ಹಿಂದೂ ಧರ್ಮದಲ್ಲಿ ಎಲ್ಲ ದೇವರಿಗಿಂತ ಭಗವಂತ ಶಿವ ಬೇಗ ಸಂತೋಷಗೊಳ್ತಾನೆ. ಹಾಗೆ ಬೇಡಿದ್ದೆಲ್ಲವನ್ನೂ ಭಕ್ತರಿಗೆ ನೀಡ್ತಾನೆ. ಶಿವನ ದಿನ ಮಹಾ ಶಿವರಾತ್ರಿಯಂದು ಶ್ರದ್ಧಾ ಭಕ್ತಿಯಿಂದ ದೇವರ ಆರಾಧನೆ ಮಾಡಿದ್ರೆ ಶಿವ ಒಲಿಯೋದ್ರಲ್ಲಿ ಎರಡು ಮಾತಿಲ್ಲ.
ಶಿವನಿಗೆ ಪ್ರಿಯವಾದ ವಸ್ತುಗಳನ್ನು ಅರ್ಪಿಸಿ, ಪೂಜೆ, ವೃತ ಮಾಡಿದ್ರೆ ಬೇಡಿದ್ದನ್ನು ಶಿವ ಭಕ್ತರಿಗೆ ನೀಡ್ತಾನೆ ಎನ್ನಲಾಗಿದೆ. ಆದ್ರೆ ಶಿವರಾತ್ರಿ ದಿನ ಕೆಲವೊಂದು ವಸ್ತುವನ್ನು ಅಪ್ಪಿತಪ್ಪಿಯೂ ಶಿವನಿಗೆ ನೀಡಬಾರದು. ಇದು ಶಿವನ ಕೋಪಕ್ಕೆ ಕಾರಣವಾಗುತ್ತದೆ.
ಶಿವನಿಗೆ ಶಿವ ಭಕ್ತರು ಎಂದೂ ತುಳಸಿ, ಅರಿಶಿನ, ಕುಂಕುಮವನ್ನು ಅರ್ಪಿಸಬಾರದು. ಈ ವಸ್ತುಗಳನ್ನು ಅರ್ಪಿಸಿದ್ರೆ ಭಗವಂತ ಶಿವ ಕೋಪಗೊಳ್ತಾನೆ. ಸಿಂಧೂರ ಹಿಂದೂ ಧರ್ಮದಲ್ಲಿ ವಿವಾಹಿತ ಮಹಿಳೆಯರು ಬಳಸುವಂತಹದ್ದು. ಪತಿಯ ಆಯಸ್ಸಿನ ವೃದ್ಧಿಗೆ ಮಹಿಳೆಯರು ಕುಂಕುಮ ಹಚ್ಚಿಕೊಳ್ತಾರೆ. ಆದ್ರೆ ಶಿವನಿಗೆ ಕುಂಕುಮವನ್ನು ಅರ್ಪಿಸಬಾರದು.
ಸಾಮಾನ್ಯವಾಗಿ ಎಲ್ಲ ದೇವಾನುದೇವತೆಗಳ ಪೂಜೆಗೆ ಅರಿಶಿನವನ್ನು ಬಳಸ್ತಾರೆ. ಆದ್ರೆ ಶಿವನ ಪೂಜೆಗೆ ಅರಿಶಿನ ಅರ್ಪಿಸಬಾರದು. ಇದು ಶಿವನ ಕೋಪಕ್ಕೆ ಕಾರಣವಾಗಬಹುದು. ಹಾಗೆ ತುಳಸಿಯನ್ನು ಶಿವನಿಗೆ ಅರ್ಪಿಸುವುದು ಶುಭವಲ್ಲ. ತುಳಸಿಯನ್ನು ಶಿವನಿಗೆ ಅರ್ಪಿಸಿದ್ರೆ ವಿನಾಶಕ್ಕೆ ದಾರಿ ಮಾಡಿದಂತೆ.