HomeEntertainment'ಕಾಗದ' ಚಿತ್ರದಿಂದ ಬಂತು ಮತ್ತೊಂದು ಗೀತೆ

‘ಕಾಗದ’ ಚಿತ್ರದಿಂದ ಬಂತು ಮತ್ತೊಂದು ಗೀತೆ

ಸ್ಯಾಂಡಲ್ವುಡ್ ನಲ್ಲಿ ಬಿಡುಗಡೆ ಆದಾಗಿನಿಂದ ಭರ್ಜರಿ ಸೌಂಡ್ ಮಾಡುತ್ತಿರುವ ‘ಕಾಗದ’ ಚಿತ್ರ ರಾಜ್ಯದಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಫ್ಯಾಮಿಲಿ ಸಮೇತ ಬಂದು ಸಿನಿಮಾ ವೀಕ್ಷಣೆ ಮಾಡುತ್ತಿದ್ದಾರೆ. ಕಾಗದ ಚಿತ್ರತಂಡ ಇದೀಗ ‘ಪದಗಳೇ ಇರದ’ ಎಂಬ ಲಿರಿಕಲ್ ಹಾಡೊಂದನ್ನು ಜಾನಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಕಲ್ಯಾಣ್ ಜಿ ಹಾಗೂ ಅರ್ಪಿತ ವೇಣು ಈ ಹಾಡಿಗೆ ಧ್ವನಿಯಾಗಿದ್ದು, ಪ್ರದೀಪ್ ವರ್ಮ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಅಮ್ಮ ಸಿನಿ ಕ್ರಿಯೇಷನ್ ಬ್ಯಾನರ್ ನಲ್ಲಿ ಅರುಣ್ ಕುಮಾರ್ ಎ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಆದಿತ್ಯ ಕರೆಗೌಡ ಮತ್ತು ಅಂಕಿತ ಜೈರಾಮ್  ಮುಖ್ಯ ಭೂಮಿಕೆಯಲ್ಲಿದ್ದು, ನೇಹಾ ಪಾಟೀಲ್ , ಬಾಲ ರಾಜವಾಡಿ , ಅಶ್ವಥ್ ನೀನಾಸಂ, ಮಾತಾ ಕೋಪಲ, ಶಿವಮಂಜು, ಗೌತಮ್ ರಾಜ್, ಸುರೇಶ್ ಬಾಬು, ಆದರ್ಶ್, ತೇಜಶ್ರೀ ಉಳಿದ ಪಾತ್ರ ವರ್ಗದಲ್ಲಿದ್ದಾರೆ. ಪವನ್ ಗೌಡ ಸಂಕಲನ, ವೀನಸ್ ನಾಗರಾಜ ಮೂರ್ತಿ ಛಾಯಾಗ್ರಹಣ, ಅರುಣ್ ರೋಹಿತ್ ನೃತ್ಯ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular