ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನುಷ್ಯನನ್ನು ಅನೇಕ ದೋಷಗಳು ಕಾಡುತ್ತವೆ. ಅದ್ರಲ್ಲಿ ಪಿತೃ ದೋಷವೂ ಒಂದು. ಪಿತೃ ಮಾಸದಲ್ಲಿ ಪಿತೃಗಳಿಗೆ ತರ್ಪಣ ನೀಡಿ ಅವರ ಆತ್ಮಕ್ಕೆ ಶಾಂತಿ ಕೋರಲಾಗುತ್ತದೆ. ಆದ್ರೆ ಕೆಲವೊಬ್ಬರು ಪಿತೃಗಳಿಗೆ ತರ್ಪಣ ನೀಡುವುದಿಲ್ಲ. ಇದ್ರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಯಾರ ಜಾತಕದಲ್ಲಿ ಪಿತೃ ದೋಷವಿರುತ್ತದೆಯೋ ಅವರಿಗೆ ಸಂತಾನ ಪ್ರಾಪ್ತಿಯಾಗುವುದ್ರಲ್ಲಿ ಸಾಕಷ್ಟು ಸಮಸ್ಯೆಯಾಗುತ್ತದೆ. ಕೆಲವೊಬ್ಬರಿಗೆ ಸಂತಾನ ಪ್ರಾಪ್ತಿಯಾಗುವುದೇ ಇಲ್ಲ.
ಪಿತೃ ದೋಷದಿಂದ ಹಣದ ಸಮಸ್ಯೆ ಎದುರಾಗುತ್ತದೆ. ಪಿತೃ ದೋಷವಿದ್ದವರು ಅನೇಕ ಸಮಯ ಹಣದ ಸಮಸ್ಯೆಯಿಂದ ಬಳಲುತ್ತಾರೆ.
ಪಿತೃ ದೋಷವಿದ್ದವರ ಮನೆಯಲ್ಲಿ ಸುಲಭವಾಗಿ ಮದುವೆ-ಮಂಗಳ ಕಾರ್ಯಗಳು ನಡೆಯುವುದಿಲ್ಲ. ಮದುವೆ ನಂತ್ರವೂ ಗಂಡ-ಹೆಂಡತಿ ಸಂಬಂಧ ಚೆನ್ನಾಗಿರುವುದಿಲ್ಲ.
ಪಿತೃ ದೋಷದಿಂದ ಮನೆಯಲ್ಲಿ ಸದಾ ಜಗಳ, ಗಲಾಟೆ ನಡೆಯುತ್ತಿರುತ್ತದೆ. ಮನಃಶಾಂತಿ ಇಲ್ಲವಾಗುತ್ತದೆ.