ಪ್ರತಿಯೊಬ್ಬರಿಗೂ ರಾತ್ರಿ ನಿದ್ರೆಯಲ್ಲಿ ಕಸನು ಬೀಳುತ್ತದೆ. ಕನಸುಗಳಿಗೆ ಅರ್ಥವಿದೆ. ಕೆಲ ಕನಸುಗಳು ಸಂತೋಷದ ಸಂಕೇತವನ್ನು ನೀಡಿದ್ರೆ ಮತ್ತೆ ಕೆಲ ಕನಸುಗಳು ಅತೃಪ್ತಿಯ ಕಾರಣದಿಂದ ಬೀಳುತ್ತವೆ. ಅನೇಕರು ಎತ್ತರದಿಂದ ಕೆಳಗೆ ಬಿದ್ದಂತೆ ಕನಸು ಕಾಣ್ತಾರೆ. ಈ ಕನಸು ಬಿದ್ದ ತಕ್ಷಣ ಬೆಚ್ಚಿ ಬೀಳ್ತಾರೆ. ಈ ಕನಸಿಗೂ ಅರ್ಥವಿದೆ.
ಎತ್ತರದಿಂದ ಕೆಳಗೆ ತಳ್ಳಿದಂತೆ ಕನಸು ಬಿದ್ದರೆ ಅದನ್ನು ದಮನ ಎನ್ನಲಾಗುತ್ತದೆ. ಸ್ವಪ್ನ ಶಾಸ್ತ್ರದ ಪ್ರಕಾರ, ರಾತ್ರಿ ಇಂಥ ಕನಸು ಬಿದ್ದರೆ, ನಿಮ್ಮ ಮನಸ್ಸಿನ ವಿರುದ್ಧವಾಗಿ ಕೆಲಸ ಮಾಡಿಸಲಾಗ್ತಿದೆ ಎಂಬ ಸೂಚನೆ. ಈ ಕನಸು ಬಿದ್ದರೆ ಎಚ್ಚರಿಕೆಯಿಂದಿರಿ. ನಿಮ್ಮ ಸುತ್ತಮುತ್ತಲಿನವರಿಂದ ಜಾಗರೂಕರಾಗಿರಿ.
ಮೇಲಿನಿಂದ ಕೆಳಗೆ ಬೀಳುವ ವೇಳೆ ಏನನ್ನಾದರೂ ಹಿಡಿದುಕೊಂಡಂತೆ ಕನಸು ಕಂಡರೆ ಸಂಬಂಧ ಹಾಳಾಗಿದೆ ಎಂದರ್ಥ. ನಿಮ್ಮ ಸಂಬಂಧದಲ್ಲಿ ಸಮಸ್ಯೆಯಿದ್ದು, ಅದನ್ನು ಮುಚ್ಚಿಡಲು ಯತ್ನಿಸುತ್ತಿದ್ದೀರಿ ಎಂಬುದರ ಸಂಕೇತ.
ಕನಸಿನಲ್ಲಿ ಬಂಡೆಯಿಂದ ಕೆಳಗೆ ಬಿದ್ದಂತೆ ಕಂಡರೆ ಜೀವನದಲ್ಲಿ ತೊಂದರೆ, ವೈಫಲ್ಯ ಎದುರಾಗಲಿದೆ ಎಂಬ ಸೂಚನೆ. ಒಂದು ವೇಳೆ ಕಾಲನ್ನು ನೆಲದ ಮೇಲಿಡಲು ನೀವು ಪ್ರಯತ್ನಿಸುತ್ತಿದ್ದರೆ ಸುಧಾರಣೆಯ ಸಂಕೇತವಾಗಿದೆ.
ಕನಸಿನಲ್ಲಿ ಬೇರೆಯವರು ಕೆಳಗೆ ಬಿದ್ದಂತೆ ಕಂಡರೆ ಸ್ವಪ್ನ ಶಾಸ್ತ್ರದ ಪ್ರಕಾರ, ಬೇರೆಯವರ ಯಶಸ್ಸಿಗೆ ನೀವು ಪ್ರಯತ್ನಿಸುತ್ತಿದ್ದರೂ ಪ್ರಯತ್ನ ವಿಫಲವಾಗ್ತಿರುವ ಸೂಚನೆಯಾಗಿದೆ.