ದರಿದ್ರ ದೇವತೆ ಮನೆಯೊಳಗಿದ್ದರೆ ಆ ಮನೆಯಲ್ಲಿ ದಾರಿದ್ರ್ಯ ತಾಂಡವಾಡುತ್ತದೆ. ಎಲ್ಲಾ ಕಡೆಯಿಂದ ಸಮಸ್ಯೆಗಳು ಬಂದೊದಗುತ್ತದೆ. ಈ ದರಿದ್ರ ಲಕ್ಷ್ಮೀಯನ್ನು ಮನೆಯಿಂದ ಹೊರಹಾಕಿ ಮಹಾಲಕ್ಷ್ಮೀಯನ್ನು ಮನೆಯೊಳಗೆ ಬರುವಂತೆ ಮಾಡಲು ವಿಶೇಷವಾದ ಈ ದಿನದಂದು ಈ ಪರಿಹಾರ ಮಾಡಿ.
ದೀಪಾವಳಿಯನ್ನು ಲಕ್ಷ್ಮೀದೇವಿಯ ಹಬ್ಬವೆಂದು ಕರೆಯುತ್ತಾರೆ. ಅಂದು ಧನಲಕ್ಷ್ಮೀ ದೇವಿಯನ್ನು ಪೂಜೆ ಮಾಡಲಾಗುತ್ತದೆ. ಇದರಿಂದ ಮನೆಯಲ್ಲಿ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.
ದೀಪಾವಳಿಯಂದು ಹೊಸ ಪೊರಕೆಯನ್ನು ತೆಗೆದುಕೊಂಡು ಬಂದು ದೇವರ ಕೋಣೆಯನ್ನು ಆ ಪೊರಕೆಯಿಂದ ಗುಡಿಸಿ ಕ್ಲೀನ್ ಮಾಡಿ ಬಳಿಕ ಪೂಜೆ ಮಾಡಿ. ಇದರಿಂದ ದರಿದ್ರ ಲಕ್ಷ್ಮೀ ಮನೆಯಿಂದ ಹೊರಹೋಗಿ ಧನ ಲಕ್ಷ್ಮೀದೇವಿ ನಿಮ್ಮ ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ.