HomeEntertainmentಇಂದು ಬಿಡುಗಡೆಯಾಗಲಿದೆ 'ಗೇಮ್ ಚೇಂಜರ್' ಚಿತ್ರದ ಮತ್ತೊಂದು ಹಾಡು

ಇಂದು ಬಿಡುಗಡೆಯಾಗಲಿದೆ ‘ಗೇಮ್ ಚೇಂಜರ್’ ಚಿತ್ರದ ಮತ್ತೊಂದು ಹಾಡು

ಶಂಕರ್ ನಿರ್ದೇಶನದ ರಾಮ್ ಚರಣ್ ನಟನೆಯ ಬಹು ನಿರೀಕ್ಷಿತ ‘ಗೇಮ್ ಚೇಂಜರ್’ ಚಿತ್ರ  ಒಂದರ ಮೇಲೊಂದು ಸಿಹಿ ಸುದ್ದಿಯನ್ನು ನೀಡುತ್ತಲೇ ಇದೆ. ಗೇಮ್ ಚೇಂಜರ್ ಚಿತ್ರತಂಡ  ಇತ್ತೀಚಿಗಷ್ಟೇ ‘ರಾ ಮಚ್ಚಾ ಮಚ್ಚಾ’ ಸಾಂಗ್  ಪ್ರೊಮೋವನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದು, ಇದೀಗ ಸಂಪೂರ್ಣ ಹಾಡನ್ನು ಇಂದು ಬಿಡುಗಡೆ ಮಾಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ. ನಕಾಶ್ ಅಜೀಜ್ ಈ ಹಾಡಿಗೆ ಧ್ವನಿಯಾಗಿದ್ದು, ಥಮನ್ ಎಸ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ಅನಂತ ಶ್ರೀರಾಮ್ ಸಾಹಿತ್ಯವಿದೆ.

ಈ ಚಿತ್ರವನ್ನು ರಾಜು, ಶಿರೀಷ್ ನಿರ್ಮಾಣ ಮಾಡಿದ್ದು, ರಾಮ್ ಚರಣ್ ಗೆ ಜೋಡಿಯಾಗಿ ಕಿಯಾರ ಅಡ್ವಾಣಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಅಂಜಲಿ, ಸಮುದ್ರಕನಿ , ಎಸ್.ಜೆ.ಸೂರ್ಯ, ಶ್ರೀಕಾಂತ್, ಸುನಿಲ್ ತಾರಾಂಗಣದಲ್ಲಿದ್ದಾರೆ, ಸಮೀರ್ ಮಹಮ್ಮದ್ ಸಂಕಲನ ಸಾಯಿ ಮಾಧವ್ ಬುರ್ರಾ ಅವರ ಸಂಭಾಷಣೆ ಹಾಗೂ ಎಸ್ ತಿರುನಾವುಕ್ಕರಸು ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular