alex Certify ಜೀವನವಿಡಿ ಲಾಭ ಗಳಿಸಲು ಸುಲಭ ದಾರಿ: ನಾಳಿನ ಚಂದ್ರಗ್ರಹಣದ ವೇಳೆ ದಾನ ಮಾಡಿ –ಶುಭ, ಅಶುಭದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೀವನವಿಡಿ ಲಾಭ ಗಳಿಸಲು ಸುಲಭ ದಾರಿ: ನಾಳಿನ ಚಂದ್ರಗ್ರಹಣದ ವೇಳೆ ದಾನ ಮಾಡಿ –ಶುಭ, ಅಶುಭದ ಮಾಹಿತಿ

ನಾಳೆ ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಕಾರ್ತಿಕ ಮಾಸದ ಶುಕ್ಲಪಕ್ಷದ ಪೌರ್ಣಮಿಯಂದು ಗ್ರಹಣ ಸಂಭವಿಸಲಿದೆ.

ಭಾರತೀಯ ಕಾಲಮಾನದಂತೆ ಮಧ್ಯಾಹ್ನ 1 ಗಂಟೆ 4 ನಿಮಿಷಕ್ಕೆ ಗ್ರಹಣ ಆರಂಭವಾಗಲಿದೆ. ಸಂಜೆ 5 ಗಂಟೆ 22 ನಿಮಿಷಕ್ಕೆ ಗ್ರಹಣದ ಮೋಕ್ಷ ಕಾಲವಾಗಿದೆ. ಒಟ್ಟು 4 ಗಂಟೆ 21 ನಿಮಿಷ ಕಾಲ ಚಂದ್ರಗ್ರಹಣ ಸಂಭವಿಸಲಿದ್ದು, ಹಗಲು ಹೊತ್ತಿನಲ್ಲಿ ಗ್ರಹಣ ಇರುವುದರಿಂದ ಭಾರತದಲ್ಲಿ ಗೋಚರಿಸುವುದಿಲ್ಲ.

ಚಂದ್ರಗ್ರಹಣ ಸಮಯದಲ್ಲಿ ಚಂದ್ರ ಕಪ್ಪಾಗುವುದಿಲ್ಲ. ಇದನ್ನು ಪೆನೆಂಬ್ರಲ್ ಗ್ರಹಣವೆನ್ನಲಾಗುತ್ತದೆ. ಆದರೆ. ಚಂದ್ರ ಮಾತ್ರ ಸ್ವಲ್ಪ ಸಮಯದವರೆಗೆ ಕಪ್ಪಾಗಲಿದ್ದು, ಈ ವೇಳೆಗೆ ಗ್ರಹಣ ಮುಗಿದು ಹೋಗಿರುತ್ತದೆ ಎನ್ನಲಾಗಿದೆ.

ಉತ್ತರ ಅಮೆರಿಕ, ದಕ್ಷಿಣ ಅಮೆರಿಕದಲ್ಲಿ ಚಂದ್ರಗ್ರಹಣ ಗೋಚರವಾಗಲಿದೆ. ಯೂರೋಪ್, ಆಸ್ಟ್ರೇಲಿಯಾ, ಏಷ್ಯಾದ ಕೆಲವು ಭಾಗಗಳಲ್ಲಿ ಚಂದ್ರಗ್ರಹಣ ಗೋಚರಿಸುತ್ತದೆ. ಗ್ರಹಣ ಕಾಲದಲ್ಲಿ ಭಾರತದಲ್ಲಿ ಹಗಲಿನ ಸಮಯವಾಗಿರುವುದರಿಂದ ಗ್ರಹಣ ಗೋಚರಿಸುವುದಿಲ್ಲ.

ವರ್ಷದ ಕೊನೆ ಚಂದ್ರಗ್ರಹಣ ನಾಳೆ ಸಂಭವಿಸಲಿದ್ದು ಕಾರ್ತಿಕ ಪೂರ್ಣಿಮೆ ದಿನದಂದೇ ಗ್ರಹಣ ಉಂಟಾಗುವುದು ಶುಭವೋ? ಅಶುಭವೋ? ಎಂಬ ಚರ್ಚೆ ನಡೆದಿದೆ.

ಪೆನಂಬ್ರಲ್ ಚಂದ್ರಗ್ರಹಣ ನವೆಂಬರ್ 30 ರ ಮಧ್ಯಾಹ್ನ ಶುರುವಾಗಲಿದೆ. 3 ಗಂಟೆ 12 ನಿಮಿಷಕ್ಕೆ ಗರಿಷ್ಠಮಟ್ಟದಲ್ಲಿ ಇರುತ್ತದೆ. ಕಾರ್ತಿಕ ಪೂರ್ಣಿಮೆ ಆಚರಿಸುವುದು ಹಿಂದೂ ಧರ್ಮದಲ್ಲಿ ಬಹಳ ಮುಖ್ಯ ಹಬ್ಬವಾಗಿದೆ. ಯಾವುದೇ ದಾನ ಧರ್ಮ ಮಾಡಲು ಇದು ಹೇಳಿ ಮಾಡಿಸಿದ ಸಮಯ. ಈ ಸಮಯದಲ್ಲಿ ದಾನ ಮಾಡಿದರೆ ಜೀವನ ಪರ್ಯಂತ ಲಾಭ ಸಿಗುತ್ತದೆ ಎಂಬ ನಂಬಿಕೆ ಇದೆ.

ಈ ಸಲ ಕಾರ್ತಿಕ ಪೂರ್ಣಿಮೆಯ ದಿನದಂದು ಚಂದ್ರಗ್ರಹಣ ಗೋಚರವಾಗುತ್ತದೆ. ಈ ಗ್ರಹಣವು ಚಂದ್ರ ಮತ್ತು ಭೂಮಿಯ ನೆರಳಿನ ಆಟವಾಗಿದೆ. ಆದ್ದರಿಂದ ಇನ್ನು ಪೆನೆಂಬ್ರಲ್ ಚಂದ್ರಗ್ರಹಣವೆನ್ನಲಾಗುತ್ತದೆ. ಚಂದ್ರಗ್ರಹಣವಿರುವ ಕಾರ್ತಿಕ ಪೂರ್ಣಿಮೆಯ ದಿನ ಅತ್ಯಂತ ಮಹತ್ವದ್ದಾಗಿದೆ. ಈ ದಿನ ಕೈಗೊಳ್ಳುವ ಪೂಜೆಗಳು ಹೆಚ್ಚಿನ ಫಲವನ್ನು ನೀಡುತ್ತವೆ. ಈ ಗ್ರಹಣ ಕಾಲದಲ್ಲಿ ಮಾಡುವ ದಾನಗಳು ಹೆಚ್ಚು ಫಲ ನೀಡುತ್ತವೆ ಎನ್ನಲಾಗಿದೆ.

ಇದು ಪೂರ್ಣ ಚಂದ್ರಗ್ರಹಣವಲ್ಲದ ಕಾರಣ ಋಣಾತ್ಮಕ ಎಂದು ಪರಿಗಣಿಸುವುದಿಲ್ಲ. ಹಾಗಾಗಿ ಈ ದಿನ ಯಾವುದೇ ದೇವಾಲಯಗಳ ಬಾಗಿಲು ಮುಚ್ಚುವುದಿಲ್ಲ. ಧರ್ಮ ಶಾಸ್ತ್ರ ಕಾರ್ಯಗಳು ಮತ್ತು ಪೂಜೆಗಳು ಎಂದಿನಂತೆ ನಡೆಯುತ್ತವೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...