ನಭೋಮಂಡಲದಲ್ಲಿ ಇಂದು ರಾಹು ಗ್ರಸ್ತ ಚಂದ್ರಗ್ರಹಣ ಗೋಚರವಾಗಲಿದ್ದು, ಭಾರತದಲ್ಲಿ ಕಾಣಿಸುವುದಿಲ್ಲ. ಯಾವುದೇ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ.
ವರ್ಷದ ಕೊನೆಯ ಚಂದ್ರಗ್ರಹಣ ಇದಾಗಿದ್ದು, ಇದರಿಂದ ಯಾರಿಗೆ ಒಳ್ಳೆಯದಾಗುತ್ತದೆ? ಯಾರಿಗೆ ಆಪತ್ತು ಬರುತ್ತದೆ? ಎನ್ನುವ ಚರ್ಚೆ ನಡೆದಿದೆ. 2020 ರಲ್ಲಿ ಇದುವರೆಗೆ ಮೂರು ಚಂದ್ರಗ್ರಹಣ ಸಂಭವಿಸಿದ್ದು ನಾಲ್ಕನೇ ಚಂದ್ರಗ್ರಹಣ ಇದಾಗಿದ್ದು, ಇಂದಿನ ರಾಹುಗ್ರಸ್ತ ಚಂದ್ರಗ್ರಹಣ ವಿಶೇಷತೆಗಳ ಕುರಿತು ಚರ್ಚೆ ನಡೆದಿದೆ.
ಸೂರ್ಯ ಮತ್ತು ಚಂದ್ರನ ನಡುವೆ ಭೂಮಿಯು ಅಡ್ಡ ಬರುವ ಪ್ರಕ್ರಿಯೆಯನ್ನು ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಗ್ರಹಣ ಸಂಭವಿಸುತ್ತಿದೆ
ಭಾರತೀಯ ಕಾಲಮಾನದಂತೆ ಮಧ್ಯಾಹ್ನ 1 ಗಂಟೆ 4 ನಿಮಿಷಕ್ಕೆ ಗ್ರಹಣ ಆರಂಭವಾಗಲಿದೆ. ಸಂಜೆ 5 ಗಂಟೆ 22 ನಿಮಿಷಕ್ಕೆ ಗ್ರಹಣದ ಮೋಕ್ಷ ಕಾಲವಾಗಿದೆ. ಒಟ್ಟು 4 ಗಂಟೆ 21 ನಿಮಿಷ ಕಾಲ ಚಂದ್ರಗ್ರಹಣ ಸಂಭವಿಸಲಿದ್ದು, ಚಂದ್ರಗ್ರಹಣ ನವೆಂಬರ್ 30 ರ ಮಧ್ಯಾಹ್ನ ಶುರುವಾಗಲಿದೆ. 3 ಗಂಟೆ 12 ನಿಮಿಷಕ್ಕೆ ಗರಿಷ್ಠಮಟ್ಟದಲ್ಲಿ ಇರುತ್ತದೆ.
ಉತ್ತರ ಅಮೆರಿಕ, ದಕ್ಷಿಣ ಅಮೆರಿಕದಲ್ಲಿ ಚಂದ್ರಗ್ರಹಣ ಗೋಚರವಾಗಲಿದೆ. ಯೂರೋಪ್, ಆಸ್ಟ್ರೇಲಿಯಾ, ಏಷ್ಯಾದ ಕೆಲವು ಭಾಗಗಳಲ್ಲಿ ಚಂದ್ರಗ್ರಹಣ ಗೋಚರಿಸುತ್ತದೆ. ಗ್ರಹಣ ಕಾಲದಲ್ಲಿ ಭಾರತದಲ್ಲಿ ಹಗಲಿನ ಸಮಯವಾಗಿರುವುದರಿಂದ ಗ್ರಹಣ ಗೋಚರಿಸುವುದಿಲ್ಲ. ವರ್ಷದ ಕೊನೆ ಚಂದ್ರಗ್ರಹಣ ನಾಳೆ ಸಂಭವಿಸಲಿದ್ದು ಕಾರ್ತಿಕ ಪೂರ್ಣಿಮೆ ದಿನದಂದೇ ಗ್ರಹಣ ಉಂಟಾಗುವುದು ಶುಭವೋ? ಅಶುಭವೋ? ಎಂಬ ಚರ್ಚೆ ನಡೆದಿದೆ.
ಕಾರ್ತಿಕ ಪೂರ್ಣಿಮೆ ಆಚರಿಸುವುದು ಹಿಂದೂ ಧರ್ಮದಲ್ಲಿ ಬಹಳ ಮುಖ್ಯ ಹಬ್ಬವಾಗಿದೆ. ಯಾವುದೇ ದಾನ ಧರ್ಮ ಮಾಡಲು ಇದು ಹೇಳಿ ಮಾಡಿಸಿದ ಸಮಯ. ಈ ಸಮಯದಲ್ಲಿ ದಾನ ಮಾಡಿದರೆ ಜೀವನ ಪರ್ಯಂತ ಲಾಭ ಸಿಗುತ್ತದೆ ಎಂಬ ನಂಬಿಕೆ ಇದೆ.
ಚಂದ್ರಗ್ರಹಣವಿರುವ ಕಾರ್ತಿಕ ಪೂರ್ಣಿಮೆಯ ದಿನ ಅತ್ಯಂತ ಮಹತ್ವದ್ದಾಗಿದೆ. ಈ ದಿನ ಕೈಗೊಳ್ಳುವ ಪೂಜೆಗಳು ಹೆಚ್ಚಿನ ಫಲವನ್ನು ನೀಡುತ್ತವೆ. ಈ ಗ್ರಹಣ ಕಾಲದಲ್ಲಿ ಮಾಡುವ ದಾನಗಳು ಹೆಚ್ಚು ಫಲ ನೀಡುತ್ತವೆ ಎನ್ನಲಾಗಿದೆ.
ಪ್ರವಾಹ, ಸಾಂಕ್ರಾಮಿಕ ರೋಗ ಹೆಚ್ಚಾಗಬಹುದು ಎನ್ನಲಾಗಿದ್ದರೂ, ಇದು ಪೂರ್ಣ ಚಂದ್ರಗ್ರಹಣವಲ್ಲದ ಕಾರಣ ಋಣಾತ್ಮಕ ಎಂದು ಪರಿಗಣಿಸುವುದಿಲ್ಲ. ಹಾಗಾಗಿ ಈ ದಿನ ಯಾವುದೇ ದೇವಾಲಯಗಳ ಬಾಗಿಲು ಮುಚ್ಚುವುದಿಲ್ಲ. ಧರ್ಮ ಶಾಸ್ತ್ರ ಕಾರ್ಯಗಳು ಮತ್ತು ಪೂಜೆಗಳು ಎಂದಿನಂತೆ ನಡೆಯುತ್ತವೆ ಎಂದು ಹೇಳಲಾಗಿದೆ.