HomeLatest Newsಸೆಪ್ಟೆಂಬರ್ ೬ ರಿಂದ ಬಿಗ್ ಬಾಸ್ ಸೀಸನ್ ೨೦ ಶುರು: 'ಕರಣ್ ಅರ್ಜುನ್' ಟ್ವಿಸ್ಟ್‌ನೊಂದಿಗೆ ಪ್ರೋಮೊ...

ಸೆಪ್ಟೆಂಬರ್ ೬ ರಿಂದ ಬಿಗ್ ಬಾಸ್ ಸೀಸನ್ ೨೦ ಶುರು: ‘ಕರಣ್ ಅರ್ಜುನ್’ ಟ್ವಿಸ್ಟ್‌ನೊಂದಿಗೆ ಪ್ರೋಮೊ ಹಂಚಿಕೊಂಡ ಸಲ್ಮಾನ್ ಖಾನ್

ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಪ್ರೇಕ್ಷಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಬಹುನಿರೀಕ್ಷಿತ ಹಿಂದಿ ಬಿಗ್ ಬಾಸ್ ಸೀಸನ್ ೨೦ರ ಪ್ರಸಾರದ ದಿನಾಂಕ ಅಧಿಕೃತವಾಗಿ ಹೊರಬಿದ್ದಿದ್ದು, ಸೆಪ್ಟೆಂಬರ್ ೬ ರಿಂದ ಜಿಯೋ ಹಾಟ್‌ಸ್ಟಾರ್ ಹಾಗೂ ಕಲರ್ಸ್ ಟಿವಿಯಲ್ಲಿ ಈ ಪ್ರದರ್ಶನ ಆರಂಭವಾಗಲಿದೆ. ಈ ಮೈಲಿಗಲ್ಲಿನ ಸೀಸನ್ ಅನ್ನು ನಿರೂಪಣೆ ಮಾಡಲಿರುವ ನಟ ಸಲ್ಮಾನ್ ಖಾನ್ ಅವರನ್ನೊಳಗೊಂಡ ಮೊದಲ ಪ್ರೋಮೊ ಬಿಡುಗಡೆಯಾಗಿದೆ.

ಬಿಡುಗಡೆಯಾಗಿರುವ ಪ್ರೋಮೊದಲ್ಲಿ ಸಲ್ಮಾನ್ ಖಾನ್ ಭವ್ಯವಾದ ಕುದುರೆಯ ಮೇಲೆ ಆಗಮಿಸುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ತಮ್ಮ ಸೂಪರ್ ಹಿಟ್ ಚಿತ್ರ ಕರಣ್ ಅರ್ಜುನ್ ವಿಷಯವನ್ನು ಪ್ರಸ್ತಾಪಿಸಿರುವ ಅವರು, ಕರಣ್ ಅರ್ಜುನ್ ಚಿತ್ರದಲ್ಲಿ ಏನಾಯಿತೋ ಅದು ಈಗ ಬಿಗ್ ಬಾಸ್‌ನಲ್ಲಿಯೂ ಆಗಲಿದೆ ಎಂದು ಹೇಳುವ ಮೂಲಕ ಹೊಸ ಕುತೂಹಲ ಮೂಡಿಸಿದ್ದಾರೆ. ಈ ಬಾರಿಯ ಸೀಸನ್‌ನಲ್ಲಿ ವಿಭಿನ್ನ ರಹಸ್ಯ ಮತ್ತು ಅಚ್ಚರಿಯ ಟ್ವಿಸ್ಟ್‌ಗಳು ಇರಲಿವೆ ಎಂದು ಸಲ್ಮಾನ್ ಖಾನ್ ತಿಳಿಸಿದ್ದಾರೆ.

ಈ ಬಾರಿ ಬಿಗ್ ಬಾಸ್ ಮನೆಯ ವಿನ್ಯಾಸದಲ್ಲಿಯೂ ಸಂಪೂರ್ಣ ಬದಲಾವಣೆ ಮಾಡಲಾಗುತ್ತಿದೆ. ಹಲವು ವರ್ಷಗಳಿಂದ ಸೆಟ್ ವಿನ್ಯಾಸಗೊಳಿಸುತ್ತಿದ್ದ ಒಮುಂಗ್ ಕುಮಾರ್ ಜೋಡಿಯ ಬದಲಿಗೆ, ಕಾಂಚನ್ ಮತ್ತು ರೂಪಾಲಿ ಎಂಬ ಕಲಾ ನಿರ್ದೇಶಕರು ಈ ಬಾರಿಯ ಮನೆಯನ್ನು ರೂಪಿಸುತ್ತಿದ್ದಾರೆ. ಇನ್ನು ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ ಜನ್ನತ್ ಜುಬೈರ್, ಫೈಸಲ್ ಶೇಖ್, ಸುನಿಲ್ ಪಾಲ್, ನಿಯಾ ಶರ್ಮಾ ಸೇರಿದಂತೆ ಪ್ರಮುಖ ತಾರೆಯರ ಹೆಸರುಗಳು ಕೇಳಿಬರುತ್ತಿದ್ದು, ಶೀಘ್ರದಲ್ಲೇ ಅಂತಿಮ ಪಟ್ಟಿ ಹೊರಬೀಳಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

https://www.instagram.com/reel/Dbm61PWsBIp

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular