ಮುಂಬೈನ ಜಿಯೋ ವರ್ಲ್ಡ್ ಸೆಂಟರ್ನಲ್ಲಿ ಇತ್ತೀಚೆಗೆ ನಡೆದ ‘ಇಂಡಿಯಾ ಕ್ಯುಟೂರ್ ವೀಕ್ 2026’ ಫ್ಯಾಷನ್ ಶೋನಲ್ಲಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ಪ್ರಖ್ಯಾತ ಡಿಸೈನರ್ ಗೌರವ್ ಗುಪ್ತಾ ಅವರ ಹೊಸ ಕಲೆಕ್ಷನ್ ಪ್ರದರ್ಶನಕ್ಕೆ ಶೋಸ್ಟಾಪರ್ ಆಗಿ ರ್ಯಾಂಪ್ ವಾಕ್ ಮಾಡಿದರು. ಆದರೆ, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಅನನ್ಯಾ ಅವರ ಉಡುಪಿಗಿಂತಲೂ ಹೆಚ್ಚಾಗಿ, ವೇದಿಕೆಯ ಮೇಲೆ ನಡೆದ ಒಂದು ಘಟನೆಯ ವಿಡಿಯೋ ಭಾರೀ ಚರ್ಚೆಗೆ ಕಾರಣವಾಗಿದೆ.
ರ್ಯಾಂಪ್ ವಾಕ್ ಮುಗಿಸಿ ಇಬ್ಬರೂ ಜೊತೆಯಾಗಿ ಪೋಸ್ ನೀಡುವಾಗ, ಡಿಸೈನರ್ ಗೌರವ್ ಗುಪ್ತಾ ಅವರು ಅನನ್ಯಾ ಪಾಂಡೆ ಅವರ ಸೊಂಟವನ್ನು ಲಘುವಾಗಿ ಚಿವುಟುವ ಅಥವಾ ಮುಟ್ಟುವ ಮೂಲಕ ತಮಾಷೆಯಾಗಿ ವರ್ತಿಸಿದ್ದಾರೆ. ಈ ಸಂದರ್ಭದಲ್ಲಿ ಅನನ್ಯಾ ನಸುನಗುತ್ತಾ ಪಕ್ಕಕ್ಕೆ ಸರಿದು ಡಿಸೈನರ್ಗೆ ಚಪ್ಪಾಳೆ ತಟ್ಟಿದ್ದಾರೆ. ಸದ್ಯ ಈ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಎರಡು ಗುಂಪಾಗಿ ಪರ-ವಿರೋಧದ ಚರ್ಚೆ ಆರಂಭಿಸಿದ್ದಾರೆ.
ಕೆಲವರು ಇದು ಇಬ್ಬರ ನಡುವಿನ ಸ್ನೇಹಪರ ಮತ್ತು ತಮಾಷೆಯ ನಡವಳಿಕೆ, ಇಬ್ಬರೂ ನಗುತ್ತಿರುವುದನ್ನು ನೋಡಿದರೆ ಅವರಿಗೆ ಯಾವುದೇ ಮುಜುಗರವಾಗಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ ಮತ್ತೊಂದು ವರ್ಗದ ನೆಟ್ಟಿಗರು, ಸಾರ್ವಜನಿಕ ವೇದಿಕೆಯಲ್ಲಿ ಈ ರೀತಿಯ ವರ್ತನೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸೋಶಿಯಲ್ ಮೀಡಿಯಾ ಚರ್ಚೆಗಳ ಬಗ್ಗೆ ಅನನ್ಯಾ ಆಗಲಿ ಅಥವಾ ಗೌರವ್ ಗುಪ್ತಾ ಆಗಲಿ ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅನನ್ಯಾ ಪಾಂಡೆ ಉಡುಪು ಮತ್ತು ಸಿನಿಮಾಗಳು: ಈ ಫ್ಯಾಷನ್ ಶೋನಲ್ಲಿ ಅನನ್ಯಾ ಬಿಳಿ ಬಣ್ಣದ ಆಕರ್ಷಕ ಲೆಹೆಂಗಾ ಹಾಗೂ ಡೈಮಂಡ್ ಮೂಗುತಿ ಧರಿಸಿ ಮಾಡರ್ನ್ ವಧುವಿನ ಲುಕ್ನಲ್ಲಿ ಕಂಗೊಳಿಸಿದ್ದರು. ಇನ್ನು ಸಿನಿಮಾಗಳ ವಿಷಯಕ್ಕೆ ಬಂದರೆ, ಮೇ ತಿಂಗಳಲ್ಲಿ ಬಿಡುಗಡೆಯಾಗಿದ್ದ ಲಕ್ಷ್ಯ ಅಭಿನಯದ ‘ಚಾಂದ್ ಮೇರಾ ದಿಲ್’ ಚಿತ್ರದಲ್ಲಿ ಅನನ್ಯಾ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಅವರು ಮಾಡಿದ್ದ ಭರತನಾಟ್ಯ ಫ್ಯೂಷನ್ ನೃತ್ಯ ಕೂಡ ಸಾಕಷ್ಟು ಟ್ರೋಲ್ ಆಗಿತ್ತು. ಸದ್ಯ ಅನನ್ಯಾ ತಮ್ಮ ಮುಂದಿನ ವೆಬ್ ಸರಣಿ ‘ಕಾಲ್ ಮೀ ಬೇ ಸೀಸನ್ 2’ ನಲ್ಲಿ ಬ್ಯುಸಿಯಾಗಿದ್ದಾರೆ.
https://www.instagram.com/reel/Da8zc2aTLnv
Bro, what’s going on with Ananya Panday? Is it flirting or harassment? pic.twitter.com/hePI7vZtYt
— Aditya (@Warlock_Aditya) July 18, 2026
Who was the man Ananya Panday walked the runway with?
He placed his hand on her waist and rubbed it with his fingers.
The shocking part is that Ananya did not stop him.
This is a troubling example of how some Bollywood celebrities tolerate inappropriate behavior. pic.twitter.com/DHBwyqikA4
— Chota Don (@choga_don) July 18, 2026

