ಕಾರ್ತಿಕ ಮಾಸ ಶ್ರೀ ಹರಿಗೆ ಪ್ರಿಯವಾದ ಮಾಸ. ಅದಕ್ಕಾಗಿ ತಾಯಿ ಲಕ್ಷ್ಮಿ ದೇವಿಗೂ ಈ ಮಾಸ ಪ್ರಿಯವಾದದ್ದು. ಈ ತಿಂಗಳಲ್ಲಿ ವಿಷ್ಣು ಯೋಗ ನಿದ್ರೆಯಿಂದ ಎಚ್ಚರವಾಗ್ತಾನೆ. ಆಗ ಜಗತ್ತಿನಲ್ಲಿ ಸಂತೋಷ ಮತ್ತು ಕೃಪೆಯ ಮಳೆಯಾಗುತ್ತದೆ. ತಾಯಿ ಲಕ್ಷ್ಮಿ ಭೂಮಿಗೆ ಬಂದು ಭಕ್ತರಿಗೆ ಕೃಪೆ ತೋರುತ್ತಾಳೆಂಬ ನಂಬಿಕೆಯಿದೆ.
ತಾಯಿ ಲಕ್ಷ್ಮಿ ಕೃಪೆಗೆ ಪಾತ್ರರಾಗಲು ಈ ಮಾಸದಲ್ಲಿ ದೀಪಾವಳಿ, ಗೋಪೂಜೆ, ತಾಯಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಈ ತಿಂಗಳಿನಲ್ಲಿ ನೀವು ಮಾಡುವ ವಿಶೇಷ ಪೂಜೆಯಿಂದಾಗಿ ವರ್ಷವಿಡೀ ಧನ-ಸಂಪತ್ತಿನ ಕೊರತೆ ಎದುರಾಗುವುದಿಲ್ಲ. ತಾಯಿ ಲಕ್ಷ್ಮಿ ಕೃಪೆಗಾಗಿ ದೀಪಾವಳಿ ಆಚರಿಸಲಾಗುತ್ತದೆ. ಆದ್ರೆ ಕಾರ್ತಿಕ ಮಾಸದಲ್ಲಿ ಪ್ರತಿದಿನ ನಾವು ಮಾಡುವ ಉಪಾಯದಿಂದ ತಾಯಿ ಲಕ್ಷ್ಮಿ ಸಂತೋಷಗೊಳ್ತಾಳೆ.
ಕಾರ್ತಿಕ ಮಾಸದ ಪ್ರತಿದಿನ ವಿಷ್ಣು ಹಾಗೂ ಲಕ್ಷ್ಮಿಯನ್ನು ಒಟ್ಟಿಗೆ ಪೂಜೆ ಮಾಡಿ. ಗುಲಾಬಿ ಅಥವಾ ಹೊಳೆಯುವ ಬಟ್ಟೆ ಧರಿಸಿ ದೇವರ ಆರಾಧನೆ ಮಾಡಿ.
ಕಾರ್ತಿಕ ಮಾಸದಲ್ಲಿ ಯಾವುದಾದ್ರೂ ಒಂದು ದಿನ ತುಳಸಿ ಗಿಡವನ್ನು ಮನೆಗೆ ತನ್ನಿ.
ಕುಟುಂಬ ಹಾಗೂ ದಾಂಪತ್ಯ ಜೀವನದ ಸುಖಕ್ಕಾಗಿ ತುಳಸಿ ಆರಾಧನೆ ಮಾಡಬೇಕು. ಪ್ರತಿದಿನ ಸಂಜೆ ತುಳಸಿ ಮುಂದೆ ತುಪ್ಪದ ದೀಪವನ್ನು ಹಚ್ಚಬೇಕು.
ಬೆಳಿಗ್ಗೆ ದೀಪ ಬೆಳಗಿ ತುಳಸಿ ಪೂಜೆ ಮಾಡಬೇಕು. ತುಳಸಿ ಪೂಜೆಗೆ ಕಾರ್ತಿಕ ಮಾಸ ಪ್ರಸಿದ್ಧಿ ಪಡೆದಿದೆ. ಪೂಜೆ ಮಾಡಿದ ನಂತ್ರ ಕುಟುಂಬದ ಸಂತೋಷಕ್ಕೆ ಪ್ರಾರ್ಥನೆ ಮಾಡಬೇಕು.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003