ನವರಾತ್ರಿಯಲ್ಲಿ ತಾಯಿ ದುರ್ಗೆ ಭೂಮಿಯಲ್ಲಿ ವಾಸವಾಗ್ತಾಳೆಂಬ ನಂಬಿಕೆಯಿದೆ. ತಾಯಿ ದುರ್ಗೆಯ 9 ರೂಪಗಳನ್ನು ನವರಾತ್ರಿಯಲ್ಲಿ ಪೂಜೆ ಮಾಡಲಾಗುತ್ತದೆ. ತಾಯಿ ಕೃಪೆಗೆ ಪಾತ್ರರಾಗಲು ಭಕ್ತರು ವಿಶೇಷ ಪೂಜೆ ಜೊತೆಗೆ ವೃತ ಕೈಗೊಳ್ಳುತ್ತಾರೆ.
ನವರಾತ್ರಿ ಈಗಾಗಲೇ ಶುರುವಾಗ್ತಿದೆ. ನವರಾತ್ರಿಗೂ ಮೊದಲೇ ಪೂಜೆಗೆ ಸಿದ್ಧತೆಗಳನ್ನು ಮಾಡಿಕೊಂಡಲ್ಲಿ ಪೂಜೆಯ ದಿನ ಗೊಂದಲ ಏರ್ಪಡುವುದಿಲ್ಲ. ಧಾರ್ಮಿಕ ನಂಬಿಕೆ ಪ್ರಕಾರ ಪ್ರತಿಯೊಂದು ದೇವರಿಗೂ ಒಂದೊಂದು ದಿಕ್ಕುಗಳಿವೆ. ಆಯಾ ದೇವರನ್ನು ಅವರಿಷ್ಟದ ದಿಕ್ಕಿನಲ್ಲಿಯೇ ಪೂಜೆ ಮಾಡಬೇಕು.
ಭಕ್ತರು, ತಾಯಿ ದುರ್ಗೆಯನ್ನು ದಕ್ಷಿಣ ದಿಕ್ಕಿನಲ್ಲಿ ಪೂಜೆ ಮಾಡಬೇಕು. ಪೂಜೆ ಮಾಡುವ ವೇಳೆ ಭಕ್ತರ ಮುಖ ದಕ್ಷಿಣ ಅಥವಾ ಪೂರ್ವ ದಿಕ್ಕಿನಲ್ಲಿರಬೇಕು. ಮಾಡಿದ ಪೂಜೆಗೆ ಫಲ ಸಿಗುವ ಜೊತೆಗೆ ಮಾನಸಿಕ ಒತ್ತಡ ಕಡಿಮೆಯಾಗಲಿದೆ. ದಕ್ಷಿಣ ದಿಕ್ಕಿಗೆ ಮುಖ ಮಾಡಿ ದುರ್ಗೆಯನ್ನು ಪೂಜೆ ಮಾಡುವುದ್ರಿಂದ ಆಸೆಗಳು ಈಡೇರುತ್ತವೆ.
ತಾಯಿ ದುರ್ಗೆಗೆ ಕೆಲವು ಬಣ್ಣಗಳು ಇಷ್ಟ. ಆ ಬಣ್ಣಗಳನ್ನು ಪೂಜಾ ಸ್ಥಾನದಲ್ಲಿಡಬೇಕು. ಹಸಿರು, ಗುಲಾಬಿ ಹಾಗೂ ಹಳದಿ ಬಣ್ಣವೆಂದ್ರೆ ತಾಯಿಗೆ ಪ್ರಿಯ. ವಾಸ್ತು ಶಾಸ್ತ್ರದ ಪ್ರಕಾರವೂ ಈ ಬಣ್ಣ ಶ್ರೇಷ್ಠವಾದದ್ದು. ಈ ಬಣ್ಣ, ಮನೆಯಲ್ಲಿರುವ ನೆಗೆಟಿವ್ ಶಕ್ತಿ ದೂರ ಮಾಡಿ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಪೂಜೆ, ಅರ್ಚನೆ ಮಾಡುವ ಮೊದಲು ಸ್ವಸ್ತಿಕವನ್ನು ರಚಿಸಬೇಕು. ಕುಂಕುಮ ಅಥವಾ ಅರಿಶಿನದಿಂದ ಸ್ವಸ್ತಿಕವನ್ನು ರಚಿಸಬೇಕು. ಪೂಜೆ ಮಾಡುವ ಮೊದಲು ಸ್ವಸ್ತಿಕ ರಚಿಸುವುದು ಶುಭಕರ. ಭಕ್ತರ ಮನೋಕಾಮನೆ ಪೂರ್ಣವಾಗಲಿದೆ ಎಂಬ ನಂಬಿಕೆಯಿದೆ.