ಕೈ ಮುಗಿದು ನಮಸ್ಕಾರ ಮಾಡುವುದು ಭಾರತದ ಸಂಸ್ಕೃತಿ. ಯಾವುದೇ ವ್ಯಕ್ತಿ ನಮ್ಮ ಮುಂದೆ ಸಿಗಲಿ ಕೈ ಮುಗಿದು ಅವ್ರನ್ನು ಸ್ವಾಗತಿಸುವ ಪದ್ಧತಿ ನಮ್ಮಲ್ಲಿತ್ತು. ಕಾಲ ಬದಲಾದಂತೆ ಜನರು ಹಲೋ, ಹಾಯ್ ಹೇಳಲು ಶುರು ಮಾಡಿದ್ದಾರೆ.
ಆದ್ರೆ ಈಗ್ಲೂ ಅನೇಕರು ಕೈ ಮುಗಿದೇ ಅತಿಥಿಗಳನ್ನು ಸ್ವಾಗತಿಸುತ್ತಾರೆ.
ಗರುಡ ಪುರಾಣದಲ್ಲಿ ನಮಸ್ಕಾರಕ್ಕೆ ಸಂಬಂಧಿಸಿದ ಕೆಲ ಸಂಗತಿಗಳನ್ನು ಹೇಳಲಾಗಿದೆ. ಗರುಡ ಪುರಾಣದ ಪ್ರಕಾರ ಕೆಲ ಜನರಿಗೆ ಅಪ್ಪಿತಪ್ಪಿಯೂ ಕೈ ಮುಗಿಯಬಾರದಂತೆ. ಅಂಥವರಿಗೆ ಕೈ ಮುಗಿದ್ರೆ ಲಾಭಕ್ಕಿಂತ ನಷ್ಟವೇ ಹೆಚ್ಚಂತೆ.
ಪುರಾಣದ ಪ್ರಕಾರ ಕಪಟ ವ್ಯಕ್ತಿಗೆ ಎಂದೂ ಕೈ ಮುಗಿಯಬಾರದಂತೆ. ಇಂಥ ವ್ಯಕ್ತಿಗಳಿಗೆ ನಮಸ್ಕಾರ ಮಾಡಿದ್ರೆ ನಮ್ಮ ಗೌರವಕ್ಕೆ ಧಕ್ಕೆ ಬರುತ್ತದೆಯಂತೆ. ಜಾತಕದಲ್ಲಿ ಗ್ರಹ ದೋಷ ಹೆಚ್ಚಾಗುತ್ತದೆಯಂತೆ.
ಗರುಡ ಪುರಾಣದ ಪ್ರಕಾರ ಅಂತ್ಯ ಸಂಸ್ಕಾರಕ್ಕೆ ಹೋಗುವ ವೇಳೆ ಬೇರೆಯವರಿಗೆ ಕೈ ಮುಗಿಯಬಾರದಂತೆ. ಅಂತ್ಯ ಸಂಸ್ಕಾರಕ್ಕೆ ಹೋಗುವಾಗ ಮೌನವಾಗಿರಬೇಕಂತೆ. ನಮಸ್ಕಾರ ಮಾಡಿದ್ರೆ ಮೌನಕ್ಕೆ ಧಕ್ಕೆಯಾಗುತ್ತದೆ. ದುಃಖದ ಸಂದರ್ಭದಲ್ಲಿ ಮಾತನಾಡುವುದು ಅಶುಭ.
ಸ್ನಾನ ಮಾಡುವ ವೇಳೆ ನಮಸ್ಕಾರ ಮಾಡಬಾರದು. ಗ್ರಹ ದೋಷ ಉಂಟಾಗಿ ಮುಂದಿನ ದಿನಗಳಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ.
ಓಡುತ್ತಿರುವ ವ್ಯಕ್ತಿಗೆ ಎಂದೂ ನಮಸ್ಕಾರ ಮಾಡಬಾರದು. ಇದು ಜಾತಕದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.
ಪೂಜೆ ಮಾಡುವ ವೇಳೆ ಬೇರೆಯವರಿಗೆ ನಮಸ್ಕಾರ ಮಾಡಬಾರದು. ಹೀಗೆ ಮಾಡಿದಲ್ಲಿ ಧ್ಯಾನ ಬೇರೆ ಕಡೆ ಹೋಗುತ್ತದೆ. ದೇವಾನುದೇವತೆಗಳು ಅಪ್ರಸನ್ನರಾಗ್ತಾರೆ.