ದೀಪಾವಳಿಗೆ ಎಲ್ಲೆಡೆ ತಯಾರಿ ಜೋರಾಗಿದೆ. ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾದ ವಸ್ತುಗಳು ರಾರಾಜಿಸುತ್ತಿವೆ.
ಹಬ್ಬಕ್ಕೆ ತಯಾರಿ ನಡೆಸಿರುವ ಜನರು ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ನೀವೂ ಮನೆಯನ್ನು ಸ್ವಚ್ಛಗೊಳಿಸುವ ಪ್ಲಾನ್ ನಲ್ಲಿದ್ದರೆ ದೀಪಾವಳಿಗೂ ಮುನ್ನ ಮನೆಯಲ್ಲಿರುವ ಈ ವಸ್ತುಗಳನ್ನು ಹೊರಗೆ ಹಾಕಿ.
ದೀಪಾವಳಿಗೂ ಮೊದಲು, ಮುರಿದ ಪಾತ್ರೆಗಳನ್ನು ಮನೆಯಿಂದ ಹೊರಗೆ ಹಾಕಿ. ಮುರಿದ ಪಾತ್ರೆಗಳನ್ನು ಮನೆಯಲ್ಲಿ ಎಂದಿಗೂ ಬಳಸಬೇಡಿ. ಇದರಿಂದ ವಾಸ್ತು ದೋಷ ಉಂಟಾಗುತ್ತದೆ. ಇವುಗಳಲ್ಲಿ ಆಹಾರವನ್ನು ಬಡಿಸುವುದರಿಂದ ಬಡತನ ಹೆಚ್ಚಾಗುತ್ತದೆ.
ದೀಪಾವಳಿಯ ಮೊದಲು ಒಡೆದ ಗಾಜನ್ನು ಮನೆಯಿಂದ ಹೊರಗೆ ಎಸೆಯಿರಿ. ನಿಮ್ಮ ಮನೆಯಲ್ಲಿ ಯಾವುದೇ ಗಾಜಿನ ಕಿಟಕಿ ಅಥವಾ ಗಾಜು ಒಡೆದರೆ ಅದನ್ನು ಮನೆಯ ಹೊರಗೆ ಹಾಕಬೇಕು. ನಂಬಿಕೆಯ ಪ್ರಕಾರ, ಮುರಿದ ಗಾಜು ದುರಾದೃಷ್ಟದ ಸಂಕೇತ.
ದೀಪಾವಳಿಗೂ ಮೊದಲು ಮುರಿದ ಫೋಟೋವನ್ನು ಮನೆಯಿಂದ ಹೊರಗೆ ಹಾಕಿ. ಕುಟುಂಬದ ಫೋಟೋಗಳು ನಿಮ್ಮ ಮನೆಯಲ್ಲಿ ಹಾಳಾಗಿದ್ದರೆ ಅದನ್ನು ಎಸೆಯುವುದು ಉತ್ತಮ. ಮುರಿದ ಫೋಟೋಗಳಿರುವ ಮನೆಯಲ್ಲಿ ತಾಯಿ ಲಕ್ಷ್ಮಿ ವಾಸಿಸುವುದಿಲ್ಲ.
ಮುರಿದ ಮರದ ಪೀಠೋಪಕರಣಗಳಿದ್ದರೆ ಅದನ್ನು ಬಳಸುವುದು ಸೂಕ್ತವಲ್ಲ. ಮುರಿದ ಕುರ್ಚಿ, ಟೇಬಲ್, ಕಪಾಟುಗಳಿದ್ದರೆ ಇದು ಕುಟುಂಬದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ದೀಪಾವಳಿಯ ಮೊದಲು ಹಾಳಾದ, ಚಾಲ್ತಿಯಲ್ಲಿಲ್ಲದ ಗಡಿಯಾರವನ್ನು ದುರಸ್ಥಿ ಮಾಡಿಸಿ. ಇಲ್ಲವೆ ಅದನ್ನು ಮನೆಯಿಂದ ಹೊರಗೆ ಹಾಕಿ. ಇದು ಮನೆಯ ಸದಸ್ಯರ ಪ್ರಗತಿಯನ್ನು ನಿರ್ಧರಿಸುತ್ತದೆ. ದೀಪಾವಳಿ ಹಬ್ಬದ ಮೊದಲು ಮನೆಯಲ್ಲಿ ಹಾಳಾದ ಅಥವಾ ನಿಂತ ಗಡಿಯಾರವನ್ನು ಎಸೆಯಿರಿ. ಇಲ್ಲವಾದ್ರೆ ಲಕ್ಷ್ಮಿ ಆಶೀರ್ವಾದ ಸಿಗುವುದಿಲ್ಲ.
ಹಾಗೆ ಮನೆಯಲ್ಲಿ ಹಾಳಾದ ದೇವರ ಮೂರ್ತಿಗಳಿದ್ದರೆ ಮತ್ತು ಹಾಳಾದ ಎಲೆಕ್ಟ್ರಿಕಲ್ ವಸ್ತುಗಳಿದ್ದರೆ ಅದನ್ನು ಮನೆ ಸ್ವಚ್ಛಗೊಳಿಸುವ ವೇಳೆ ಕಸಕ್ಕೆ ಹಾಕುವುದು ಒಳ್ಳೆಯದು. ಮನೆಯಲ್ಲಿ ಇಂಥ ವಸ್ತುಗಳಿದ್ದರೆ ಲಕ್ಷ್ಮಿ ನಿಮ್ಮ ಮನೆ ಪ್ರವೇಶಿಸಲು ಮನಸ್ಸು ಮಾಡುವುದಿಲ್ಲ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003