ದೇಶದಾದ್ಯಂತ ಇಂದು ಶಿವರಾತ್ರಿ ಆಚರಣೆ ಮಾಡಲಾಗ್ತಿದೆ. ಶಿವನ ಕೃಪೆಗೆ ಪಾತ್ರರಾಗಲು ಭಕ್ತರು ಶಿವನ ಆರಾಧನೆಯಲ್ಲಿ ತೊಡಗಿದ್ದಾರೆ. ಈ ಶುಭ ದಿನದಂದು ಭಕ್ತರು ಕೆಲ ಕೆಲಸಗಳನ್ನು ಮಾಡಬಾರದು. ಇದು ಶಿವನ ಕೋಪಕ್ಕೆ ಕಾರಣವಾಗುತ್ತದೆ.
ಶಿವರಾತ್ರಿಯಂದು ಕಪ್ಪು ಬಟ್ಟೆಯನ್ನು ಧರಿಸಬೇಡಿ. ಕಪ್ಪು ಬಟ್ಟೆ ಧರಿಸುವುದು ಅಶುಭ. ಶಿವರಾತ್ರಿಯಂದು ಶಿವಲಿಂಗಕ್ಕೆ ಹಾಕುವ ಪ್ರಸಾದ, ಹಣ್ಣುಗಳನ್ನು ಸೇವನೆ ಮಾಡಬಾರದು. ಇದ್ರಿಂದ ಆರ್ಥಿಕ ನಷ್ಟವುಂಟಾಗುತ್ತದೆ. ಅನಾರೋಗ್ಯಕ್ಕೂ ಕಾರಣವಾಗಬಹುದು.
ಯಾವ ಲೋಹದ ಶಿವಲಿಂಗಕ್ಕೆ ಪೂಜೆ ಮಾಡಿದ್ರೆ ಯಾವ ಫಲ…..?
ಶಿವಲಿಂಗಕ್ಕೆ ಅಪ್ಪಿತಪ್ಪಿಯೂ ತುಳಸಿ ಎಲೆಯನ್ನು ಹಾಕಬೇಡಿ. ಹಾಲಿನ ಅಭಿಷೇಕ ಮಾಡುವುದಿದ್ದರೆ ಪಾಶ್ಚರೀಕರಿಸಿದ ಹಾಗೂ ಪ್ಯಾಕೆಟ್ ಹಾಲನ್ನು ಹಾಕಬೇಡಿ. ಹಾಗೆ ಶಿವಲಿಂಗಕ್ಕೆ ತಣ್ಣನೆ ಹಾಲನ್ನು ಹಾಕಬೇಡಿ. ಚಿನ್ನ, ಬೆಳ್ಳಿ, ಕಂಚಿನ ಪಾತ್ರೆ ಬಳಸಿಯೇ ಅಭಿಷೇಕ ಮಾಡಿ. ಅಭಿಷೇಕಕ್ಕೆ ಸ್ಟೀಲ್ ಪಾತ್ರೆಯನ್ನು ಬಳಸಬೇಡಿ.
ವೃತ ಮಾಡುವವರು ಹಣ್ಣು ಹಾಗೂ ಹಾಲನ್ನು ಮಾತ್ರ ಸೇವನೆ ಮಾಡಬೇಕು. ಇಂದು ಬೆಳಿಗ್ಗೆಯಿಂದ ಶಿವರಾತ್ರಿ ಶುರುವಾಗಿದ್ದು, ನಾಳೆ ಬೆಳಗಿನವರೆಗೆ ಶಿವರಾತ್ರಿಯಿರುತ್ತದೆ. ಸೂರ್ಯಾಸ್ತದ ನಂತ್ರ ಏನನ್ನೂ ಸೇವನೆ ಮಾಡಬಾರದು. ಹಾಗೆ ತುಂಡಾದ ಅಕ್ಕಿಯನ್ನು ಶಿವನಿಗೆ ಅರ್ಪಿಸಬೇಡಿ. ಯಾವುದೇ ಕಾರಣಕ್ಕೂ ಕುಂಕುಮವನ್ನು ಶಿವಲಿಂಗಕ್ಕೆ ಹಾಕಬೇಡಿ. ಚಂದನವನ್ನು ಶಿವಲಿಂಗಕ್ಕೆ ಅರ್ಪಿಸಬಹುದು.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003