ತದೆ. ಪ್ರತಿ ದಿನ ತುಳಸಿ ಪೂಜೆ ಮಾಡುವ ಪದ್ಧತಿಯಿದೆ. ಈ ಬಾರಿ ನವೆಂಬರ್ 26 ರಂದು ತುಳಸಿ ಮದುವೆ ಶುಭಗಳಿಗೆ ಬಂದಿದೆ.
ಸಾಲಿಗ್ರಾಮದ ಜೊತೆ ತುಳಸಿ ಮದುವೆ ಮಾಡಲಾಗುತ್ತದೆ. ತುಳಸಿ ಮದುವೆಯನ್ನು ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಕೆಲವರು ತುಳಸಿಯನ್ನು ಕೃಷ್ಣನ ಜೊತೆ ಮದುವೆ ಮಾಡಿಸುತ್ತಾರೆ. ಅದಕ್ಕೆ ನೆಲ್ಲಿಗಿಡವನ್ನು ಬಳಸ್ತಾರೆ. ತುಳಸಿ ಮದುವೆ ಮಾಡುವುದ್ರಿಂದ ದಾಂಪತ್ಯ ಜೀವನದಲ್ಲಿ ಪ್ರೀತಿ ಲಭಿಸುತ್ತದೆ ಎಂಬ ನಂಬಿಕೆಯಿದೆ. ತುಳಸಿ ಮದುವೆ ವೇಳೆ ಕೆಲವೊಂದು ವಿಷ್ಯಗಳ ಬಗ್ಗೆ ಗಮನ ಇಡಬೇಕು.
ತುಳಸಿ ಮದುವೆ ದಿನ ತುಳಸಿ ಗಿಡವನ್ನು ಮನೆಯ ಮುಖ್ಯ ದ್ವಾರದ ಬಳಿ ಅಥವಾ ಮುಂದಿನ ಅಂಗಳದಲ್ಲಿ ಇಡಬೇಕು.
ತುಳಸಿ ಮಂಟಪದ ಅಲಂಕಾರಕ್ಕೆ ಕಬ್ಬನ್ನು ಅವಶ್ಯವಾಗಿ ಬಳಸಿ.
ಮದುವೆ ಪೂಜೆ ಶುರು ಮಾಡುವ ಮೊದಲು ತುಳಸಿ ಗಿಡದ ಬಳಿ ಚುನರಿ ಹಾಗೂ ನೆಲ್ಲಿಕಾಯಿ ಗಿಡವನ್ನು ಇಡಿ.
ತುಳಸಿ ಹಾಗೂ ಸಾಲಿಗ್ರಾಮಕ್ಕೆ ಅರಿಶಿನ ಬೆರೆಸಿದ ಹಾಲನ್ನು ಅರ್ಪಿಸಿ.
ತುಳಸಿ ಮದುವೆ ವೇಳೆ ಮಂಗಳಾಷ್ಟಕ ಬಾಯಿಗೆ ಬಂದ್ರೆ ಅಗತ್ಯವಾಗಿ ಹೇಳಿ.
ತುಳಸಿ ಪೂಜೆ ವೇಳೆ 11 ಬಾರಿ ತುಳಸಿ ಗಿಡವನ್ನು ಪ್ರದಕ್ಷಣೆ ಮಾಡಿ.
ಪ್ರಸಾದವನ್ನು ಎಲ್ಲರಿಗೂ ಹಂಚಿ ಸೇವಿಸಿ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003