alex Certify ಶುಕ್ರವಾರದ ನಿಮ್ಮ ದಿನ ಭವಿಷ್ಯ ಹಾಗೂ ರಾಶಿಫಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶುಕ್ರವಾರದ ನಿಮ್ಮ ದಿನ ಭವಿಷ್ಯ ಹಾಗೂ ರಾಶಿಫಲ

ಮೇಷ ರಾಶಿ

ಇಂದು ಸ್ನೇಹಿತರೊಂದಿಗೆ ಮೋಜು-ಮಸ್ತಿಯಲ್ಲಿ ಕಾಲ ಕಳೆಯುತ್ತೀರಿ. ಹೊಸ ವಸ್ತ್ರಾಭರಣ ಖರೀದಿ ಮಾಡಲಿದ್ದೀರಿ. ಸಾಮಾಜಿಕವಾಗಿ ಗೌರವ-ಪ್ರತಿಷ್ಠೆ ದೊರೆಯುತ್ತದೆ.

ವೃಷಭ ರಾಶಿ

ಹಣಕಾಸು ವ್ಯವಹಾರಗಳಿಗೆ ಇಂದು ಉತ್ತಮ ದಿನ. ಮನೆಯಲ್ಲಿ ಸುಖ-ಶಾಂತಿ ನೆಲೆಸಿರುತ್ತದೆ. ಪ್ರತಿಸ್ಪರ್ಧಿಗಳೆದುರು ಗೆಲುವು ಸಿಗಲಿದೆ. ಮಧ್ಯಾಹ್ನದ ನಂತರ ಮನರಂಜನೆ ಪ್ರಾಪ್ತಿಯಾಗಲಿದೆ.

ಮಿಥುನ ರಾಶಿ

ಇಂದು ಮಿಶ್ರಫಲವಿದೆ. ಹೊಸ ಕಾರ್ಯವನ್ನು ಆರಂಭಿಸಬೇಡಿ. ಬೌದ್ಧಿಕ ಚರ್ಚೆಗೆ ಇಂದು ಅನುಕೂಲಕರ ದಿನ. ಮಕ್ಕಳ ಬಗ್ಗೆ ಚಿಂತೆ ಕಾಡಲಿದೆ. ಮಧ್ಯಾಹ್ನದ ನಂತರ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.

ಕರ್ಕ ರಾಶಿ

ಹತಾಶೆಯಿಂದ ದೈಹಿಕ ಮತ್ತು ಮಾನಸಿಕವಾಗಿ ವ್ಯಗ್ರತೆ ಉಂಟಾಗುತ್ತದೆ. ಪ್ರವಾಸವನ್ನು ಮುಂದೂಡಿ. ಆಸ್ತಿಗೆ ಸಂಬಂಧಪಟ್ಟ ವ್ಯವಹಾರಗಳಲ್ಲಿ ಎಚ್ಚರವಿರಲಿ. ಹೊಸ ಕಾರ್ಯದಲ್ಲಿ ಯಶಸ್ಸು ಸಿಗಲಿದೆ.

ಸಿಂಹ ರಾಶಿ

ಇಂದು ಧಾರ್ಮಿಕ ಯಾತ್ರೆ ಕೈಗೊಳ್ಳಲಿದ್ದೀರಿ. ಹೊಸ ಕಾರ್ಯ ಆರಂಭಿಸಲಿದ್ದೀರಿ. ವಿದೇಶದಿಂದ ಲಾಭದಾಯಕ ಸಮಾಚಾರ ಬರುತ್ತದೆ. ಷೇರು ವ್ಯವಹಾರದಲ್ಲಿ ಲಾಭವಾಗುತ್ತದೆ.

ಕನ್ಯಾ ರಾಶಿ

ಇಂದು ಮೌನವಾಗಿಯೇ ದಿನ ಕಳೆಯುವುದು ಉತ್ತಮ. ಇಲ್ಲವಾದಲ್ಲಿ ಯಾರೊಂದಿಗಾದ್ರೂ ಜಗಳವಾಗಬಹುದು. ಕುಟುಂಬಸ್ಥರೊಂದಿಗೆ ಸೇರಿ ಮಹತ್ವದ ನಿರ್ಣಯ ಕೈಗೊಳ್ಳಲಿದ್ದೀರಿ.

ತುಲಾ ರಾಶಿ

ಶಾರೀರಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಗಮನಹರಿಸಿ. ಹೊಸ ವಸ್ತ್ರಾಭರಣ ಖರೀದಿಗೆ ಹಣ ಖರ್ಚಾಗಲಿದೆ. ಕುಟುಂಬದವರೊಂದಿಗೆ ಭಿನ್ನಾಭಿಪ್ರಾಯ ಮೂಡಬಹುದು. ಅದನ್ನು ಬಗೆಹರಿಸಿಕೊಳ್ಳಿ.

ವೃಶ್ಚಿಕ ರಾಶಿ

ಆಧ್ಯಾತ್ಮಿಕ ಕೆಲಸ ಮತ್ತು ಈಶ್ವರನ ಧ್ಯಾನದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ನಕಾರಾತ್ಮಕ ಆಲೋಚನೆಗಳನ್ನು ದೂರಮಾಡಿ. ಕೋರ್ಟ್ ಕಚೇರಿ ವ್ಯವಹಾರದಲ್ಲಿ ಎಚ್ಚರವಿರಲಿ.

ಧನು ರಾಶಿ

ಇಂದು ನಿಮ್ಮ ಆದಾಯ ವೃದ್ಧಿಸಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ವ್ಯಾಪಾರದಲ್ಲಿ ಲಾಭವಾಗಲಿದೆ. ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಖರ್ಚು ಹೆಚ್ಚಾಗಬಹುದು.

ಮಕರ ರಾಶಿ

ಹಣಕಾಸು ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಹಿರಿಯ ಅಧಿಕಾರಿಗಳಿಂದ ಪ್ರೋತ್ಸಾಹ ದೊರೆಯುತ್ತದೆ. ಪದೋನ್ನತಿ ಯೋಗವೂ ಇದೆ. ಕುಟುಂಬದ ವಾತಾವರಣ ಆನಂದಮಯವಾಗಿರುತ್ತದೆ.

ಕುಂಭ ರಾಶಿ

ಹಿರಿಯ ಅಧಿಕಾರಿಗಳೊಂದಿಗಿನ ಮಾತುಕತೆ ವೇಳೆ ಎಚ್ಚರಿಕೆಯಿಂದ ಇರಿ. ಮಕ್ಕಳ ಆರೋಗ್ಯದ ಬಗ್ಗೆ ಚಿಂತೆ ಕಾಡುತ್ತದೆ. ಧಾರ್ಮಿಕ ಸ್ಥಳಕ್ಕೆ ಪ್ರವಾಸ ತೆರಳಲಿದ್ದೀರಿ. ಗೃಹಸ್ಥ ಜೀವನದಲ್ಲಿ ಸಂತೋಷ ತುಂಬಿರುತ್ತದೆ.

ಮೀನ ರಾಶಿ

ಯಾರೊಂದಿಗೂ ಜಗಳದಲ್ಲಿ ತೊಡಗಿಕೊಳ್ಳಬೇಡಿ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಗಹನವಾದ ಆಲೋಚನೆಯಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಇರುತ್ತದೆ. ಅಧಿಕಾರಿಗಳೊಂದಿಗೆ ಚರ್ಚೆ ಬೇಡ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...