ನಾಡಿನೆಲ್ಲೆಡೆ ಮಕರ ಸಂಕ್ರಾಂತಿ ಸಂಭ್ರಮ ಮನೆ ಮಾಡ್ತಿದೆ. ಮಕರ ಸಂಕ್ರಾಂತಿ ವಿಶೇಷವಾದದ್ದು. ಪ್ರತಿ ತಿಂಗಳು ಸೂರ್ಯ ರಾಶಿ ಬದಲಿಸುತ್ತಾನೆ. ಆದ್ರೆ 12 ಸಂಕ್ರಾಂತಿಗಳಲ್ಲಿ ಎರಡು ಸಂಕ್ರಾಂತಿ ವಿಶೇಷವಾಗಿದೆ. ಒಂದು ಮಕರ ಸಂಕ್ರಾಂತಿಯಾದ್ರೆ ಇನ್ನೊಂದು ಕರ್ಕ ಸಂಕ್ರಾಂತಿ.
ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡಿದಾಗ ಮಕರ ಸಂಕ್ರಾಂತಿ ಆಚರಿಸಲಾಗುತ್ತದೆ. ಈ ಮೂಲಕ ಉತ್ತರಾಯಣ ಪುಣ್ಯಕಾಲ ಶುರುವಾಗುತ್ತದೆ.
ಸೂರ್ಯ ಹಾಗೂ ಶನಿ ಇಬ್ಬರನ್ನೂ ಈ ದಿನ ಪೂಜಿಸಲಾಗುತ್ತದೆ. ಈ ದಿನ ಸೂರ್ಯ ತನ್ನ ಮಗ ಶನಿಯನ್ನು ಭೇಟಿಯಾಗಲು ಬರ್ತಾನೆ ಎಂಬ ನಂಬಿಕೆಯಿದೆ. ಜಾತಕದಲ್ಲಿ ಸೂರ್ಯ ಅಥವಾ ಶನಿ ಸ್ಥಾನ ಕೆಟ್ಟದಾಗಿದ್ದರೆ ಈ ದಿನ ವಿಶೇಷ ಪೂಜೆ ಮೂಲಕ ಪರಿಸ್ಥಿತಿ ಸುಧಾರಿಸಬಹುದು. ಈ ದಿನ ಸ್ನಾನ, ದಾನ ಹಾಗೂ ಧ್ಯಾನಕ್ಕೆ ವಿಶೇಷ ಮಹತ್ವವಿದೆ.
ಮೊದಲು ಸ್ನಾನ ಮಾಡಿ ಸೂರ್ಯನಿಗೆ ಅರ್ಘ್ಯ ಅರ್ಪಿಸಬೇಕು. ಶ್ರೀಮದ್ ಭಾಗವತವನ್ನು ಅಧ್ಯಯನ ಮಾಡಿ. ಇಲ್ಲವೆ ಭಗವದ್ಗೀತೆಯನ್ನು ಓದಿ. ಹೊಸ ಧಾನ್ಯ, ಕಂಬಳಿ, ತುಪ್ಪವನ್ನು ದಾನ ಮಾಡಿ. ಕೆಂಪು ಹೂ ಮತ್ತು ಅಕ್ಷತೆ ಮೂಲಕ ಸೂರ್ಯನಿಗೆ ಅರ್ಘ್ಯ ನೀಡಿ. ಸೂರ್ಯ ಮಂತ್ರವನ್ನು ಜಪಿಸಿ. ಕೆಂಪು ಬಟ್ಟೆ, ತಾಮ್ರದ ಪಾತ್ರೆ, ಗೋಧಿಯನ್ನು ದಾನವಾಗಿ ನೀಡುವ ಮೂಲಕ ಸೂರ್ಯನ ಕೃಪೆ ಪಡೆಯಿರಿ.
ಶನಿಯನ್ನು ಒಲಿಸಿಕೊಳ್ಳಲು ಎಳ್ಳು-ಅಕ್ಷತೆಯ ಅರ್ಘ್ಯವನ್ನು ಸೂರ್ಯನಿಗೆ ನೀಡಿ. ಶನಿದೇವರ ಮಂತ್ರ ಪಠಿಸಿ. ತುಪ್ಪ, ಕಪ್ಪು ಕಂಬಳಿ, ಕಬ್ಬಿಣವನ್ನು ದಾನ ಮಾಡಿ. ಹಗಲಿನಲ್ಲಿ ಆಹಾರ ಸೇವನೆ ಮಾಡಬೇಡಿ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003