ಮೈಸೂರು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ದಾಸೋಹ ಭವನದ ಒಳ ಆವರಣದಲ್ಲಿ ವ್ಯಕ್ತಿಯೊಬ್ಬ ಮಾಂಸಹಾರ ಸೇವಿಸಿದ್ದಾನೆ.
ಭಕ್ತರಿಗೆ ಪ್ರಸಾದ ನೀಡುವ ದಾಸೋಹ ಭವನದ ಒಳ ಪ್ರವೇಶ ದ್ವಾರದಲ್ಲಿ ಬಾಕ್ಸ್ ನಲ್ಲಿ ತಂದಿರುವ ಮಾಂಸಹಾರವನ್ನು ತಟ್ಟೆಗೆ ಹಾಕಿಕೊಂಡು ತಿನ್ನುತ್ತಿದ್ದ ವೇಳೆ ಭದ್ರತಾ ಸಿಬ್ಬಂದಿ ಗಮನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಮೈಸೂರು ಜಿಲ್ಲೆ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ಹೂವಿನ ವ್ಯಾಪಾರಿ ಪ್ರದೀಪ್ ಎಂಬಾತ ಅಪಚಾರ ಮಾಡಿದ್ದಾನೆ. ಶ್ರೀಕಂಠೇಶ್ವರ ಸನ್ನಿಧಿಯಲ್ಲಿ ಮಾಂಸಹಾರ ಸೇವನೆ ಮಾಡಿದ ಆರೋಪ ಕೇಳಿ ಬಂದಿದೆ. ದಾಸೋಹ ಭವನದ ದ್ವಾರದಲ್ಲಿ ಮಾಂಸಾಹಾರ ಸೇವನೆಯ ವಿಡಿಯೋ ವೈರಲ್ ಆಗಿದೆ. ದೇವಾಲಯದ ಅನ್ನದಾಸೋಹ ಭವನದ ಮುಖ್ಯದ್ವಾರದಲ್ಲಿ ಘಟನೆ ನಡೆದಿದೆ. ಪ್ರದೀಪನನ್ನು ಗಮನಿಸಿದ ಭದ್ರತಾ ಸಿಬ್ಬಂದಿ ತರಾಟೆಗೆ ತೆಗೆದುಕೊಂಡಿದ್ದಾರೆ. ದೇವಾಲಯದ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

