HomeLatest Newsಬಿಡುಗಡೆಯಾಗಿ ವರ್ಷ ಕಳೆದರೂ ನಿಲ್ಲದ ‘ಕಾಂತಾರ’ ಅಬ್ಬರ: ರಿಷಬ್ ಶೆಟ್ಟಿ ಸಿನಿಮಾದ ಹೆಸರಿಗೆ ಸೇರಿತು ಮತ್ತೊಂದು...

ಬಿಡುಗಡೆಯಾಗಿ ವರ್ಷ ಕಳೆದರೂ ನಿಲ್ಲದ ‘ಕಾಂತಾರ’ ಅಬ್ಬರ: ರಿಷಬ್ ಶೆಟ್ಟಿ ಸಿನಿಮಾದ ಹೆಸರಿಗೆ ಸೇರಿತು ಮತ್ತೊಂದು ಗರಿ

ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಿಡುಗಡೆಯಾಗಿ ವರ್ಷ ಕಳೆದಿದ್ದರೂ ತನ್ನ ದಾಖಲೆಗಳ ಸರಣಿಯನ್ನು ಮುಂದುವರಿಸಿದೆ. ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿರುವ ಈ ಭಕ್ತಿಪ್ರಧಾನ ಚಿತ್ರ ಇದೀಗ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಅಪರೂಪದ ಸಾಧನೆಯೊಂದನ್ನು ತನ್ನದಾಗಿಸಿಕೊಂಡಿದೆ. ಸದ್ಯಕ್ಕೆ ಬೇರೆ ಯಾವುದೇ ಸಿನಿಮಾ ಮುರಿಯಲು ಸಾಧ್ಯವಾಗದಂತಹ ಐತಿಹಾಸಿಕ ಮೈಲಿಗಲ್ಲನ್ನು ಈ ಚಿತ್ರ ನೆಟ್ಟಿದೆ.

ಚಿತ್ರಕ್ಕೆ ಬಿ. ಅಜನೀಶ್ ಲೋಕನಾಥ್ ಅವರು ಸಂಯೋಜಿಸಿರುವ ‘ಬ್ರಹ್ಮಲಕ್ಷ’ ಹಾಡು ಇನ್‌ಸ್ಟಾಗ್ರಾಮ್‌ನಲ್ಲಿ 1 ಮಿಲಿಯನ್‌ಗೂ (10 ಲಕ್ಷ) ಹೆಚ್ಚು ರೀಲ್ಸ್‌ಗಳಲ್ಲಿ ಬಳಕೆಯಾಗುವ ಮೂಲಕ ಈ ಸಾಧನೆ ಮಾಡಿದ ಕನ್ನಡದ ಮೊದಲ ಸಿನಿಮಾ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಭಕ್ತಿಗೀತೆ ಭಾರೀ ಟ್ರೆಂಡ್ ಸೃಷ್ಟಿಸಿದ್ದು, ಲಕ್ಷಾಂತರ ಜನ ಈ ಹಾಡಿಗೆ ರೀಲ್ಸ್ ಮಾಡುವ ಮೂಲಕ ರೀಲ್ಸ್ ಲೋಕದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗಿದ್ದ ಈ ಪ್ರಿಕ್ವೆಲ್ ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆಗೆ ನಟಿ ರುಕ್ಮಿಣಿ ವಸಂತ್ ನೆಗೆಟಿವ್ ಶೇಡ್ ಇರುವ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು. ಈ ಚಿತ್ರದ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ ಇದೀಗ ‘ಕಾಂತಾರ 3’ ಚಿತ್ರದ ಸಿದ್ಧತೆಗಳು ನಡೆಯುತ್ತಿದ್ದು, ಶೀಘ್ರದಲ್ಲೇ ಈ ಮುಂದಿನ ಭಾಗದ ಚಿತ್ರೀಕರಣ ಆರಂಭವಾಗಲಿದೆ ಎಂದು ವರದಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular