ಬಣ್ಣಗಳ ಹಬ್ಬ ಹೋಳಿ ಹತ್ತಿರ ಬರ್ತಿದೆ. ಈ ವರ್ಷ ಮಾರ್ಚ್ 29ರಂದು ಹೋಳಿ ಆಚರಿಸಲಾಗ್ತಿದೆ. ಕೊರೊನಾ ಮಧ್ಯೆ ಸರಳವಾಗಿ ಜನರು ಹೋಳಿ ಆಚರಿಸಲು ಸಿದ್ಧರಾಗಿದ್ದಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ರಾಶಿಯವರು ಅದೃಷ್ಟದ ಬಣ್ಣದಲ್ಲಿ ಹೋಳಿ ಆಡುವುದು ಶುಭಕರ.
ಮೇಷ ಹಾಗೂ ವೃಶ್ಚಿಕ ರಾಶಿಯವರ ಅಧಿಪತಿ ಮಂಗಳ. ಇವರು ಹಳದಿ ಮತ್ತು ಗುಲಾಬಿ ಬಣ್ಣದ ಜೊತೆ ಹೋಳಿ ಆಡುವುದು ಒಳ್ಳೆಯದು.
ವೃಷಭ ಮತ್ತು ತುಲಾ ರಾಶಿಯವರ ಅಧಿಪತಿ ಶುಕ್ರ. ಬೆಳ್ಳಿ ಬಣ್ಣ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಆದ್ರೆ ಈ ಬಣ್ಣದಲ್ಲಿ ಹೋಳಿ ಆಡುವುದಿಲ್ಲ. ಹಾಗಾಗಿ ಈ ರಾಶಿಯವರು ತಿಳಿ ನೀಲಿ ಮತ್ತು ಆಕಾಶ ಬಣ್ಣದ ಜೊತೆ ಹೋಳಿ ಆಚರಿಸಬಹುದು.
ಮಿಥನ ಮತ್ತು ಕನ್ಯಾ ರಾಶಿಯ ಅಧಿಪತಿ ಬುಧ. ಕಿತ್ತಳೆ, ಹಳದಿ, ಆಕಾಶ ಮತ್ತು ಗುಲಾಬಿ ಬಣ್ಣಗಳು ಶುಭಕರ. ಈ ರಾಶಿಯವರು ತಿಳಿ ಹಸಿರು ಬಣ್ಣದಲ್ಲಿ ಹೋಳಿ ಆಡಬಹುದು.
ಕರ್ಕ ರಾಶಿ ಅಧಿಪತಿ ಚಂದ್ರ. ಚಂದ್ರನ ಬಣ್ಣ ಬಿಳಿ. ಇತ್ತೀಚಿನ ದಿನಗಳಲ್ಲಿ ಬಿಳಿ ಬಣ್ಣದಲ್ಲೂ ಹೋಳಿ ಆಡ್ತಾರೆ. ಆದ್ರೆ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾಗಿ ಈ ರಾಶಿಯವರು ಯಾವುದೇ ಬಣ್ಣವನ್ನು ಮೊಸರಿನಲ್ಲಿ ಬೆರೆಸಿ ಹೋಳಿ ಆಡಬೇಕು.
ʼಸೂರ್ಯದೇವʼನಿಗೆ ಜಲ ಅರ್ಪಿಸುವ ವೇಳೆ ಈ ತಪ್ಪು ಮಾಡಬೇಡಿ
ಸಿಂಹ ರಾಶಿಯವರು ಹಳದಿ, ಕಿತ್ತಳೆ, ತಿಳಿ ಹಸಿರು ಮುಂತಾದ ಬಣ್ಣಗಳೊಂದಿಗೆ ಹೋಳಿ ಆಡಬೇಕು. ಈ ರಾಶಿಯವರ ಅಧಿಪತಿ ಸೂರ್ಯ.
ಧನು ಮತ್ತು ಮೀನ ರಾಶಿಯ ಅಧಿಪತಿ ಗುರು. ಸರಳ ಸ್ವಭಾವದವರಾದ ಇವರು ಸರಳವಾಗಿ ಹೋಳಿ ಹಬ್ಬವನ್ನು ಆಚರಿಸುತ್ತಾರೆ. ಹಳದಿ, ಕಿತ್ತಳೆ ಬಣ್ಣದಲ್ಲಿ ಹೋಳಿ ಆಡಿದ್ರೆ ಶುಭಕರ.
ಮಕರ ಮತ್ತು ಕುಂಭ ರಾಶಿಯವರ ಅಧಿಪತಿ ಶನಿ. ಹಸಿರು, ಆಕಾಶ ನೀಲಿ ಬಣ್ಣದಲ್ಲಿ ಹೋಳಿ ಆಚರಿಸಿದ್ರೆ ಶುಭಕರ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003