ನವೆಂಬರ್ 30 ಸೋಮವಾರ ಕಾರ್ತಿಕ ಮಾಸದ ಶುಕ್ಲ ಪಕ್ಷದ ಪೂರ್ಣಿಮೆ. ಹಿಂದೂ ಧರ್ಮದಲ್ಲಿ ಹುಣ್ಣಿಮೆಗೆ ವಿಶೇಷ ಮಹತ್ವವಿದೆ. ಹುಣ್ಣಿಮೆ ದಿನ ಪೂಜೆ-ಪ್ರಾರ್ಥನೆ ಜೊತೆಗೆ ದಾನ ಮಾಡುವುದ್ರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ. ಕಾರ್ತಿಕ ಪೂರ್ಣಿಮೆಯಂದು ಜನರು ಗಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡ್ತಾರೆ.
ಶಾಸ್ತ್ರಗಳ ಪ್ರಕಾರ ಹುಣ್ಣಿಮೆ ದಿನ ಮಾಡುವ ಕೆಲವೊಂದು ಕೆಲಸದಿಂದಾಗಿ ಪುಣ್ಯ ಪ್ರಾಪ್ತಿಯಾಗುವ ಜೊತೆಗೆ ಧನ-ಸಂಪತ್ತಿನ ಸಮಸ್ಯೆ ಎಂದೂ ಕಾಡುವುದಿಲ್ಲ.
ಹುಣ್ಣಿಮೆ ದಿನ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಮನೆಯ ಮುಖ್ಯ ದ್ವಾರಕ್ಕೆ ಮಾವಿನ ಎಲೆಯ ತೋರಣವನ್ನು ಕಟ್ಟಿ. ಇದ್ರಿಂದ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶ ಮಾಡುವುದಿಲ್ಲ.
ಕಾರ್ತಿಕ ಮಾಸದ ಹುಣ್ಣಿಮೆ ಈ ಬಾರಿ ಸೋಮವಾರ ಬಂದಿದೆ. ಇದ್ರಿಂದ ಹುಣ್ಣಿಮೆ ಮಹತ್ವ ಮತ್ತಷ್ಟು ಹೆಚ್ಚಾಗಿದೆ. ಶಿವ ದೇವಸ್ಥಾನಕ್ಕೆ ಹೋಗಿ ಎಣ್ಣೆಯನ್ನು ದೇವರಿಗೆ ಅರ್ಪಿಸಿ.
ಕಾರ್ತಿಕ ಮಾಸದ ಹುಣ್ಣಿಮೆ ದಿನ ತುಳಸಿ ಗಿಡದ ಮುಂದೆ ತುಪ್ಪದ ದೀಪವನ್ನು ಹಚ್ಚಿ. ಇದ್ರಿಂದ ಮನೆಯಲ್ಲಿ ಸದಾ ಸೌಭಾಗ್ಯ ನೆಲೆಸಿ ದೌರ್ಭಾಗ್ಯ ದೂರವಾಗುತ್ತದೆ.
ಹುಣ್ಣಿಮೆ ದಿನ 11 ಕವಡೆಯನ್ನು ತಂದು ಅದಕ್ಕೆ ಅರಿಶಿನ ಹಚ್ಚಿ ಕಪಾಟಿನಲ್ಲಿಡಿ. ಹೀಗೆ ಮಾಡಿದಲ್ಲಿ ಲಕ್ಷ್ಮಿ ಕೃಪೆ ಸದಾ ನಿಮ್ಮ ಮೇಲಿರುತ್ತದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003