ಮಾ. 11 ಗುರುವಾರ ಮಹಾಶಿವರಾತ್ರಿ ಬಂದಿದೆ. ಲಿಂಗ ಪುರಾಣದ ಪ್ರಕಾರ ಮಾಘ ಮಾಸದ ಕೃಷ್ಣಚತುರ್ಥಿಯಂದು ಮಹಾಶಿವರಾತ್ರಿಯನ್ನು ಆಚರಿಸಲಾಗುತ್ತದೆ. ಶಿವರಾತ್ರಿ ಆಚರಣೆ ಹಿನ್ನೆಲೆ ಬಗ್ಗೆ ಬೇರೆ ಬೇರೆ ಕಥೆಗಳಿವೆ. ಆದ್ರೆ ಮಹಾಶಿವರಾತ್ರಿಯಂದು ಭಯ-ಭಕ್ತಿಯಿಂದ ಶಿವನ ಆರಾಧನೆ ಮಾಡಿದ್ರೆ ಭಕ್ತ ಬಯಸಿದ್ದನ್ನು ಶಿವ ಕರುಣಿಸ್ತಾನೆಂಬ ನಂಬಿಕೆ ಬಲವಾಗಿದೆ.
ಭಕ್ತರು ಶಿವರಾತ್ರಿಯಂದು ಉಪವಾಸ ಮಾಡಿ, ಜಾಗರಣೆ ಮಾಡಿ ಶಿವನ ಪೂಜೆ ಮಾಡ್ತಾರೆ. ಎಲ್ಲ ಶಿವನ ದೇವಾಲಯಗಳಲ್ಲಿಯೂ ಮಹಾದೇವನ ಪ್ರಾರ್ಥನೆ ಕೇಳಿ ಬರ್ತಾ ಇರುತ್ತದೆ. ಶಿವನನ್ನು ಒಲಿಸಿಕೊಳ್ಳುವುದರಲ್ಲಿ ಭಕ್ತರು ನಿರತರಾಗಿರ್ತಾರೆ. ನೀವು ಶಿವನ ಕೃಪೆಗೆ ಪಾತ್ರರಾಗಬಯಸಿದಲ್ಲಿ 10 ನಿಮಿಷ ಶಿವನ ಧ್ಯಾನ ಮಾಡಿ ಆತನ 108 ನಾಮಗಳನ್ನು ಪಠಿಸಿ.
ಪ್ರತಿದಿನ ಮಾಡುವ ಧ್ಯಾನದಿಂದ ಇದೆ ಇಷ್ಟೆಲ್ಲಾ ಪ್ರಯೋಜನ
ಓಂ ಭೋಲೇನಾಥ ನಮಃ, ಕೈಲಾಶ ಪತಿ ನಮಃ, ಭೂತನಾತ ನಮಃ, ಓಂ ನಂದರಾಜ ನಮಃ, ಓಂ ನಂದಿ ಸವಾರಿ ನಮಃ, ಓಂ ಜ್ಯೋತಿರ್ಲಿಂಗ ನಮಃ, ಓಂ ಮಹಾಕಾಲನೇ ನಮಃ, ಓಂ ರುದ್ರನಾಥ ನಮಃ, ಓಂ ಭೀಮಾಶಂಕರ ನಮಃ, ಓಂ ನಟರಾಜ ನಮಃ ಹೀಗೆ ಶಿವನ 108 ನಾಮಗಳನ್ನು ಭಕ್ತಿಯಿಂದ ಜಪಿಸಿ. ಶಿವರಾತ್ರಿಯಂದು ವೃತ ಮಾಡಲು ಸಾಧ್ಯವಾಗದಿದ್ದವರು 10 ನಿಮಿಷ ನಾಮಗಳನ್ನು ಜಪಮಾಡಿದ್ರೂ ಸಾಕು. ಭಕ್ತರ ಭಕ್ತಿಗೆ ಶಿವ ಪ್ರಸನ್ನನಾಗುತ್ತಾನೆ. ದೇವಸ್ಥಾನಗಳಿಗೆ ಹೋಗಿ ಬಿಲ್ವಪತ್ರೆ ಅರ್ಪಿಸಿ, ಶಿವಲಿಂಗಕ್ಕೆ ನೀರು ಅರ್ಪಿಸಿ ಬಂದ್ರೆ ಮತ್ತಷ್ಟು ಫಲ ಸಿಗಲಿದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003