ಶುಭ – ಅಶುಭ ನಂಬಿಕೆಗಳು ಶತಶತಮಾನಗಳಿಂದಲೂ ನಡೆದುಕೊಂಡು ಬಂದಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶುಭ – ಅಶುಭಕ್ಕೂ ನಮ್ಮ ಆಸುಪಾಸಿರುವ ಪ್ರಾಣಿ – ಪಕ್ಷಿಗಳಿಗೂ ಸಂಬಂಧವಿದೆ. ಕಾಗೆಗೆ ಸಂಬಂಧಿಸಿದಂತೆ ಅನೇಕ ನಂಬಿಕೆಗಳು ನಮ್ಮ ಪುರಾಣದಲ್ಲಿವೆ. ನಮ್ಮ ಜೀವನದಲ್ಲಿ ಬರಬಹುದಾದ ಸಂಕಷ್ಟಗಳ ಬಗ್ಗೆ ಕಾಗೆ ಮುನ್ಸೂಚನೆ ನೀಡುತ್ತದೆ.
ಗ್ರಾಮ ಅಥವಾ ಒಂದು ಸ್ಥಳದಲ್ಲಿ ನಾಲ್ಕೈದು ಕಾಗೆಗಳು ಒಟ್ಟಿಗೆ ಕೂಗ್ತಾ ಇದ್ದರೆ ಆ ಗ್ರಾಮಕ್ಕೆ ಆಪತ್ತು ಬರಲಿದೆ ಎಂದರ್ಥ. ಮನೆ ಮುಂದೆ ಕಾಗೆಗಳು ಕೂಗಾಡ್ತಾ ಇದ್ದರೆ ಆ ಮನೆಯ ಯಜಮಾನನಿಗೆ ತೊಂದರೆ ಬರಲಿದೆ.
ವ್ಯಕ್ತಿ ಮೈ ಮೇಲೆ ಕಾಗೆ ಬಂದು ಕುಳಿತರೆ ಆರ್ಥಿಕ ಸಮಸ್ಯೆ ಎದುರಾಗಲಿದೆ.
ಮಹಿಳೆಯೊಬ್ಬಳ ತಲೆ ಮೇಲೆ ಕಾಗೆ ಕುಳಿತ್ರೆ ಆಕೆಯ ಪತಿ ಗಂಭೀರ ಸಮಸ್ಯೆ ಎದುರಿಸಲಿದ್ದಾನೆಂದರ್ಥ.
ಶುಭ ಕಾರ್ಯಕ್ಕೆ ಹೊರಟಾಗ ಕಾಗೆ, ಮುಖದ ಮುಂದೆ ಬಂದು ಕೂಗಿ ಹೋದ್ರೆ ನೀವು ಮಾಡಲಿರುವ ಕಾರ್ಯದಲ್ಲಿ ಯಶಸ್ಸು ಸಿಗಲಿದೆ ಎನ್ನುವುದರ ಮುನ್ಸೂಚನೆ.
ನೀರಿನ ಕೊಡದ ಮೇಲೆ ಕಾಗೆ ಕುಳಿತಿರುವುದನ್ನು ನೋಡಿದ್ರೆ ಆರ್ಥಿಕ ವೃದ್ಧಿಯಾಗಲಿದೆ.
ಬಾಯಲ್ಲಿ ಮಾಂಸ ಅಥವಾ ರೊಟ್ಟಿ ಕಚ್ಚಿಕೊಂಡು ಹೋಗ್ತಾ ಇರುವ ಕಾಗೆ ನೋಡಿದ್ರೆ ಎಲ್ಲ ಮನೋಕಾಮನೆ ಈಡೇರಲಿದೆ ಎಂದರ್ಥ.
ಕಾಗೆ ಕಚ್ಚಿಕೊಂಡು ಹೋಗ್ತಿರುವ ಮೂಳೆ ವ್ಯಕ್ತಿಯ ತಲೆ ಮೇಲೆ ಬಿದ್ದರೆ ಅದು ಅಶುಭವೆಂದು ಪರಿಗಣಿಸಲಾಗಿದೆ.
ಮನೆ ಮಹಡಿ ಮೇಲೆ ಅನೇಕ ಕಾಗೆಗಳು ಬಂದು ಕುಳಿತರೆ ಮೃತ್ಯುವಿನ ಸಂಕೇತ. ಮನೆಯ ಮುಖ್ಯಸ್ಥನಿಗೆ ಇದು ಶುಭವಲ್ಲ.