
ವರ್ಷದ ಮೊದಲ ಚಂದ್ರ ಗ್ರಹಣ ಮೇ 26ರಂದು ಸಂಭವಿಸಲಿದೆ. ಭಾರತದ ಕಾಲಮಾನ ಮಧ್ಯಾಹ್ನ 2.17ಕ್ಕೆ ಗ್ರಹಣ ಶುರುವಾಗಲಿದ್ದು, ಸಂಜೆ 7.19ಕ್ಕೆ ಗ್ರಹಣ ಬಿಡಲಿದೆ. ಆದ್ರೆ ಭಾರತದಲ್ಲಿ ಚಂದ್ರ ಗ್ರಹಣ ಗೋಚರಿಸುವುದಿಲ್ಲ. ಹಾಗಾಗಿ ಸೂತಕ ಇರುವುದಿಲ್ಲ. ಸೂತಕವಿರದ ಕಾರಣ ಗ್ರಹಣ ಕಾಲದಲ್ಲಿ ದೇವಸ್ಥಾನದ ಬಾಗಿಲು ಮುಚ್ಚುವುದಿಲ್ಲ. ಶುಭ ಕಾರ್ಯಗಳಿಗೆ ಅಡ್ಡಿಯಾಗುವುದಿಲ್ಲ.
ಮೇ 26 ರಂದು ಚಂದ್ರ ಗ್ರಹಣ ಜಪಾನ್, ಸಿಂಗಾಪುರ್, ಬಾಂಗ್ಲಾದೇಶ, ದಕ್ಷಿಣ ಕೊರಿಯಾ, ಬರ್ಮಾ, ಉತ್ತರ ಮತ್ತು ದಕ್ಷಿಣ ಅಮೆರಿಕಾ, ಫಿಲಿಪೈನ್ಸ್, ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರ, ಆಸ್ಟ್ರೇಲಿಯಾ ಮತ್ತು ಉತ್ತರ ಯುರೋಪಿನ ಕೆಲವು ಪ್ರದೇಶಗಳಲ್ಲಿ ಕಾಣಿಸಲಿದೆ.
ಮೇ 26 ರಂದು ಸಂಭವಿಸಲಿರುವ ವರ್ಷದ ಮೊದಲ ಚಂದ್ರಗ್ರಹಣ ವೃಶ್ಚಿಕ ರಾಶಿಯಲ್ಲಿರಲಿದೆ. ಈ ಕಾರಣದಿಂದಾಗಿ ಈ ಗ್ರಹಣದ ಗರಿಷ್ಠ ಪರಿಣಾಮವು ಆ ರಾಶಿಯವರ ಮೇಲಾಗಲಿದೆ. ವೃಶ್ಚಿಕ ರಾಶಿಯವರು ಈ ಗ್ರಹಣ ಸಮಯದಲ್ಲಿ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಮೇಷ, ಕರ್ಕ ಮತ್ತು ಕನ್ಯಾ, ಮಕರ ರಾಶಿಯವರಿಗೆ ಈ ಗ್ರಹಣ ಶುಭಕರವಾಗಿರಲಿದೆ. ಈ ರಾಶಿಯವರ ಸಂಪತ್ತು ವೃದ್ಧಿಯಾಗಲಿದೆ.