ಪ್ರತಿಯೊಬ್ಬ ವ್ಯಕ್ತಿಯ ಸುತ್ತಮುತ್ತ ಇರುವ ವಸ್ತುಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಎರಡೂ ಪ್ರಭಾವವನ್ನು ಬೀರುತ್ತವೆ. ಭವಿಷ್ಯವನ್ನು ಯಾರಿಂದಲೂ ಸರಿಯಾಗಿ ಹೇಳಲು ಸಾಧ್ಯವಿಲ್ಲ. ಆದ್ರೆ ಕೆಲವೊಂದು ವಸ್ತುಗಳು ಮುಂದಾಗಬಹುದಾದ ಘಟನೆಗಳ ಬಗ್ಗೆ ಸೂಚನೆ ನೀಡುತ್ತವೆ.
ಕೈ,ಜೇಬು ಅಥವಾ ಪರ್ಸ್ ನಿಂದ ಹಣ ಕೆಳಗೆ ಬಿದ್ದರೆ ತಕ್ಷಣ ಅದನ್ನೆತ್ತಿಕೊಂಡು ಹಣೆಗೊತ್ತಿಕೊಳ್ಳಿ. ಜೊತೆಗೆ ತಾಯಿ ಲಕ್ಷ್ಮಿಯನ್ನು ಪ್ರಾರ್ಥಿಸಿ ಕಿಸೆಯಲ್ಲಿಟ್ಟುಕೊಳ್ಳಿ. ಹೀಗೆ ಮಾಡಿದ್ರೆ ಹಣದ ನಷ್ಟವನ್ನು ತಪ್ಪಿಸಬಹುದು.
ಕಾಗೆ ಸ್ನಾನ ಮಾಡಿದ್ದು ಕಾಣಿಸಿದ್ರೆ ಲಕ್ಷ್ಮಿ ಕೃಪೆಗೆ ಪಾತ್ರರಾಗಲಿದ್ದೀರಿ. ಯಾರ ಮನೆಯ ಮೇಲೆ ಕುಳಿತು ಕಾಗೆ ನೀರು ಕುಡಿಯುತ್ತದೆಯೋ ಅಥವಾ ಎಣ್ಣೆ ಪಾತ್ರೆಯನ್ನು ನೆಕ್ಕುತ್ತದೆಯೋ ಆ ಮನೆಯಲ್ಲಿ ಯಾವುದೇ ವಸ್ತುವಿನ ಕೊರತೆ ಎದುರಾಗುವುದಿಲ್ಲ.
ಮನೆಯ ನಲ್ಲಿ, ಟ್ಯಾಂಕ್, ವಿದ್ಯುತ್ ಉಪಕರಣ ಹಾಳಾಗಿದ್ದರೆ ಮುಂದಿನ ದಿನಗಳಲ್ಲಿ ಆರ್ಥಿಕ ನಷ್ಟ ನಿಶ್ಚಿತ.
ಮಾತು ಮಾತಿಗೆ ಪತಿ – ಪತ್ನಿ ನಡುವೆ ಜಗಳವಾಗ್ತಿದ್ದರೂ ಧನ ಹಾನಿಯ ಸಂಕೇತ.
ಹಿಂದು ಧರ್ಮದಲ್ಲಿ ನಾಯಿಗೆ ದೇವರ ಸ್ಥಾನ ನೀಡಲಾಗಿದೆ. ಮನೆಯಲ್ಲಿ ನಾಯಿ ಸಾಕುವುದು, ನಾಯಿಗೆ ಆಹಾರ ಹಾಕುವುದು ಪುಣ್ಯದ ಕೆಲಸ. ಆದ್ರೆ ಅಚಾನಕ್ ಸಾಕಿದ ನಾಯಿ ಸಾವನ್ನಪ್ಪಿದ್ರೆ ಕುಟುಂಬದಲ್ಲಿ ಕೆಟ್ಟ ಘಟನೆ ನಡೆಯಲಿದೆ ಅಥವಾ ಕೆಟ್ಟ ಸುದ್ದಿ ಬರಲಿದೆ ಎಂದರ್ಥ.