HomeEntertainment'ಪ್ರಣಯಂ' ಚಿತ್ರದ ಮತ್ತೊಂದು ಹಾಡು ರಿಲೀಸ್

‘ಪ್ರಣಯಂ’ ಚಿತ್ರದ ಮತ್ತೊಂದು ಹಾಡು ರಿಲೀಸ್

ರಾಜವರ್ಧನ್ ಮತ್ತು ನೈನಾ ಗಂಗೂಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ  ‘ಪ್ರಣಯಂ’ ಸಿನಿಮಾ ಇದೇ ಫೆಬ್ರವರಿ 9 ರಂದು ರಾಜ್ಯದ್ಯಂತ ತೆರೆ ಕಾಣಲಿದೆ.  ‘ಪ್ರಣಯಂ’ ಚಿತ್ರತಂಡ ಇಂದು ಮತ್ತೊಂದು ರೋಮ್ಯಾಂಟಿಕ್ ವಿಡಿಯೋ ಹಾಡೊಂದನ್ನು ಬಿಡುಗಡೆ ಮಾಡಿದ್ದಾರೆ. ‘ನಿನಗೆ ಸಿಗಲು ಈ ದಿನ’ ಎಂಬ ಈ ಹಾಡು ಸೋನು ನಿಗಮ್  ಧ್ವನಿಯಲ್ಲಿ ಮೂಡಿಬಂದಿದ್ದು, ಜಯಂತ್ ಕಾಯ್ಕಿಣಿ ಸಂಗೀತ ಹಾಗೂ ಚಿನ್ಮಯ್ ಬಾವಿ ಕೆರೆ ಸಾಹಿತ್ಯ ಇದೆ.

ಈಗಾಗಲೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ‘ಪ್ರಣಯಂ’ ಚಿತ್ರವನ್ನು ಮಾನ್ಸಿ ವೆಂಜರ್ಸ್ ಬ್ಯಾನರ್ ನಡಿ ಪರಮೇಶ  ನಿರ್ಮಾಣ ಮಾಡಿದ್ದು, ಗಿರೀಶ್ ಕುಮಾರ್ ಅವರ ಸಂಕಲನ ಮತ್ತು ನಾಗೇಶ್ ಆಚಾರ್ಯ ಛಾಯಾಗ್ರಹಣವಿದೆ. ಇದೊಂದು ರೋಮ್ಯಾಂಟಿಕ್ ಡ್ರಾಮ ಕಥಾ ಹಂದರ ಹೊಂದಿರುವ ಸಿನಿಮಾ ಎಂದು ಹೇಳಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular