HomeLatest NewsBREAKING : ರಣಹದ್ದು ಬಗ್ಗೆ ಕಿಚ್ಚ ಸುದೀಪ್ ಹೇಳಿಕೆ : 'ಬಿಗ್ ಬಾಸ್' ಪ್ರೋಗ್ರಾಂ...

BREAKING : ರಣಹದ್ದು ಬಗ್ಗೆ ಕಿಚ್ಚ ಸುದೀಪ್ ಹೇಳಿಕೆ : ‘ಬಿಗ್ ಬಾಸ್’ ಪ್ರೋಗ್ರಾಂ ಹೆಡ್ ಗೆ ಅರಣ್ಯ ಇಲಾಖೆ ನೋಟಿಸ್.!

ಬೆಂಗಳೂರು : ಬಿಗ್ ಬಾಸ್-12 ರಿಯಾಲಿಟಿ ಶೋ ನಲ್ಲಿ ರಣಹದ್ದುಗಳ ಬಗ್ಗೆ ನಟ ಕಿಚ್ಚ ಸುದೀಪ್ ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಪ್ರೋಗ್ರಾಂ ಹೆಡ್ ಗೆ ಅರಣ್ಯ ಇಲಾಖೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

ರಣಹದ್ದು ಸಂರಕ್ಷಣಾ ಟ್ರಸ್ಟ್ ನೀಡಿದ ದೂರಿನನ್ವಯ ಅಧಿಕಾರಿಗಳು ನೋಟಿಸ್ ನೀಡಿ ಈ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಪ್ರೇಕ್ಷಕರಿಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದ್ದಾರೆ.

ಹದ್ದು ಹಾಗೂ ರಣದ್ದಿಗೂ ಬಹಳ ವ್ಯತ್ಯಾಸವಿದೆ. ವಾರದ ಕಥೆ ಕಿಚ್ಚನ ಕಾರ್ಯಕ್ರಮದಲ್ಲಿ ರಣಹದ್ದು ಹೊಂಚು ಹಾಕಿ ಸಂಚು ಮಾಡಿ ಲಬಕ್ ಅಂತ ಹಿಡಿಯುವುದು ಎಂದು ತಪ್ಪು ಮಾಹಿತಿ ನೀಡಲಾಗಿದೆ. ಇದರಿಂದ ಪಕ್ಷಿ ಪ್ರೇಮಿಗಳಿಗೆ ಬೇಸರ ಆಗಿದೆ. ಆದ್ದರಿಂದ ಹದ್ದು ಹಾಗೂ ರಣಹದ್ದುಗೂ ಇರುವ ವ್ಯತ್ಯಾಸದ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಪ್ರೋಗ್ರಾಂ ಹೆಡ್ ಗೆ ನೋಟಿಸ್ ನೀಡಿ ಸೂಚನೆ ನೀಡಲಾಗಿದೆ. ರಾಮನಗರ ಡಿಆರ್ ಎಫ್ ಒ ಸುಷ್ಮಾ ಈ ನೋಟಿಸ್ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏನದು ಕಿಚ್ಚ ಸುದೀಪ್ ಹೇಳಿಕೆ..?

ಹದ್ದು ಯಾವಾಗಲೂ ಜೀವಂತ ಪ್ರಾಣಿಗಳನ್ನ ಬೇಟಿಯಾಡಲ್ಲ. ಸತ್ತ ಪ್ರಾಣಿಗಳನ್ನ ಬೇಟೆಯಾಡುತ್ತದೆ. ಈ ಮೂಲಕ ಪರಿಸರವನ್ನು ಕ್ಲೀನ್ ಮಾಡುವ ಕೆಲಸ ಮಾಡುತ್ತದೆ. ಆದರೆ ಸುದೀಪ್ ಅವರು ಬಿಗ್ ಬಾಸ್ ಶೋನಲ್ಲಿ ರಣಹದ್ದು ಹೊಂಚು ಹಾಕಿ ಸಂಚು ಮಾಡಿ ಹಿಡಿಯುತ್ತದೆ’ ಎಂದು ಹೇಳಿಕೆ ನೀಡಿದ್ದಾರೆ. ಸುದೀಪ್ ಹೇಳಿದ ಹಾಗೆ ಹದ್ದು ಆ ತರಹದ ಪಕ್ಷಿ ಅಲ್ಲ..ಸುದೀಪ್ ವೀಕ್ಷಕರಿಗೆ ಸರಿಯಾದ ರೀತಿಯಲ್ಲಿ ಅರ್ಥೈಸಬೇಕು ಎಂದು ದೂರಿನಲ್ಲಿ ರಣಹದ್ದು ಸಂರಕ್ಷಣಾ ಟ್ರಸ್ಟ್ ಆಗ್ರಹಿಸಿತ್ತು.

ರಣಹದ್ದುಗಳ ಬಗ್ಗೆ ನಟ ಕಿಚ್ಚ ಸುದೀಪ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ‘ಹೊಂಚು ಹಾಕಿ ಸಂಚು ಮಾಡಿ ಹಿಡಿಯುವುದು’ ಎಂಬ ಪದ ಬಳಕೆ ಮಾಡಿದ್ದಾರೆ.ಸುದೀಪ್ ಈ ಪದ ಬಳಕೆ ಮಾಡಿದ್ದು ತಪ್ಪು . ಈ ಬಗ್ಗೆ ಪ್ರೇಕ್ಷಕರಿಗೆ ನಟ ಸುದೀಪ್ ಕ್ಲಾರಿಟಿ ಕೊಡಲಿ, ಸರಿಯಾದ ವಿವರಣೆ ಕೊಡಲಿ ಎಂದು ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ಆಗ್ರಹಿಸಿ ಬೆಂಗಳೂರು ದಕ್ಷಿಣ ಡಿಎಫ್ಒ ರಾಮಕೃಷ್ಣಪ್ಪಗೆ ದೂರು ನೀಡಿತ್ತು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular