ಮಕರ ಸಂಕ್ರಾಂತಿ ದಿನ ಸೂರ್ಯ ದೇವನಿಗೆ ಪೂಜೆ ಮಾಡುವ ನಿಯಮವಿದೆ. ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡ್ತಾನೆ. ಮಕರ ಸಂಕ್ರಾಂತಿಯಂದು ದಿನ ಹಾಗೂ ರಾತ್ರಿ ಅವಧಿ ಒಂದೇ ರೀತಿ ಇರುತ್ತದೆ. ಮಕರ ಸಂಕ್ರಾಂತಿಯನ್ನು ದೇಶದಾದ್ಯಂತ ವಿಶೇಷವಾಗಿ ಆಚರಿಸಲಾಗುತ್ತದೆ.
ಮಕರ ಸಂಕ್ರಾಂತಿಯಂದು ಬೆಳಿಗ್ಗೆ ತುಂಬಾ ಸಮಯ ಮಲಗಬಾರದು. ಬೆಳಿಗ್ಗೆ ಬೇಗ ಎದ್ದು ಪವಿತ್ರ ನದಿಯಲ್ಲಿ ಸ್ನಾನ ಮಾಡಿ ಸೂರ್ಯ ದೇವನಿಗೆ ಅರ್ಘ್ಯವನ್ನು ಅರ್ಪಿಸಬೇಕು. ಸೂರ್ಯ ದೇವನನ್ನು ಆರಾಧಿಸಲು ಅತ್ಯುತ್ತಮ ಸಮಯ ಬೆಳಿಗ್ಗೆ ಎಂಬುದು ನೆನಪಿರಲಿ.
ಮಕರ ಸಂಕ್ರಾಂತಿಯಂದು ಆದಿತ್ಯ ಹೃದಯ ಸ್ತೋತ್ರವನ್ನು ಪಠಣ ಮಾಡಿ. ಎಣ್ಣೆಯಿಂದ ಮಾಡಿದ ಆಹಾರವನ್ನು ಸೇವನೆ ಮಾಡಬೇಡಿ.
ಉಪ್ಪನ್ನು ತಿನ್ನಬೇಡಿ. ಒಂದು ಒಪ್ಪತ್ತಿನ ಊಟವನ್ನು ಮಾತ್ರ ಮಾಡಿ. ಇದ್ರಿಂದ ಸೂರ್ಯ ದೇವನ ಕೃಪೆ ಸದಾ ಇರುತ್ತದೆ.
ಮಕರ ಸಂಕ್ರಾಂತಿ ದಿನ ಮಾಡಿದ ದಾನಕ್ಕೆ ತುಂಬಾ ಮಹತ್ವವಿದೆ. ಈ ದಿನ ದಾನ ಮಾಡಿದ್ರೆ ಸಂಪತ್ತು ದ್ವಿಗುಣವಾಗುತ್ತೆ ಎಂಬ ನಂಬಿಕೆಯಿದೆ. ಹಾಗಾಗಿ ಮಕರ ಸಂಕ್ರಾಂತಿಯಂದು ಅವಶ್ಯವಾಗಿ ದಾನ ಮಾಡಿ.