HomeEntertainmentನಾಳೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಖ್ಯಾತ ನಟ ಸಲ್ಮಾನ್ ಖಾನ್ ಸೋದರ ಅರ್ಬಾಜ್ ಖಾನ್: ವಧು...

ನಾಳೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಖ್ಯಾತ ನಟ ಸಲ್ಮಾನ್ ಖಾನ್ ಸೋದರ ಅರ್ಬಾಜ್ ಖಾನ್: ವಧು ಯಾರು ಗೊತ್ತಾ…?

ಮುಂಬೈ: ಚಿತ್ರರಂಗದ ಪ್ರಸಿದ್ಧ ನಟರಲ್ಲಿ ಒಬ್ಬರಾದ, ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ ಬಗ್ಗೆ ಶುಭ ಸುದ್ದಿಯೊಂದು ಹೊರಬಿದ್ದಿದೆ.

ಖಾನ್ ಕುಟುಂಬದಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದ್ದು, ಡಿಸೆಂಬರ್ 24 ರಂದು ಅರ್ಬಾಜ್ ಖಾನ್ ವಿವಾಹವಾಗಲಿದ್ದಾರೆ. ಈ ಮದುವೆಗೆ ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಮಾತ್ರ ಭಾಗವಹಿಸಲಿದ್ದಾರೆ. ನಟನ ಮದುವೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ, ಅರ್ಬಾಜ್ ಖಾನ್ ಅವರ ಭಾವಿ ಪತ್ನಿ ಯಾರು? ಎನ್ನುವುದೇ ಕುತೂಹಲಕ್ಕೆ ಕಾರಣವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶುರಾ ಖಾನ್ ಅವರನ್ನು ಅರ್ಬಾಜ್ ಖಾನ್ ಮದುವೆಯಾಗಲಿದ್ದಾರೆ. ಶುರಾ ಖಾನ್ ವೃತ್ತಿಪರ ಪ್ರಸಿದ್ಧ ಮೇಕಪ್ ಕಲಾವಿದೆ. ರವೀನಾ ಟಂಡನ್ ಮತ್ತು ಅವರ ಮಗಳು ರಾಶಾ ಅವರ ಮೇಕಪ್ ಕಲಾವಿದೆಯೂ ಹೌದು. ನಾಳೆ ಅಂದರೆ ಡಿಸೆಂಬರ್ 24 ರಂದು ಅವರು ಖಾನ್ ಕುಟುಂಬದ ಸೊಸೆಯಾಗಲಿದ್ದಾರೆ.

ನಟರಾದ ಅರ್ಬಾಜ್ ಖಾನ್-ಶುರಾ ಖಾನ್ ಅವರ ವಿವಾಹವು ನಾಳೆ ಮಧ್ಯಾಹ್ನ ಅವರ ಸಹೋದರಿ ಅರ್ಪಿತಾ ಅವರ ಮುಂಬೈ ಮನೆಯಲ್ಲಿ ನಡೆಯಲಿದೆ. ಅವರ ಕುಟುಂಬದವರು ಮತ್ತು ಆಪ್ತರು ಮಾತ್ರ ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ವರದಿಗಳ ಪ್ರಕಾರ, ಅರ್ಬಾಜ್ ಮತ್ತು ಶೌರಾ ಖಾನ್ ಮೊದಲು ಭೇಟಿಯಾದದ್ದು ‘ಪಟ್ನಾ ಶುಕ್ಲಾ’ ಚಿತ್ರದ ಸೆಟ್‌ನಲ್ಲಿ.

ಅರ್ಬಾಜ್ ಖಾನ್ 1996 ರಲ್ಲಿ ‘ದಾರಾರ್’ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ ಚಿತ್ರದಲ್ಲಿನ ಪಾತ್ರಕ್ಕಾಗಿ ಅವರು ಫಿಲ್ಮ್‌ ಫೇರ್ ಪ್ರಶಸ್ತಿ ಪಡೆದರು. ಅರ್ಬಾಜ್ ‘ಪ್ಯಾರ್ ಕಿಯಾ ತೊ ಡರ್ನಾ ಕ್ಯಾ’, ‘ಹುಲ್ಚಲ್’, ‘ಭಾಗಂ ಭಾಗ್’, ‘ಜಾನೆ ತೂ ಯಾ ಜಾನೇ ನಾ’ ಮುಂತಾದ ಹಲವು ಚಿತ್ರಗಳ ಭಾಗವಾದರು. 2012 ರಲ್ಲಿ ಅರ್ಬಾಜ್ ‘ದಬಾಂಗ್ 2’ ಮೂಲಕ ನಿರ್ದೇಶನ ಕ್ಷೇತ್ರವನ್ನು ಪ್ರವೇಶಿಸಿದರು, ಅವರು ‘ದಬಾಂಗ್’ ನ ಉಳಿದ ಕಂತುಗಳ ನಿರ್ಮಾಪಕರಾಗಿ ಉಳಿದರು. ಅರ್ಬಾಜ್ ಖಾನ್ ಅವರು ‘ತನವ್’ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಮಲೈಕಾ ಅರೋರಾರಿಂದ ದೂರವಾದ ವರ್ಷಗಳ ನಂತರ ಅರ್ಬಾಜ್ ಖಾನ್ ಮದುವೆಯಾಗುತ್ತಿದ್ದು, ಹಿಂದೆ ಮಲೈಕಾ ಅರೋರಾ –ಅರ್ಜುನ್ ಕಪೂರ್ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ವದಂತಿ ಹರಡಿತ್ತು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular