ದಾನಕ್ಕಿಂತ ಮಹಾನ್ ಕಾರ್ಯ ಯಾವುದೂ ಇಲ್ಲ ಎಂದು ನಂಬಲಾಗಿದೆ. ಆರ್ಥಿಕ ವೃದ್ಧಿಗಾಗಿ ಮನುಷ್ಯ ಪ್ರಾಣವನ್ನೂ ಪಣಕ್ಕಿಟ್ಟು ಕೆಲಸ ಮಾಡ್ತಾನೆ. ಕಷ್ಟಪಟ್ಟು ದುಡಿದ ಹಣದಲ್ಲಿ ಅಲ್ಪ ಹಣವನ್ನು ದಾನ ಮಾಡಿದ್ರೆ ಪುಣ್ಯ ಪ್ರಾಪ್ತಿಯಾಗುತ್ತದೆ. ಪುರಾಣಗಳ ಪ್ರಕಾರ ದಾನ ಮಾಡುವಾಗ, ದಾನ ಮಾಡುವ ವ್ಯಕ್ತಿಯ ಮುಖ ಪೂರ್ವಕ್ಕಿರಬೇಕು. ದಾನ ಪಡೆಯುವ ವ್ಯಕ್ತಿಯ ಮುಖ ಉತ್ತರ ದಿಕ್ಕಿಗಿರಬೇಕು.
ದಾನ ಮಾಡುವುದು ಮಹಾನ್ ಕಾರ್ಯ ಹೌದು. ಆದ್ರೆ ವಾಸ್ತು ಪ್ರಕಾರ ಕೆಲವು ವಸ್ತುಗಳನ್ನು ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುವ ಬದಲು ಪಾಪ ಸುತ್ತಿಕೊಳ್ಳುತ್ತದೆ. ಹಾಗಾಗಿ ದಾನ ಮಾಡುವಾಗ ಯಾವ ವಸ್ತುವನ್ನು ಮಾಡಿದ್ರೆ ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.
ಈಗಿನ ದಿನಗಳಲ್ಲಿ ಪ್ಲಾಸ್ಟಿಕ್ ಹೆಚ್ಚಾಗಿ ಬಳಕೆ ಮಾಡ್ತಾರೆ. ಮನೆ ಬಳಕೆಗೆ ಪ್ಲಾಸ್ಟಿಕ್ ವಸ್ತುಗಳನ್ನು ಖರೀದಿ ಮಾಡಿ. ಆದ್ರೆ ದಾನ ರೂಪದಲ್ಲಿ ಇದನ್ನು ನೀಡಬೇಡಿ. ಇದು ಕುಟುಂಬದ ಅಭಿವೃದ್ಧಿ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
ಪೊರಕೆಯನ್ನು ದಾನ ಮಾಡಿದ್ರೆ ಹಣ ಅತಿಥಿ ರೂಪದಲ್ಲಿ ಬರುತ್ತದೆ. ಅಂದ್ರೆ ಹಣ ಕೈನಲ್ಲಿ ನಿಲ್ಲೋದಿಲ್ಲ. ದೇವಿ ಲಕ್ಷ್ಮಿ ಕೂಡ ಮುನಿಸಿಕೊಳ್ತಾಳೆ.
ಸ್ಟೀಲ್ ವಸ್ತುಗಳನ್ನು ದಾನ ನೀಡುವ ಬಗ್ಗೆ ಪುರಾಣದಲ್ಲಿ ಯಾವುದೇ ವರ್ಣನೆಯಿಲ್ಲ. ಹಾಗಾಗಿ ಈ ಲೋಹಗಳನ್ನು ದಾನವಾಗಿ ನೀಡಲು ಹೋಗಬೇಡಿ.
ನೀವು ಬಳಸಿದ ಬಟ್ಟೆಯನ್ನು ನಿರ್ಗತಿಕರಿಗೆ ಮಾತ್ರ ದಾನ ಮಾಡಿ. ಬೇರೆಯವರಿಗೆ ದಾನ ಮಾಡಿದ್ರೆ ಲಕ್ಷ್ಮಿ ಕೋಪಗೊಳ್ತಾಳೆ.
ಎಣ್ಣೆಯನ್ನು ದಾನ ಮಾಡುವುದರಿಂದ ಶನಿ ಪ್ರಸನ್ನನಾಗ್ತಾನೆ. ಆದ್ರೆ ಬಳಸಿದ ಹಾಗೂ ಹಾಳಾದ ತೈಲವನ್ನು ದಾನ ಮಾಡಿದ್ರೆ ಶನಿ ದೋಷಕ್ಕೊಳಬೇಕಾಗುತ್ತದೆ.
ತಾಜಾ ಆಹಾರ ದಾನ ಮಾಡುವುದರಿಂದ ಶುಭವಾಗುತ್ತದೆ. ಅದೇ ಹಳೆಯ ಆಹಾರ ದಾನ ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ.