ಇಂದಿನಿಂದ ಕಾರ್ತಿಕ ಮಾಸ ಆರಂಭವಾಗಿದೆ. ಕಾರ್ತಿಕ ಮಾಸದಲ್ಲಿ ಶಿವಕೇಶವನನ್ನು ಪೂಜಿಸಲಾಗುತ್ತದೆ. ಈ ಮಾಸದಲ್ಲಿ ದೀಪಾರಾಧನೆ ಮಾಡುವುದು, ದೇವವೃಕ್ಷಗಳನ್ನು ಪೂಜಿಸುವಂತಹದನ್ನು ಮಾಡಿದರೆ ವಿಶೇಷವಾದ ಪುಣ್ಯ ಪ್ರಾಪ್ತಿಯಾಗುತ್ತದೆಯಂತೆ.
ಹಾಗಾಗಿ ಇಂದು ವಿಶೇಷವಾಗಿ ಸೋಮವಾರವಾದ್ದರಿಂದ ಈ ದಿನ ಮನೆಯ ನಾಲ್ಕು ಕಡೆ ದೀಪಾರಾಧನೆ ಮಾಡಿದರೆ ಇಡೀ ಕಾರ್ತಿಕ ಮಾಸದಲ್ಲಿ ದೀಪಾರಾಧನೆ ಮಾಡಿದ ಪುಣ್ಯ ಲಭಿಸುತ್ತದೆ. ಕಾಳ ಸರ್ಪದೋಷಗಳು ನಿವಾರಣೆಯಾಗುತ್ತದೆ. ಹಾಗಾದರೆ ಅದು ಯಾವ ಸ್ಥಳ ಎಂಬುದನ್ನು ತಿಳಿದುಕೊಳ್ಳಿ.
ನಿಮ್ಮ ಮನೆಯ ಬಾಗಿಲಿನ ಹೊಸ್ತಿಲಿನ ಹೊರಗಡೆಯಲ್ಲಿ 2 ದೀಪವನ್ನು ಇಟ್ಟು ದೀಪಾರಾಧನೆ ಮಾಡಿ. ತುಳಸಿ ಕಟ್ಟೆಯ ಮುಂದೆ ಒಂದು ದೀಪವನ್ನಿಟ್ಟರೆ, ಇನ್ನೊಂದು ದೀಪವನ್ನು ದೇವರ ಕೋಣೆಯಲ್ಲಿಟ್ಟು ಪೂಜೆ ಮಾಡಿ. ಹಾಗೇ ಅಡುಗೆ ಮನೆಯಲ್ಲಿಡುವ ಅಕ್ಕಿ ಮೂಟೆಯ ಬಳಿ ಒಂದು ದೀಪವನ್ನಿಡಿ. ಇದರಿಂದ ನಿಮಗೆ ವಿಶೇಷವಾದ ಫಲ ಸಿಗುತ್ತದೆ. ನೀವು ಮಾಡುವ ಕೆಲಸದಲ್ಲಿ ವಿಜಯ ಸಿಗುತ್ತದೆ.