ಧಾರವಾಡ : ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯು ವಿಪ್ರ ಸ್ವ ಉದ್ಯಮ ನೇರ ಸಾಲ ಯೋಜನೆಯ ಮೂಲಕ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದವರು ಗುಡಿಕೈಗಾರಿಕೆ, ಸಣ್ಣ ಕೈಗಾರಿಕೆ, ಹೋಟೆಲ್ ಉದ್ಯಮ (ಕ್ಯಾಟರಿಂಗ್), ಅಂಗಡಿ, ಟೈಲರಿಂಗ್, ಟ್ಯಾಕ್ಸಿ ಹಾಗೂ ಹಸುಸಾಕಾಣಿಕೆಯಂತಹ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯ ಅಡಿಯಲ್ಲಿ ಕನಿಷ್ಠ ರೂ. 1 ಲಕ್ಷ ಹಾಗೂ ಗರಿಷ್ಠ ರೂ.2 ಲಕ್ಷಗಳ ಸಾಲ-ಸಹಾಯಧನ ನೀಡಲಾಗುವುದು. ಇದರಲ್ಲಿ ಶೇ. 20 ಸಬ್ಸಿಡಿಯನ್ನು ನೀಡಲಾಗುತ್ತದೆ. ಉಳಿಕೆ ಶೇ. 80 ಸಾಲದ ಮೊತ್ತಕ್ಕೆ ಶೇ. 4 ರಷ್ಟು ಬಡ್ಡಿಯಂತೆ ಒಟ್ಟು 34 ಕಂತುಗಳಲ್ಲಿ ಸಾಲ ಮರು ಪಾವತಿಸಬೇಕು.
ಮಹಿಳೆಯರಿಗೆ ಶೇ. 33 ಹಾಗೂ ವಿಶೇಷಚೇತನರಿಗೆ ಶೇ. 5 ಮೀಸಲಾತಿಯನ್ನು ನೀಡಲಾಗುವುದು. ಅರ್ಹ ಅಭ್ಯರ್ಥಿಗಳೂ ಅಗಸ್ಟ್ 31, 2026 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ 8762249230 ಗೆ ಅಥವಾ ವೆಬ್ಸೈಟ್ Ksbdb.karnataka.gov.in ಗೆ ಭೇಟಿ ನೀಡಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಸತಿ ನಿಲಯ, ವಸತಿ ಶಾಲೆ, ಕಾಲೇಜುಗಳ ನೋಂದಣಿ ಕಡ್ಡಾಯ
ರಾಜ್ಯದಲ್ಲಿ 06 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು, ನಾಗರೀಕ ಸಮಾಜ ಸಂಸ್ಥೆಗಳು, ಟ್ರಸ್ಟ್, ಧಾರ್ಮಿಕ, ಖಾಸಗಿ ವೈಯಕ್ತಿಕವಾಗಿ ನಡೆಸಲ್ಪಡುವ ಯಾವುದೇ ಔಪಚಾರಿಕ, ಅನೌಪಚಾರಿಕ ಶೈಕ್ಷಣೀಕ ವಸತಿ ನಿಲಯ, ವಸತಿ ಶಾಲೆ, ಕಾಲೇಜುಗಳನ್ನು ನೊಂದಾಯುಸುವುದು ಕಡ್ಡಾಯವಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಉಪನಿರ್ದೇಶಕರ ಕಛೇರಿಗೆ ಅರ್ಜಿ ನಮೂನೆ 01 ನ್ನು ಪಡೆದು, ಪ್ರಸ್ತಾವನೆ (ನಮೂನೆ-1) ನ್ನು ಅಗಸ್ಟ್ 20, 2026 ರೊಳಗಾಗಿ ಸಲ್ಲಿಸಬೇಕು. ಸ್ವೀಕರಿಸಿದ ಅರ್ಜಿಗಳನ್ನು ತನಿಖಾ ಸಮಿತಿಯ ವರದಿ ಆದರಿಸಿ ಜಿಲ್ಲಾಧಿಕಾರಿಗಳಿಗೆ ಶಿಪಾರಸ್ಸು ಸಲ್ಲಿಸಲಾಗುವುದು. ನಂತರ ಬಂದ ಪ್ರಸ್ತವನೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

