ಇಂದು ಶಿವನ ಅಂಶವಾದ ಕಾಲಭೈರವನ ಅಷ್ಟಮಿ ಇದೆ. ಮೃಗಶಿರ ಮಾಸದ ಶುಕ್ಲ ಪಕ್ಷದಂದು ಬರುವ ಅಷ್ಟಮಿಯನ್ನು ಕಾಲಭೈರವಾಷ್ಟಮಿ ಎನ್ನುತ್ತಾರೆ. ಈ ದಿನ ಕಾಲಭೈರವನಿಗೆ ವಿಶೇಷವಾದ ಪೂಜೆಗಳನ್ನು ಮಾಡಿದರೆ ವಿಶೇಷವಾದ ಫಲಗಳು ದೊರೆಯುತ್ತದೆ.
ಇಂದು ಸ್ನಾನಾಧಿಗಳನ್ನು ಮಾಡಿ ಶಿವನ ಫೋಟೊ ಇಟ್ಟು ಅದಕ್ಕೆ ಹೂಹಣ್ಣುಗಳಿಂದ ಅಲಂಕಾರ ಮಾಡಿ 4 ಬತ್ತಿಗಳನ್ನು ಇಟ್ಟು ದೀಪಾರಾಧನೆ ಮಾಡಬೇಕು. ಬಿಲ್ವದ ಕಾಯಿಯನ್ನು ಶಿವನಿಗೆ ನೈವೇದ್ಯವಾಗಿ ಇಡಿ. ಹಾಗೇ ಪೂಜೆಯ ವೇಳೆ “ಓಂ ಕಾಲಕಾಲಾಯ ವಿದ್ಮಹೇ ಕಾಲಾತೀತಾಯ ಧೀಮಹಿ ತನ್ನೋ ಕಾಲಭೈರವ ಪ್ರಚೋದಯಾತ್ “ ಈ ಮಂತ್ರವನ್ನು 21 ಬಾರಿ ಪಠಿಸಿ.
ಪೂಜೆಯ ಬಳಿಕ ಕಾಲಭೈರವನ ವಾಹನವಾದ ನಾಯಿಗೆ ಗೋಧಿ ಹಿಟ್ಟಿನಿಂದ ಮಾಡಿದ ತಿಂಡಿಗಳನ್ನು ನೀಡಿ. ಇದರಿಂದ ಮನೆಯಲ್ಲಿರುವ ನಕರಾತ್ಮಕ ಶಕ್ತಿ, ಕೆಟ್ಟದೃಷ್ಟಿ ನಿವಾರಣೆಯಾಗಿ ಮನೆಯ ಸದಸ್ಯರ ಆರೋಗ್ಯ ಉತ್ತಮವಾಗಿರುತ್ತದೆ, ಹೋದಲ್ಲಿ ಬಂದಲ್ಲಿ ಯಶಸ್ಸು ಸಿಗುತ್ತದೆ.
ಭವಿಷ್ಯ ಕುರಿತ ಹೆಚ್ಚಿನ ಮಾಹಿತಿಗಾಗಿ: ಪಂಡಿತ್ ಅನಂತ್ ಪ್ರಸಾದ್ ಶರ್ಮಾ 9845626805
ವಿಳಾಸ: ಮೂಕಾಂಬಿಕ ಜ್ಯೋತಿಷ್ಯ ಕೇಂದ್ರ, SS Royal Manson
ಶ್ರೀ ರಾಘವೇಂದ್ರ ಸ್ವಾಮಿ ಮಠದ ಎದುರು
8th ಕ್ರಾಸ್ ಮಲ್ಲೇಶ್ವರಂ ಬೆಂಗಳೂರು – 560003