
ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಸೂರ್ಯ ತನ್ನ ಫಥ ಬದಲಿಸುವ ದಿನವನ್ನು ಮಕರ ಸಂಕ್ರಾಂತಿಯಾಗಿ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯನ್ನು ಬೇರೆ ಬೇರೆ ದೇಶದಲ್ಲಿ ಬೇರೆ ಬೇರೆ ಹೆಸರಿನಲ್ಲಿ ಆಚರಿಸಲಾಗುತ್ತದೆ.
ಮಕರ ಸಂಕ್ರಾಂತಿ ರೈತರಿಗೆ ಸುಗ್ಗಿ ಸಂಭ್ರಮ. ಈ ಶುಭ ಸಂದರ್ಭದಲ್ಲಿ ಕೆಲ ಕೆಲಸಗಳನ್ನು ಅವಶ್ಯಕವಾಗಿ ಮಾಡಬೇಕು.
ಸಂಕ್ರಾಂತಿಯಂದು ಸೂರ್ಯ ದೇವನ ಆರಾಧನೆ ಮಾಡಬೇಕು. ಸೂರ್ಯನ ಪೂಜೆ ಮಾಡುವುದ್ರಿಂದ ಶುಭ ಫಲಗಳು ಪ್ರಾಪ್ತಿಯಾಗುತ್ತವೆ.
ಸಂಕ್ರಾಂತಿ ದಿನ ದಾನ, ಸ್ನಾನಕ್ಕೆ ಮಹತ್ವದ ಸ್ಥಾನವಿದೆ. ಪವಿತ್ರ ನದಿಯಲ್ಲಿ ಸ್ನಾನ ಮಾಡಿದ್ರೆ ಪಾಪ ಕಳೆಯುತ್ತದೆ. ಹಾಗೆ ಹಸು, ಎಳ್ಳಿನ ದಾನ ಮಾಡುವುದು ಮಂಗಳಕರ.
ಈ ದಿನ ಎಳ್ಳಿಗೆ ವಿಶೇಷ ಮಹತ್ವ ನೀಡಲಾಗುತ್ತದೆ. ಎಳ್ಳನ್ನು ಹಂಚಿ ತಿನ್ನಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗೆ ಶೇಂಗಾ, ಎಳ್ಳನ್ನು ದೇವರಿಗೆ ಅರ್ಪಿಸಲಾಗುತ್ತದೆ.
ಮಕರ ಸಂಕ್ರಾಂತಿ ಪ್ರಕೃತಿಯೊಂದಿಗೆ ಆಚರಿಸುವ ಹಬ್ಬವಾಗಿದೆ. ಹಾಗಾಗಿ ಈ ದಿನ ಯಾವುದೇ ಗಿಡ-ಮರಗಳನ್ನು ಕಡಿಯುವ ಕೆಲಸ ಮಾಡಬಾರದು. ಹೀಗೆ ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ.
ಮಕರ ಸಂಕ್ರಾಂತಿ ದಿನ ಮಾಂಸಹಾರ ಸೇವನೆ, ಮದ್ಯಪಾನ ಮಾಡಬಾರದು. ಹಾಗೆ ಮಸಾಲೆಯುಕ್ತ ಆಹಾರದಿಂದಲೂ ದೂರವಿರಬೇಕು.
ಈ ದಿನ ಯಾವುದೇ ವೃದ್ಧರನ್ನು ಅಥವಾ ಬಡವರನ್ನು ಬರಿಗೈನಲ್ಲಿ ಕಳುಹಿಸಬಾರದು. ಕೈಲಾದಷ್ಟು ದಾನ ಮಾಡಬೇಕು.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003