HomeEntertainmentಹಾಡಿನ ಮೂಲಕವೇ ಹೊಸ ಹವಾ ಸೃಷ್ಟಿಸಿದ 'ಅಣ್ಣಾ ಫ್ರಮ್ ಮೆಕ್ಸಿಕೋ': ಪ್ರೇಕ್ಷಕರ ಮನ ಗೆದ್ದ ಚೇತನ್...

ಹಾಡಿನ ಮೂಲಕವೇ ಹೊಸ ಹವಾ ಸೃಷ್ಟಿಸಿದ ‘ಅಣ್ಣಾ ಫ್ರಮ್ ಮೆಕ್ಸಿಕೋ’: ಪ್ರೇಕ್ಷಕರ ಮನ ಗೆದ್ದ ಚೇತನ್ ಕುಮಾರ್ ಸಾಹಿತ್ಯ

ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ‘ಅಣ್ಣಾ ಫ್ರಮ್ ಮೆಕ್ಸಿಕೋ’ ಸಿನಿಮಾದ ‘ಪುಟ್ಟಮಲ್ಲಿ’ ಹಾಡು ಪ್ರೇಕ್ಷಕರ ಮುಂದೆ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಲಿರಿಕಲ್ ವಿಡಿಯೋ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದ್ದು, ಸಂಗೀತ ಪ್ರಿಯರನ್ನು ಬಹುವಾಗಿ ಆಕರ್ಷಿಸಿದೆ.

ಯುವ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಸಂಯೋಜಿಸಿರುವ ಈ ಗೀತೆಗೆ ಖ್ಯಾತ ಗಾಯಕ ಸಂಜಿತ್ ಹೆಗ್ಡೆ ದನಿಯಾಗಿದ್ದಾರೆ. ನಿರ್ದೇಶಕ ಹಾಗೂ ಸಾಹಿತಿ ಚೇತನ್ ಕುಮಾರ್ ಬರೆದಿರುವ ಸಾಹಿತ್ಯ ಕೇಳುಗರನ್ನು ತಕ್ಷಣವೇ ಗುನುಗುವಂತೆ ಮಾಡುವಂತಿದೆ. ನಾದಸ್ವರ ಮತ್ತು ಪರ್ಕಷನ್ ವಾದ್ಯಗಳ ಹಿತಕರ ಸಮ್ಮಿಲನ ಈ ಹಾಡಿನ ವಿಶೇಷತೆಯಾಗಿದ್ದು, ಶ್ರೋತೃಗಳಿಂದ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಐರಾ ಫಿಲ್ಮ್ಸ್ ಮತ್ತು ರಾಯಲ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ದೊಡ್ಡ ಬಜೆಟ್ ಚಿತ್ರವನ್ನು ಶಂಕರ್ ಗುರು ನಿರ್ದೇಶಿಸುತ್ತಿದ್ದಾರೆ. ಚನ್ನರಾಜ್ ಬಿ ಹಟ್ಟಿಹೊಳಿ, ಮೃಣಾಲ್, ಸತ್ಯ ರಾಯಲ ಮತ್ತು ಜಾನ್ವಿ ರಾಯಲ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅಜಯ್ ಶೆಟ್ಟಿ ಹಾಗೂ ಎಸ್ ಕೆ ರಾವ್ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ತಾಂತ್ರಿಕವಾಗಿಯೂ ಸಿನಿಮಾ ಅತ್ಯಂತ ಶ್ರೀಮಂತವಾಗಿ ಮೂಡಿಬರುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರದಲ್ಲಿ ಡಾಲಿ ಧನಂಜಯ್ ಅವರೊಂದಿಗೆ ರೀಷ್ಮಾ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಉಮಾಶ್ರೀ, ರಂಗಾಯಣ ರಘು, ನಾಗಭೂಷಣ್, ಸಾಧು ಕೋಕಿಲ ಹಾಗೂ ಪೂರ್ಣಚಂದ್ರ ಮೈಸೂರು ಮುಂತಾದ ದಂಗುಬಡಿಸುವ ತಾರಾಗಣ ಈ ಸಿನಿಮಾದಲ್ಲಿದೆ. ಪ್ರಶಾಂತ್ ರಾಜಪ್ಪ ಅವರ ಸಂಭಾಷಣೆ ಮತ್ತು ಅಜಯ್ ಕುಮಾರ್ ಸಂಕಲನ ಚಿತ್ರಕ್ಕಿದ್ದು, ಆಕ್ಷನ್ ಭಾಗಗಳನ್ನು ಅರ್ಜುನ್ ರಾಜ್, ವಿನೋದ್ ಮತ್ತು ಯೋಗಾನಂದ ವಿನ್ಯಾಸಗೊಳಿಸಿದ್ದಾರೆ. ಪ್ರಸ್ತುತ ಯೂಟ್ಯೂಬ್‌ನಲ್ಲಿ ಈ ಹಾಡು ಹೊಸ ದಾಖಲೆ ಬರೆಯುವತ್ತ ಹೆಜ್ಜೆ ಹಾಕಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular