ಆದಿ-ಅಂತ್ಯವಿಲ್ಲದ ಭೋಲೆನಾಥನ ಪೂಜೆ ಜೋರಾಗಿ ನಡೆಯುತ್ತಿದೆ. ಅನೇಕ ಪದಾರ್ಥಗಳಿಂದ ಶಿವಲಿಂಗವನ್ನು ಮಾಡಿ ಭಕ್ತರು ಪೂಜೆ ಮಾಡ್ತಾರೆ. ಬೇರೆ ಬೇರೆ ಪದಾರ್ಥದಿಂದ ಮಾಡಿದ ಶಿವಲಿಂಗದ ಪೂಜೆ ಬೇರೆ ಬೇರೆ ಫಲ ನೀಡುತ್ತದೆ.
ಕಲ್ಲು ಸಕ್ಕರೆಯಿಂದ ಮಾಡಿದ ಶಿವಲಿಂಗ ಪೂಜೆ ಮಾಡಿದ್ರೆ ರೋಗದಿಂದ ಮುಕ್ತಿ ದೊರಕುತ್ತದೆ.
ಸಂಪತ್ತು ಹಾಗೂ ಸುಖ ಪ್ರಾಪ್ತಿಗಾಗಿ ಮೊಸರಿನ ನೀರನ್ನು ತೆಗೆದು ಗಟ್ಟಿ ಮೊಸರಿನಲ್ಲಿ ಶಿವಲಿಂಗ ಮಾಡಿ ಪೂಜೆ ಮಾಡಬೇಕು.
ಶಿವಲಿಂಗದ ಆಕಾರದಲ್ಲಿ ಹಣ್ಣನ್ನು ಇಟ್ಟು ರುದ್ರಾಭಿಷೇಕ ಮಾಡುವುದ್ರಿಂದ ಹಣ್ಣಿನ ತೋಟದಲ್ಲಿ ಹೆಚ್ಚಿನ ಫಸಲು ಕಾಣಬಹುದಾಗಿದೆ.
ಹೂವಿನಿಂದ ಮಾಡಿದ ಶಿವಲಿಂಗ ಪೂಜೆ ಮಾಡುವುದ್ರಿಂದ ಭೂ-ಸಂಪತ್ತು ಪ್ರಾಪ್ತಿಯಾಗುತ್ತದೆ.
ಜೋಳ, ಗೋಧಿ ಹಾಗೂ ಅಕ್ಕಿಯನ್ನು ಸಮ ಪ್ರಮಾಣದಲ್ಲಿ ಮಿಶ್ರ ಮಾಡಿ ಶಿವಲಿಂಗ ತಯಾರಿಸಿ. ಧನ, ಆರೋಗ್ಯ, ಸಂಪತ್ತು ಪ್ರಾಪ್ತಿಯಾಗುತ್ತದೆ.
ಚಿನ್ನದಿಂದ ಮಾಡಿದ ಶಿವಲಿಂಗ ಪೂಜೆ ಮಾಡುವುದ್ರಿಂದ ಸಮೃದ್ಧಿ ಪ್ರಾಪ್ತಿಯಾಗುತ್ತದೆ.
ಬೆಳ್ಳುಳ್ಳಿಯಿಂದ ಮಾಡಿದ ಶಿವಲಿಂಗ ಪೂಜೆ ಮಾಡುವುದ್ರಿಂದ ಶತ್ರು ನಾಶವಾಗಿ ವಿಜಯ ಪ್ರಾಪ್ತಿಯಾಗುತ್ತದೆ.
ಕರ್ಪೂರದಿಂದ ಮಾಡಿದ ಶಿವಲಿಂಗಾರಾಧನೆ ಭಕ್ತಿ ಮತ್ತು ಮುಕ್ತಿಗೆ ಕಾರಣವಾಗುತ್ತದೆ.