ಧಾರವಾಡ : ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವಿವಿಧ ವೃತ್ತಿಗಳಲ್ಲಿ ಒಟ್ಟು 274 ಸ್ಥಾನಗಳಿಗೆ ಐಟಿಐ ತರಬೇತಿ ಪಡೆಯಲು ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ 10ನೇ ತರಗತಿ ಉತ್ತೀರ್ಣ, ಅನುತ್ತೀರ್ಣ ಅಭ್ಯರ್ಥಿಗಳು ಅರ್ಜಿಯನ್ನು https://www.cite.karnataka.gov.in ವೈಬ್‍ಸೈಟ್‍ದಲ್ಲಿ ಮೇ 08, 2026 ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಸಂಸ್ಥೆಯಲ್ಲಿ ಇಲೆಕ್ಟ್ರಿಷಿಯನ್, ಪಿಟ್ಟರ್, ಇಲೆಕ್ಟ್ರಾನಿಕ್ ಮೆಕ್ಯಾನಿಕ್, ಆರ್.ಎ.ಸಿ.ಟಿ, ಬ್ಯಾಟರಿ ಇಲೆಕ್ಟ್ರಿಕ್ ವೇಹಿಕಲ್, ಅಡ್ವಾನ್ಸ ಮ್ಯಾನ್ಯುಫ್ಯಾಕ್ಚರಿಂಗ್, ರೋಬೊಟಿಕ್ಸ ಟೆಕ್ನಾಲಜಿ, ಎಮ್.ಪಿ.ಸಿ.ಎ, ವಿ.ಎ.ಡಿ, ಎ.ಯು.ಎ.ಟಿ, ಎಂ.ಎಂ.ವಿ, ವೆಲ್ಢರ್ ವೃತ್ತಿಗಳ ತರಬೇತಿ ಲಭ್ಯವಿದ್ದು, ಇದರ ಸದುಪಯೋಗ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂ:7996603728, 7899022090 ಸಂಪರ್ಕಿಸಬಹುದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ರವಿಂದ್ರ ಪಿ. ದ್ಯಾಬೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

