ಬೆಂಗಳೂರು: ವಿವಿಧ ಇಲಾಖೆಗಳ ಒಟ್ಟು 4,723 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ #KEA ಅಧಿಸೂಚನೆಗಳನ್ನು ಹೊರಡಿಸಿದೆ.
ಇದರಲ್ಲಿ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳೂ ಸೇರಿವೆ.
KSRP ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಆಡಳಿತ ಅಧಿಕಾರಿ, ಭೂಮಾಪಕರು ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುವ ವಸತಿ ಶಾಲೆಗಳ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಲಾಗಿದೆ.
ಕಲ್ಯಾಣ ಕರ್ನಾಟಕ ವೃಂದಕ್ಕೆ ಸಂಬಂಧಿಸಿದಂತೆ ಎಲ್ಲ ಇಲಾಖೆಗಳ ಹುದ್ದೆಗಳಿಗೂ ಪ್ರತ್ಯೇಕ ಅಧಿಸೂಚನೆ ಹೊರಡಿಸಲಾಗಿದೆ.
ಕೆಲವು ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದಲೇ ಆರಂಭವಾಗಿದೆ. ಅರ್ಹರು ಅಧಿಸೂಚನೆಯನ್ನು ಒಮ್ಮೆ ಓದಿ, ಅನ್ವಯವಾಗುವ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬಹುದು.
ಅಧಿಸೂಚನೆಯಲ್ಲೇ ಪರೀಕ್ಷಾ ದಿನಾಂಕಗಳನ್ನು ಪ್ರಕಟಿಸಿದ್ದು ಆ ಪ್ರಕಾರ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ.
ಅರ್ಜಿ ಸಲ್ಲಿಸಲು ಇರುವ ಕೊನೆ ದಿನಾಂಕವನ್ನು ನೋಡಿಕೊಂಡು ನಿಗದಿತ ದಿನದೊಳಗೆ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಲು ಕೋರಲಾಗಿದೆ.
ವಿವಿಧ ಹುದ್ದೆಗಳಿಗೆ ಸಂಬಂದಿಸಿದ ಅಧಿಸೂಚನೆಗಳ ಲಿಂಕ್ ಈ ಕೆಳಗೆ ನೀಡಿದ್ದು, ಅವುಗಳ ಮೇಲೆ ಕ್ಲಿಕ್ ಮಾಡಿ ಮಾಹಿತಿ ಪಡೆಯಬಹುದು. ಅಲ್ಲದೆ KEA ವೆಬ್ ಸೈಟ್ ಗೆ ಹೋಗಿಯೂ ನೋಡಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
1) ಕೆಎಸ್ಆರ್ ಪಿ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಲಿಂಕ್
ksrpnkkkannada.pdf https://share.google/JMiKJTXmqMLPJvVj9
ಕೆಎಸ್ಆರ್ ಪಿ: ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳ ಲಿಂಕ್:
ksrpkkkannada.pdf https://share.google/2pVCx8tb5pCBYpWSe
2) ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಲಿಂಕ್
vao_rpc_notification_10072026kannada.pdf https://share.google/paO31uFaLTDxNtcNS
ಗ್ರಾಮ ಆಡಳಿತಾಧಿಕಾರಿ: ಕಲ್ಯಾಣ ಕರ್ನಾಟಕ ವೃಂದದ ಲಿಂಕ್
vao_kk_notification_10072026kannada.pdf https://share.google/3p70sUPQJmEdnvVtb
3) ವಸತಿ ಶಾಲಾ ಶಿಕ್ಷಕರ ನೇಮಕಾತಿ ಲಿಂಕ್
kries_rpc_notification_10072026kannada.pdf https://share.google/xYOCscdl78j25k1ht
ವಸತಿ ಶಾಲಾ ಶಿಕ್ಷಕರು- ಕಲ್ಯಾಣ ಕರ್ನಾಟಕ ವೃಂದದ ಲಿಂಕ್
kries_kk_notification_10072026kannada.pdf https://share.google/aZ8ud1CBILia5p2qN
4) ಸರ್ವೆ ಇಲಾಖೆ ಭೂಮಾಪಕರ ನೇಮಕಾತಿ ಲಿಂಕ್
RPC_landkannada.pdf https://share.google/mf8HxUTlCRy0Nr09N
ಭೂಮಾಪಕರು: ಕಲ್ಯಾಣ ಕರ್ನಾಟಕ ವೃಂದ
kk_landkannada.pdf https://share.googleo8r5tfdvkl

