ಶಿವ ಪುರಾಣದ ಪ್ರಕಾರ ಶಿವಲಿಂಗ ಪೂಜೆ ಮಾಡುವುದ್ರಿಂದ ಜಾತಕದ ದೋಷ, ವೈವಾಹಿಕ ಜೀವನ ಹಾಗೂ ಉದ್ಯೋಗದ ಸಮಸ್ಯೆಗಳು ದೂರವಾಗುತ್ತವೆಯಂತೆ. ಮನೆಯಲ್ಲಿ ಶಿವಲಿಂಗವನ್ನಿಟ್ಟು ಪೂಜೆ ಮಾಡುವ ವೇಳೆ ಕೆಲವೊಂದು ಸಂಗತಿಗಳನ್ನು ಗಮನದಲ್ಲಿಡಿ.
ಶಿವಲಿಂಗದ ಜೊತೆ ಪಾರ್ವತಿ, ಗಣೇಶ, ಕಾರ್ತಿಕೇಯ ಹಾಗೂ ನಂದಿ ಮೂರ್ತಿಯನ್ನು ಅವಶ್ಯಕವಾಗಿ ದೇವರ ಮನೆಯಲ್ಲಿಟ್ಟು ಪೂಜೆ ಮಾಡಿ. ಪುರಾಣದ ಪ್ರಕಾರ ಪ್ರತಿ ದಿನ ಶಿವ ಹಾಗೂ ಶಿವನ ಕುಟುಂಬದ ಆರಾಧನೆ ಮಾಡಿದ್ರೆ ಎಲ್ಲ ಆಸೆ ಈಡೇರಲಿದೆ.
ಶಿವಲಿಂಗವನ್ನು ಅದ್ಭುತವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ದೊಡ್ಡ ಶಿವಲಿಂಗವನ್ನು ಇಡಬಾರದು. ಸಣ್ಣ ಶಿವಲಿಂಗವನ್ನಿಟ್ಟು ಪೂಜೆ ಮಾಡಬೇಕು. ಪ್ರತಿ ದಿನ ಶಿವಲಿಂಗದ ದರ್ಶನ ಮಾಡಿದ್ರೆ ಯಜ್ಞ ಮಾಡಿದ ಪುಣ್ಯ ಲಭಿಸುತ್ತದೆ. ಶಿವಲಿಂಗದ ಆರಾಧನೆ ಮಾಡಿದ್ರೆ ಜಾತಕದ ದೋಷ ನಿವಾರಣೆಯಾಗುತ್ತದೆ.
ಶಿವ, ಪಾರ್ವತಿ, ಗಣೇಶ, ಕಾರ್ತೀಕೇಯ ಹಾಗೂ ನಂದಿ ಪೂಜೆಯನ್ನು ಒಟ್ಟಿಗೆ ಮಾಡಬೇಕು. ಬೆಳಿಗ್ಗೆ ಹಾಗೂ ಸಂಜೆ ಶಿವಲಿಂಗದ ಮುಂದೆ ದೀಪ ಹಚ್ಚಬೇಕು.
ಮನೆಯಲ್ಲಿ ಶಿವಲಿಂಗವಿದ್ರೆ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ನೀಡಬೇಕು. ಮನೆ ಕೊಳಕಾಗಿದ್ದರೆ ಮಾಡಿದ ಪುಣ್ಯ ಲಭಿಸುವುದಿಲ್ಲ.
ಶಿವಲಿಂಗಕ್ಕೆ ಬಿಲ್ವಪತ್ರೆ ಹಾಗೂ ಗಣೇಶ ಮೂರ್ತಿಗೆ ದರ್ಬೆಯನ್ನು ಅರ್ಪಿಸಿ. ಸಿಹಿಯನ್ನು ಪ್ರತಿ ದಿನ ಪ್ರಸಾದದ ರೂಪದಲ್ಲಿ ನೀಡಬೇಕು.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003