ನಾಳೆ ಕಾರ್ತಿಕ ಹುಣ್ಣಿಮೆ. ಈ ದಿನದಂದು ವ್ರತಾಚರಣೆಯನ್ನು ಮಾಡುವವರಿಗೆ ವಿಶೇಷವಾದ ಫಲ ಸಿಗುತ್ತದೆ. ಹಾಗಾಗಿ ಕಾರ್ತಿಕ ಹುಣ್ಣಿಮೆಯಂದು ಯಾವ ರೀತಿ ಪೂಜೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.
ಕಾರ್ತಿಕ ಹುಣ್ಣಿಮೆಯಂದು ನದಿ ಸ್ನಾನ ಮಾಡಿದರೆ ತುಂಬಾ ಒಳ್ಳೆಯದು. ಆದರೆ ಮನೆಯಲ್ಲಿಯೇ ಸ್ನಾನ ಮಾಡುವವರು ನೀವು ಸ್ನಾನ ಮಾಡುವ ನೀರಿಗೆ ಕಲ್ಲುಪ್ಪನ್ನು ಬೆರೆಸಿ ಸ್ನಾನ ಮಾಡಬೇಕು. ಇದರಿಂದ ನದಿ ಸ್ನಾನ ಮಾಡಿದಷ್ಟೇ ಪುಣ್ಯ ಪ್ರಾಪ್ತಿಯಾಗುತ್ತದೆ.
ಹಾಗೇ ಕಾರ್ತಿಕ ಹುಣ್ಣಿಮೆಯಂದು ಸಂಜೆಯ ವೇಳೆ ಮನೆಯ ಮುಂದೆ ದೀಪಕ್ಕೆ 365 ಬತ್ತಿಗಳನ್ನು ಹಾಕಿ ದೀಪಾರಾಧನೆ ಮಾಡಬೇಕು. ಜೊತೆಗೆ ನೀವು ಹಚ್ಚಿದ ದೀಪದ ಮುಂದೆ ಸಿಹಿ ನೈವೇದ್ಯವನ್ನು ಅರ್ಪಿಸಬೇಕು. ಹಾಗೇ ದೇವಾಲಯದಲ್ಲಿರುವ ಅರಳಿ ಮರದ ಬಳಿ ಹೋಗಿ ಲಕ್ಷ್ಮೀ ನಾರಾಯಣರ ಸ್ಮರಣೆ ಮಾಡಿ 2 ದೀಪಾರಾಧನೆ ಮಾಡಬೇಕು. ಹಾಗೂ ಅರಳಿ ಮರಕ್ಕೆ 21 ಪ್ರದಕ್ಷಿಣೆ ಹಾಕಬೇಕು.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003