ಕೃತಕ ಬುದ್ಧಿಮತ್ತೆ (AI) ಬಂದು ಉದ್ಯೋಗ ಕಡಿತವಾಗುತ್ತಿದೆ ಎಂಬ ಸುದ್ದಿಗಳ ನಡುವೆಯೇ ಸಂತಸದ ಸುದ್ದಿ ಒಂದು ಬಂದಿದೆ. ಭಾರತದಲ್ಲಿ ಕೃತಕ ಬುದ್ಧಿಮತ್ತೆ ಕ್ಷೇತ್ರದಿಂದ 40 ಲಕ್ಷ ಹೊಸ ಉದ್ಯೋಗಗಳ ಸೃಷ್ಟಿಯ ನಿರೀಕ್ಷೆ ಇದೆ.
ಕೃತಕ ಬುದ್ಧಿಮತ್ತೆ ಕೋರ್ಸ್‌ಗಳ ಆನ್‌ಲೈನ್ ತರಬೇತಿ ಕರ್ನಾಟಕ ರಾಜ್ಯಾದ್ಯಂತ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನ್ಯಾಷನಲ್ ಸ್ಕಿಲ್ ಅಕಾಡೆಮಿಯು ಕರ್ನಾಟಕ ರಾಜ್ಯಾದ್ಯಂತ ಕೃತಕ ಬುದ್ಧಿಮತ್ತೆ ಕೋರ್ಸ್‌ಗಳ ಆನ್‌ಲೈನ್ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸುತ್ತಿದೆ ಎಂದು ಹೇಳಿದ್ದು, ವಿವರ ನೀಡಿದೆ.
ಇಂಟರ್ ಮೀಡಿಯಟ್, ಎಂಜಿನಿಯರಿಂಗ್, ಯಾವುದೇ ಪದವಿ, ಸ್ನಾತಕೋತ್ತರ ಪದವಿ, ಪಾಲಿಟೆಕ್ನಿಕ್ ಡಿಪ್ಲೊಮಾ ಪೂರೈಸಿದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ವೃತ್ತಿಪರರು ಈ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಹೊಸ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಲ್ಲಿ ತಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ನ್ಯಾಷನಲ್ ಸ್ಕಿಲ್ ಅಕಾಡೆಮಿಯು ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಿಗಳಿಗೆ ಒಂದು ವಿಶೇಷ ಅವಕಾಶವನ್ನು ನೀಡುತ್ತಿದೆ.
ಕೋರ್ಸ್‌ಗಳು
- ಡಿಪ್ಲೊಮಾ ಇನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (Diploma in AI)
- ಪಿಜಿ ಡಿಪ್ಲೊಮಾ ಇನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (PG Diploma in AI)
- ಮಾಸ್ಟರ್ ಪ್ರೋಗ್ರಾಂ ಇನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್
- ಡಿಪ್ಲೊಮಾ ಇನ್ ಎಐ ಮತ್ತು ಮೆಷಿನ್ ಲರ್ನಿಂಗ್ (AI & Machine Learning)
- ಪಿಜಿ ಡಿಪ್ಲೊಮಾ ಇನ್ ಎಐ ಮತ್ತು ಮೆಷಿನ್ ಲರ್ನಿಂಗ್
- ಮಾಸ್ಟರ್ ಪ್ರೋಗ್ರಾಂ ಇನ್ ಎಐ ಮತ್ತು ಮೆಷಿನ್ ಲರ್ನಿಂಗ್
ಈ ಕೋರ್ಸ್‌ಗಳನ್ನು ಆನ್‌ಲೈನ್ ತರಬೇತಿಯ ಮೂಲಕ ನಡೆಸಲಾಗುವುದು ಮತ್ತು ತರಬೇತಿಯ ನಂತರ ಪರೀಕ್ಷೆಗಳಿರುತ್ತವೆ. ಯಶಸ್ವಿಯಾಗಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರಿ ಸಂಸ್ಥೆಯಿಂದ ಅನುಮೋದಿತ ಪ್ರಮಾಣಪತ್ರಗಳನ್ನು ನೀಡಲಾಗುವುದು.
ಕೋರ್ಸ್‌ಗಳ ಅವಧಿಯು 5 ತಿಂಗಳಿನಿಂದ 10 ತಿಂಗಳವರೆಗೆ ಇರುತ್ತದೆ. ಕೃತಕ ಬುದ್ಧಿಮತ್ತೆಯು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನವಾಗಿದ್ದು, ಸಾಫ್ಟ್‌ವೇರ್, ಮಾಹಿತಿ ತಂತ್ರಜ್ಞಾನ, ಹಣಕಾಸು ಸೇವೆಗಳು, ಆರೋಗ್ಯ ರಕ್ಷಣೆ, ಎಂಜಿನಿಯರಿಂಗ್, ಮಾಧ್ಯಮ, ಮಾರ್ಕೆಟಿಂಗ್, ಸರ್ಕಾರಿ ಮತ್ತು ರಕ್ಷಣೆ, ರಾಷ್ಟ್ರೀಯ ಭದ್ರತೆ, ಕೃಷಿ, ಗೇಮಿಂಗ್ ಮತ್ತು ಶಿಕ್ಷಣ ಸೇರಿದಂತೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಪರಿಣಿತ AI ವೃತ್ತಿಪರರ ಅಗತ್ಯವಿದೆ.
ಭಾರತ ಸರ್ಕಾರದ ನೀತಿ ಆಯೋಗದ ಪ್ರಕಾರ, ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ ಸುಮಾರು 40 ಲಕ್ಷ ಹೊಸ ಉದ್ಯೋಗಗಳು ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸೃಷ್ಟಿಯಾಗುವ ನಿರೀಕ್ಷೆಯಿದೆ.
ಈ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಭಾರತ ಮತ್ತು ವಿದೇಶಗಳಲ್ಲಿ ಹೆಚ್ಚಿನ ಸಂಬಳದೊಂದಿಗೆ ಅತ್ಯುತ್ತಮ ಉದ್ಯೋಗಾವಕಾಶಗಳು ದೊರೆಯಲಿವೆ.

