ಮನೆಯ ಕಪಾಟು ಉಳಿತಾಯ ಹಾಗೂ ಭದ್ರತೆಯ ಸಂಕೇತ. ಶನಿ ಹಾಗೂ ಶುಕ್ರ ಗ್ರಹಕ್ಕೂ ಕಪಾಟಿಗೂ ಸಂಬಂಧವಿದೆ. ಬೇರೆ ಬೇರೆ ಕಪಾಟು ಬೇರೆ ಬೇರೆ ಗ್ರಹವನ್ನು ಪ್ರತಿನಿಧಿಸುತ್ತದೆ. ಕಪಾಟು ಸ್ವಚ್ಛವಾಗಿದ್ದರೆ ಆರೋಗ್ಯ, ಜೀವನ ಸರಿಯಿರುತ್ತದೆ.
ಬಟ್ಟೆಯ ಕಪಾಟು ಮುಖ್ಯವಾಗಿ ಶುಕ್ರನಿಗೆ ಸಂಬಂಧ ಹೊಂದಿರುತ್ತದೆ. ಇದನ್ನು ಸ್ವಚ್ಛಗೊಳಿಸಿದ್ರೆ ಶುಕ್ರ ಖುಷಿಯಾಗಿರುತ್ತಾನೆ. ವ್ಯಕ್ತಿ ಜೀವನದಲ್ಲಿ ಸಮೃದ್ಧಿ ನೆಲೆಸಿರುತ್ತದೆ. ಹಾಗಾಗಿ ಬಟ್ಟೆ ಕಪಾಟನ್ನು ಚೆಂದವಾಗಿಡಿ. ಅದ್ರೊಳಗೆ ಆಭರಣ, ಸೌಂದರ್ಯವರ್ಧಕವನ್ನು ಇಡಬೇಡಿ. ಹಾಗೆ ಮಹತ್ವದ ದಾಖಲೆಗಳನ್ನು ಇಡಬೇಡಿ.
ಅಡುಗೆ ಮನೆಯ ಕಪಾಟು ಸೂರ್ಯನಿಗೆ ಸಂಬಂಧ ಹೊಂದಿರುತ್ತದೆ. ಇದ್ರಲ್ಲಿ ಅಡುಗೆ ಮನೆಯ ಸಾಮಗ್ರಿ ಹಾಗೂ ಪಾತ್ರೆಗಳನ್ನು ಇಡಬೇಕು. ಎಂದೂ ಅದನ್ನು ಸಂಪೂರ್ಣವಾಗಿ ಬಂದ್ ಮಾಡಬೇಡಿ. ಬಾಗಿಲು ಪಾರದರ್ಶಕವಾಗಿರಲಿ. ಗ್ಲಾಸ್ ಹಾಗೂ ಮೆಟಲ್ ಪಾತ್ರೆಗಳನ್ನು ಬೇರೆ ಬೇರೆಯಾಗಿಡಿ. ತಿಂಗಳಿಗೆ ಒಮ್ಮೆ ಕಪಾಟನ್ನು ಸ್ವಚ್ಛಗೊಳಿಸಿ.
ಹಣದ ಕಪಾಟು ಗುರುವಿನ ಜೊತೆ ಸಂಬಂಧ ಹೊಂದಿದೆ. ಹಣ, ಆಭರಣ, ಬೆಲೆ ಬಾಳುವ ವಸ್ತುಗಳನ್ನ ಇಡಿ. ಕಪಾಟಿನ ಬಾಗಿಲು ಉತ್ತರ ದಿಕ್ಕಿನಲ್ಲಿ ತೆರೆಯುವಂತಿರಲಿ. ಕಪಾಟಿನ ಬಣ್ಣ ಕಪ್ಪಗಿರದಂತೆ ನೋಡಿಕೊಳ್ಳಿ. ಕಪಾಟಿನಲ್ಲಿ ಕೆಂಪು ಬಣ್ಣದ ಸ್ವಸ್ತಿಕವನ್ನು ಇಡಿ.